
- 40% ಕಮಿಷನ್ ಸರ್ಕಾರದ ನಿಜ ಬಣ್ಣ ಬಯಲು
- ಬಿಜೆಪಿ ಭ್ರಷ್ಟಾಚಾರ ಒಪ್ಪಿಕೊಂಡಿದೆ ಎಂದ ಕಾಂಗ್ರೆಸ್
ಭ್ರಷ್ಟಾಚಾರ ಕಡಿಮೆ ಮಾಡಿಕೊಳ್ಳುತ್ತೇವೆ ಎನ್ನುವ ಹೇಳಿಕೆ ನೀಡುವ ಕಾನೂನು ಸಚಿವ ಮಾಧುಸ್ವಾಮಿ ಸರ್ಕಾರದ ನಿಜ ಬಣ್ಣ ಬಯಲು ಮಾಡಿದ್ದಾರೆ ಎಂದು ಕಾಂಗ್ರೆಸ್ ಲೇವಡಿ ಮಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, "40% ಸರ್ಕಾರವೆಂಬ ಕಳಂಕ್ಕೀಡಾಗಿರುವ ಬಿಜೆಪಿ ಜನರೆದುರು ತನ್ನ ನಿಜರೂಪ ತೋರಿಸಿದೆ" ಎಂದು ಕುಟುಕಿದೆ.
ಭ್ರಷ್ಟಾಚಾರ ರಹಿತವಾಗಿ ಬದುಕುವುದು ಸುಲಭವಲ್ಲ, ಭ್ರಷ್ಟಾಚಾರ ಕಡಿಮೆ ಮಾಡಲು ಪ್ರಯತ್ನಿಸುತ್ತೇವೆ - ಸಚಿವ ಮಾಧುಸ್ವಾಮಿ
— Karnataka Congress (@INCKarnataka) September 25, 2022
ಈ ಮೂಲಕ ಭ್ರಷ್ಟಾಚಾರವಿಲ್ಲದೆ ಬಿಜೆಪಿ ಸರ್ಕಾರವಿಲ್ಲ ಎಂಬುದನ್ನ ಒಪ್ಪಿದಂತಾಗಿದೆ!
ಕಡಿಮೆ ಮಾಡಲು ಯತ್ನಿಸುತ್ತೇವೆ ಎಂದರೆ ಕಮಿಷನ್ ಪರ್ಸೆಂಟೇಜ್ ಕಡಿಮೆ ಮಾಡ್ಕೊತಿವಿ ಅಂತನಾ@BJP4Karnataka?
ಇದೇನಾ #PayCM ಎಫೆಕ್ಟ್!
ಈ ಸುದ್ದಿ ಓದಿದೀರಾ? ʼಭ್ರಷ್ಟಾಚಾರʼ ಕಡಿಮೆ ಮಾಡಲು ಪ್ರಯತ್ನಿಸುತ್ತೇವೆ : ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ
ಭ್ರಷ್ಟಾಚಾರ ರಹಿತವಾಗಿ ಬದುಕುವುದು ಸುಲಭವಲ್ಲ, ಭ್ರಷ್ಟಾಚಾರ ಕಡಿಮೆ ಮಾಡಲು ಪ್ರಯತ್ನಿಸುತ್ತೇವೆ ಎಂದು ಸಚಿವ ಮಾಧುಸ್ವಾಮಿ ಹೇಳುವ ಮೂಲಕ ಭ್ರಷ್ಟಾಚಾರವಿಲ್ಲದೆ ಬಿಜೆಪಿ ಸರ್ಕಾರವಿಲ್ಲ ಎಂಬುದನ್ನ ಒಪ್ಪಿದಂತಾಗಿದೆ! ಕಡಿಮೆ ಮಾಡಲು ಯತ್ನಿಸುತ್ತೇವೆ ಎಂದರೆ ಕಮಿಷನ್ ಪರ್ಸೆಂಟೇಜ್ ಕಡಿಮೆ ಮಾಡ್ಕೊತಿವಿ ಅಂತನಾ ಬಿಜೆಪಿಗರೇ? ಇದು ಫೇ ಸಿಎಂ ಅಭಿಯಾನದ ಎಫೆಕ್ಟಾ? ಎಂದು ಕಾಂಗ್ರೆಸ್ ವ್ಯಂಗ್ಯ ಮಾಡಿದೆ.