ಅತಿವೃಷ್ಟಿ ನಿವಾರಣೆಗೆ ದೇವರ ಮೊರೆ ಹೋದ ಕಾಂಗ್ರೆಸ್: ಶೃಂಗೇರಿಯಲ್ಲಿ ವಿಶೇಷ ಪೂಜೆಗೆ ಸಿದ್ಧತೆ 

  • ಶೃಂಗೇರಿ ದೇವಸ್ಥಾನದಲ್ಲಿ ನಡೆಯಲಿದೆ ವಿಶೇಷ ಅರ್ಚನೆ
  • ಮಳೆಪೀಡಿತ ಪ್ರದೇಶಗಳ ಸಂಕಷ್ಟ ಪರಿಹಾರಕ್ಕೆ ಪೂಜೆ

ರಾಜ್ಯದಲ್ಲಿನ ಅತಿವೃಷ್ಟಿ ನಿವಾರಣೆ ಸಲುವಾಗಿ ದೇವರ ಮೊರೆಹೋಗಲು ರಾಜ್ಯ ಕಾಂಗ್ರೆಸ್ ನಿರ್ಧರಿಸಿದೆ.

ಇದರ ಭಾಗವಾಗಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಋಷ್ಯಶೃಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮುಂದಾಗಿದ್ದಾರೆ.

ಈ ಸಲುವಾಗಿ ಋಷ್ಯಶೃಂಗೇಶ್ವರ ದೇವಾಲಯದ ಆಡಳಿತ ಮಂಡಳಿಗೆ ಪತ್ರ ಬರೆದಿರುವ ಡಿ ಕೆ ಶಿವಕುಮಾರ್ ಆಗಸ್ಟ್ 9 ರಂದು ವಿಶೇಷ ಪೂಜೆ, ಅರ್ಚನೆ ನೆರವೇರಿಸುವಂತೆ ಮನವಿ ಮಾಡಿಕೊಂಡಿದ್ದಾರೆ.

Image

ಕೆಪಿಸಿಸಿ ರೈತ ಮೋರ್ಚಾದ ಅಧ್ಯಕ್ಷ ಸಚಿನ್ ಮೀಗಾ ಅವರ ಮೂಲಕ ದೇವಳದ ಆಡಳಿತ ಮಂಡಳಿಗೆ ಪತ್ರ ತಲುಪಿಸಿರುವ ಶಿವಕುಮಾರ್ ಪೂಜೆ ನೆರವೇರಿಸಿಕೊಡುವಂತೆ ಕೇಳಿಕೊಂಡಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಬಿಬಿಎಂಪಿ | ಕಾಂಗ್ರೆಸ್ ನಾಯಕರಿಗೆ ಅವಕಾಶ ತಪ್ಪಿಸಲು ಬೇಕಾಬಿಟ್ಟಿಯಾಗಿ ಮೀಸಲಾತಿ ಪ್ರಕಟ: ಡಿ ಕೆ ಶಿವಕುಮಾರ್

ಕಳೆದ ಒಂದೂವರೆ ತಿಂಗಳಿನಿಂದ ರಾಜ್ಯದಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ರೈತರು ಮತ್ತು ಕೃಷಿ ಕಾರ್ಮಿಕರು ತೀವ್ರ ತೊಂದರೆಗೆ ಸಿಲುಕಿದ್ದಾರೆ. ಅನೇಕರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದಾರೆ. ಕೃಷಿ ಜಮೀನುಗಳು ಕೊಚ್ಚಿಹೋಗಿವೆ. ರೈತರು ಬೆಳೆದ ಫಸಲು ನೀರುಪಾಲಾಗಿದೆ, ಮಳೆ ಹೀಗೆ ಮುಂದುವರಿದರೆ ರಾಜ್ಯದ ರೈತರು ಸಾರ್ವಜನಿಕರು ತೀವ್ರ ಸಂಕಷ್ಟಕ್ಕೆ ಸಿಲುಕುವ ಲಕ್ಷಣಗಳು ಗೋಚರಿಸುತ್ತಿದೆ. ಹೀಗಾಗಿ ಈ ಪೂಜೆ ನಡೆಸಿಕೊಡಬೇಕಾಗಿ ಶಿವಕುಮಾರ್ ದೇವಸ್ಥಾನಕ್ಕೆ  ಮನವಿ ಮಾಡಿದ್ದಾರೆ. 

ನಿಮಗೆ ಏನು ಅನ್ನಿಸ್ತು?
0 ವೋಟ್