ಮಳೆಹಾನಿ ಪ್ರದೇಶಗಳ ಜನರ ಸಹಕಾರಕ್ಕೆ ತೆರಳಿ: ಕಾರ್ಯಕರ್ತರಿಗೆ ಕರೆ ನೀಡಿದ ಡಿ ಕೆ ಶಿವಕುಮಾರ್ 

D K Shivakumar
  • ಜನರ ನೆರವಿಗೆ ಧಾವಿಸಲು ಕರೆ ನೀಡಿದ ಕೆಪಿಸಿಸಿ ಅಧ್ಯಕ್ಷ
  • ಮಳೆಪೀಡಿತ ಪ್ರದೇಶಗಳಿಗೆ ಭೇಟಿ ನೆರವು ನೀಡಲು ಸೂಚನೆ

ರಾಜ್ಯಾದ್ಯಂತ ಸುರಿದ ಮಳೆ ಜನಜೀವನವನ್ನು ತತ್ತರಿಸುವಂತೆ ಮಾಡಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಇತರ ಜಿಲ್ಲೆಗಳಲ್ಲೂ ಮಳೆಯ ಆರ್ಭಟ ಮಿತಿ ಮೀರಿದೆ. ವರುಣಾರ್ಭಟದಿಂದ ಕಂಗೆಟ್ಟಿರುವ ಜನರಿಗೆ ನೆರವಾಗುವಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ತನ್ನ ಕಾರ್ಯಕರ್ತರಿಗೆ ಸೂಚಿಸಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ತಮ್ಮ ಪಕ್ಷದ ವಿವಿಧ ಘಟಕಗಳ ಸದಸ್ಯರುಗಳಿಗೆ ಕರೆ ನೀಡಿ ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ತಿಳಿಸಿದ್ದಾರೆ. 

Eedina App

"ಮೈಸೂರು, ಬೆಂಗಳೂರು, ಚಾಮರಾಜನಗರ ಹಾಗೂ ರಾಜ್ಯದ ವಿವಿಧೆಡೆ ಕಳೆದ 24 ಗಂಟೆಗಳಿಂದ ಅತಿವೃಷ್ಟಿಯಿಂದಾಗಿ ಉಂಟಾಗಿರುವ ಭೀಕರ ಪರಿಸ್ಥಿತಿಯ ವಿಡಿಯೋಗಳನ್ನು ನೋಡಿ ಎದೆ ನಡುಗಿದೆ. ಸೇವೆಯಲ್ಲೇ ಕಾಂಗ್ರೆಸ್ ನಂಬಿಕೆ ಇಟ್ಟಿದೆ. ಹಾಗಾಗಿ ಕಾಂಗ್ರೆಸ್‌ ಯುವ ಘಟಕ, ಸೇವಾದಳ ಹಾಗೂ ವಿದ್ಯಾರ್ಥಿ ಘಟಕಗಳ ಜೊತೆಗೆ ಕಾರ್ಯಕರ್ತರು ಜನರಿಗೆ ನೆರವಾಗಬೇಕು ಎಂದು ಕೋರುತ್ತೇನೆ" ಎಂದು  ಡಿ ಕೆ ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

AV Eye Hospital ad
ನಿಮಗೆ ಏನು ಅನ್ನಿಸ್ತು?
0 ವೋಟ್
eedina app