ಟಿಕೆಟ್ ಯಾರಿಗೆ ಕೊಡಬೇಕೆಂದು ‘ಎಲೆಕ್ಷನ್ ಕಮಿಟಿ’ ನಿರ್ಧರಿಸುತ್ತದೆ: ಮಾಜಿ ಸಚಿವ ಬಸವರಾಜ ರಾಯರೆಡ್ಡಿ

basavaraja rayareddy
  • ಕೆಲಸ ಮಾಡದವರಿಗೆ ಟಿಕೆಟ್ ಕೊಡಲ್ಲ ಎನ್ನಲು ಡಿಕೆಶಿಗೆ ಅಧಿಕಾರ ಇದೆ
  • ಸಿದ್ದರಾಮಯ್ಯ-ಶಿವಕುಮಾರ್ ಮಾತನಾಡುವ ರೀತಿ ಭಿನ್ನವಾಗಿರುತ್ತದೆ

‘2023ರ ವಿಧಾನಸಭೆ ಚುನಾವಣೆಗೆ ಟಿಕೆಟ್ ನೀಡುವ ಬಗ್ಗೆ ಎಲೆಕ್ಷನ್ ಕಮಿಟಿ ನಿರ್ಧಾರ ಮಾಡುತ್ತದೆ. ಇಲ್ಲಿ ಒಬ್ಬರ ನಿರ್ಧಾರ ಅಂತಿಮವಲ್ಲ’ ಎಂದು ಮಾಜಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಭಾನುವಾರ ರಾಯಚೂರು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಟಿಕೆಟ್ ಹಂಚಿಕೆ ವಿಚಾರದಲ್ಲಿ ಪಕ್ಷದ ಪ್ರಮುಖ ಮುಖಂಡರು ಒಟ್ಟಿಗೆ ಕುಳಿತು ನಿರ್ಧಾರ ಮಾಡುತ್ತಾರೆ. ಡಿ ಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿದ್ದು, ಕೆಲಸ ಮಾಡದವರಿಗೆ ಟಿಕೆಟ್ ಕೊಡುವುದಿಲ್ಲ ಎನ್ನಲು ಅವರಿಗೆ ಅಧಿಕಾರವಿದೆ” ಎಂದು ಹೇಳಿದರು.

“2023ರ ವಿಧಾನಸಭಾ ಚುನಾವಣೆಗೆ ಟಿಕೆಟ್ ನೀಡುವ ವಿಚಾರದಲ್ಲಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಪಕ್ಷದ ಅಧ್ಯಕ್ಷರಾಗಿ ಶಿವಕುಮಾರ್ ಅವರಿಗೆ ಅಧಿಕಾರವಿದೆ. ಅವರ ಹೇಳಿಕೆಯಲ್ಲಿ ತಪ್ಪೇನಿಲ್ಲ” ಎಂದು ಅಭಿಪ್ರಾಯಪಟ್ಟರು.

ಈ ಸುದ್ದಿ ಓದಿದ್ದೀರಾ?: ಪ್ರಿಯಾಂಕ್ ಖರ್ಗೆ ಅವರಿಗೆ ಕಲ್ಯಾಣ ಕರ್ನಾಟಕದ ಅಭಿವೃದ್ಧಿ ಬೇಕಾಗಿಲ್ಲ: ಮುಖ್ಯಮಂತ್ರಿ ಬೊಮ್ಮಾಯಿ ಟೀಕೆ

“ಪಕ್ಷದ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಎಲೆಕ್ಷನ್ ಕಮಿಟಿ ಯಾರಿಗೆ ಟಿಕೆಟ್ ನೀಡಬೇಕೆಂದು ನಿರ್ಧಾರ ಮಾಡುತ್ತದೆ. ಇಲ್ಲಿ ಒಬ್ಬರ ನಿರ್ಧಾರ ಅಂತಿಮವಲ್ಲ. ಎಲ್ಲರೂ ಒಟ್ಟಿಗೆ ಕುಳಿತು ನಿರ್ಧಾರ ಮಾಡುತ್ತಾರೆ” ಎಂದು ಅವರು ಹೇಳಿದರು.

“ಸಿದ್ದರಾಮಯ್ಯ ಹಾಗೂ ಶಿವಕುಮಾರ್ ಮಾತನಾಡುವ ರೀತಿ ಭಿನ್ನವಾಗಿರುತ್ತದೆ. ಜೋರಾಗಿ ಮಾತನಾಡುವುದು ಡಿ ಕೆ ಶಿವಕುಮಾರ್ ಶೈಲಿ. ‘ಸಿದ್ದರಾಮೊತ್ಸವ ಯಶಸ್ವಿಯಾಯ್ತು; ಆದ್ರೆ, ಟ್ರಾಫಿಕ್ ನಿರ್ವಹಣೆ ಆಗಲಿಲ್ಲ” ಎಂದು ಸಹಜವಾಗಿಯೇ ಹೇಳಿದ್ದಾರೆ. ಅದಕ್ಕೆ ನಾವು ಏನು ಮಾಡಲು ಸಾಧ್ಯ? ಹೆಚ್ಚು ಜನ ಬಂದಿದ್ದಕ್ಕೆ ಪೊಲೀಸರಿಗೂ ಏನೂ ಮಾಡಲು ಆಗಲಿಲ್ಲ. ವಾಸ್ತವ ಸತ್ಯವನ್ನೇ ಶಿವಕುಮಾರ್ ಹೇಳಿದ್ದಾರೆ. ಸಿದ್ದರಾಮೋತ್ಸವ ಕಾರ್ಯಕ್ರಮ ವಿಫಲವಾಗಿದೆ ಎಂಬುದು ಅವರ ಅಭಿಪ್ರಾಯವಲ್ಲ”  ಎಂದು ರಾಯರೆಡ್ಡಿ ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್