ದೇವೇಗೌಡರ ಆರೋಗ್ಯ ವಿಚಾರಿಸಿದ ಮಾಜಿ ಸಿಎಂ ಯಡಿಯೂರಪ್ಪ

  • ಕಾಲುನೋವಿನಿಂದ ಬಳಲುತ್ತಿರುವ ಮಾಜಿ ಪ್ರಧಾನಿ
  • ಶೀಘ್ರ ಚೇತರಿಕೆಗಾಗಿ ಹಾರೈಸಿದ ಯಡಿಯೂರಪ್ಪ 

ಅನಾರೋಗ್ಯ ಪೀಡಿತರಾಗಿರುವ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರನ್ನು ಬಿಜೆಪಿ ಸಂಸದೀಯ ಸಮಿತಿ ಸದಸ್ಯ , ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭೇಟಿಯಾಗಿ ಆರೋಗ್ಯ ವಿಚಾರಿಸಿದರು.

ಮಂಗಳವಾರ ಸಂಜೆ ಬೆಂಗಳೂರಿನ ಪದ್ಮನಾಭ ನಗರದಲ್ಲಿನ ದೇವೇಗೌಡರ ನಿವಾಸಕ್ಕೆ ತೆರಳಿದ ಯಡಿಯೂರಪ್ಪ, ದೇವೇಗೌಡರ ಕಾಲು ಮುಟ್ಟಿ ನಮಸ್ಕರಿಸಿದರು. ಹೂಗುಚ್ಛ ನೀಡಿ ಗೌಡರನ್ನು ಅಭಿನಂದಿಸಿದ ಯಡಿಯೂರಪ್ಪ, ದೇವೇಗೌಡರ ಆರೋಗ್ಯದ  ದೇವೇಗೌಡರ ಆರೋಗ್ಯದ ಬಗ್ಗೆ ಮಾಹಿತಿ ಪಡೆದುಕೊಂಡು ಶೀಘ್ರ ಚೇತರಿಕೆ ಹಾರೈಸಿದರು. ಬಳಿಕ ಕೆಲ ಕಾಲ ಇಬ್ಬರೂ ನಾಯಕರು ರಾಜಕೀಯವನ್ನೂ ಸೇರಿದಂತೆ ಇತರ ಎಲ್ಲ ವಿಚಾರಗಳ ಬಗ್ಗೆ ಚರ್ಚೆ ನಡೆಸಿದರು.

Image

ಇಬ್ಬರು ಮುಖಂಡರ ಭೇಟಿ ವೇಳೆ ಮಾಜಿ ಸಚಿವ ಜೀವರಾಜ್ ಉಪಸ್ಥಿತರಿದ್ದರು. ಸೋಮವಾರ ಸಂಜೆ ವಿಪಕ್ಷ ನಾಯಕ ಸಿದ್ದರಾಮಯ್ಯನವರೂ ತಮ್ಮ ಸಹವರ್ತಿಗಳ ಜೊತೆಗೂಡಿ ದೇವೇಗೌಡರ ಆರೋಗ್ಯ ವಿಚಾರಿಸಿ ಬಂದಿದ್ದರು. ರಾಜಕೀಯ ವೈರುಧ್ಯಗಳನ್ನು ಮರೆತು ಮಾನವೀಯತೆ ನೆಲೆಯಲ್ಲಿ ಮಾತುಕತೆ ನಡೆಸಿರುವುದಾಗಿ ಸಿದ್ದರಾಮಯ್ಯ ಭೇಟಿ ಬಳಿಕ ಹೇಳಿದ್ದರು.

'ದೊಡ್ಡಗೌಡ'ರಿಗೆ ಆಗಿರುವುದೇನು? 

ವಯೋ ಸಹಜ ಅನಾರೋಗ್ಯ  ಎಚ್ ಡಿ ದೇವೇಗೌಡರನ್ನು ಬಾಧಿಸುತ್ತಿದೆ. ಇದರ ಜೊತೆಗೆ ಈ ಹಿಂದಿನಿಂದಲೂ ಕಾಡುತ್ತಿದ್ದ ಪಾದದ ನೋವು ಈ ಬಾರಿ ಕೊಂಚ ಜಾಸ್ತಿಯೇ ಎನ್ನುವಂತೆ ಅವರನ್ನು ಬಾಧಿಸಿದೆ. ಪಾದ ಊತದ ಕಾರಣದಿಂದ ಮಾಜಿ ಪ್ರಧಾನಿಗಳಿಗೆ ಓಡಾಡಲು ಸಾಧ್ಯವಾಗುತ್ತಿಲ್ಲ.

ಈ ಸುದ್ದಿ ಓದಿದ್ದೀರಾ? : ದೇವೇಗೌಡ, ಸಿದ್ದರಾಮಯ್ಯ ಭೇಟಿ: ಸಂಚಲನ ಮೂಡಿಸಿದ ಅಗ್ರ ನಾಯಕರ ಮಾತುಕತೆ

ಅನಿವಾರ್ಯತೆ ಇದ್ದಾಗ ವಾಕರ್ ಬಳಸುವುದನ್ನು ಹೊರತು ಪಡಿಸಿದರೆ ಉಳಿದಂತೆ ಅವರು ವಿಶ್ರಾಂತಿ ಪಡೆದುಕೊಳ್ಳುತ್ತಾರೆ. ಇವೆಲ್ಲದಕ್ಕೂ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ದೇವೇಗೌಡರು, ಮುಂದಿನ ವಾರದಿಂದ ಓಡಾಡಲು ಶಕ್ತರಾಗುತ್ತಾರೆಂದು ವೈದ್ಯರು ಹೇಳಿದ್ದಾಗಿ ಅವರ ಆಪ್ತ ಸಹಾಯಕರು ಮಾಹಿತಿ ನೀಡಿದ್ದಾರೆ. ಗಣೇಶ ಚತುರ್ಥಿ ಬಳಿಕ ಗೌಡರ ಆರೋಗ್ಯದಲ್ಲಿ ಈ ಏರುಪೇರು ಕಾಣಿಸಿಕೊಂಡಿದೆ ಎನ್ನುವುದು ಅವರ ಆಪ್ತರ ಹೇಳಿಕೆ.

ನಿಮಗೆ ಏನು ಅನ್ನಿಸ್ತು?
0 ವೋಟ್