ಒಂದು ನಿಮಿಷದ ಓದು| ಬೆಳೆ ಪರಿಹಾರ ನೀಡುವಂತೆ ಕಂದಾಯ ಸಚಿವರಿಗೆ ಎಂ ಪಿ ಕುಮಾರಸ್ವಾಮಿ ಪತ್ರ

M P Kumaraswamy

ರೈತರು ಬೆಳೆದ ಬೆಳೆಯು ತೀವ್ರ ಮಳೆಯಿಂದ ಹಾನಿಯಾಗಿ ನಷ್ಟವುಂಟಾಗಿದೆ. ಆದ್ದರಿಂದ ಕೂಡಲೇ ಪರಿಹಾರಧನ ಮಂಜೂರು ಮಾಡಲು ಆದೇಶ ನೀಡುಬೇಕೆಂದು ಒತ್ತಾಯಿಸಿ ಮೂಡಿಗೆರೆ ಬಿಜೆಪಿ ಶಾಸಕ ಎಂ ಪಿ ಕುಮಾರಸ್ವಾಮಿ ಕಂದಾಯ ಸಚಿವ ಆರ್ ಅಶೋಕ್ ಅವರಿಗೆ ಪತ್ರ ಬರೆದಿದ್ದಾರೆ.

ಆ.11ರಂದು ಪತ್ರ ಬರೆದಿರುವ ಅವರು, “ಚಿಕ್ಕಮಗಳೂರು ಜಿಲ್ಲೆ, ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಇತ್ತೀಚಿಗೆ ಬಿದ್ದ ಭಾರಿ ಮಳೆಯಿಂದ ಈ ಭಾಗದ ರೈತಾಪಿ ವರ್ಗದವರುಗಳು ಬೆಳೆದ ಬೆಳೆಯೆಲ್ಲವೂ ನೀರಿನಲ್ಲಿ ಮುಳುಗಿ ಕೋಟ್ಯಂತರ ರೂ  ನಷ್ಟವಾಗಿದೆ. ಇದರಿಂದ ರೈತಾಪಿ ವರ್ಗದವರು ಆರ್ಥಿಕ ಸಂಕಷ್ಟದಲ್ಲಿದ್ದು, ಇವರುಗಳೆಲ್ಲರಿಗೂ ಸರ್ಕಾರದ ವತಿಯಿಂದ ಬೆಳೆ ಪರಿಹಾರವನ್ನು ಮಂಜೂರು ಮಾಡುವುದು ಅಗತ್ಯವಾಗಿದೆ. ಆದಷ್ಟು ಬೇಗನೇ ಬೆಳೆನಷ್ಟ ಪರಿಹಾರವನ್ನು ಮಂಜೂರು ಮಾಡಲು ಆದೇಶ ನೀಡಿ ಆರ್ಥಿಕ ಸಂಕಷ್ಟದಲ್ಲಿರುವ ರೈತರಿಗೆ ಅನುಕೂಲ ಮಾಡಿಕೊಡಲು ತಮ್ಮಲ್ಲಿ ಕೋರುತ್ತೇನೆ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Image

ಆ.8ರಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ್ದ ಕಂದಾಯ ಸಚಿವ ಆರ್ ಅಶೋಕ್, ಅತಿವೃಷ್ಟಿ ಹಾಗೂ ಪ್ರವಾಹದಿಂದ ಸಂಕಷ್ಟಕ್ಕೊಳಗಾಗಿರುವ ಜನರಿಗೆ ಪರಿಹಾರ ಘೋಷಣೆ ಮಾಡಲಾಗಿದ್ದು, ಮನೆ ಹಾನಿಗೆ ₹5 ಲಕ್ಷ ಮತ್ತು ಬೆಳೆ ಹಾನಿಗೆ ₹13 ಸಾವಿರ ನೆರವು ನೀಡಲಾಗುವುದು” ಎಂದು ಹೇಳಿದ್ದರು. ಮನೆ ಹಾನಿ, ಬೆಳೆ ಹಾನಿ, ಮತ್ತು ಪ್ರವಾಹ ಸಂತ್ರಸ್ತರಿಗೂ ಪರಿಹಾರ ಘೋಷಣೆ ಮಾಡಲಾಗಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್