ಜನ ಹುಚ್ಚುನಾಯಿಗೆ ಹೊಡೆದಂತೆ ಹೊಡೆದರು, ಗೃಹಸಚಿವರು ಸೌಜನ್ಯಕ್ಕೂ ಕೇಳಲಿಲ್ಲ. ನಾನು ದಲಿತ ಎಂದೇ ಈ ನಿರ್ಲಕ್ಷ್ಯ: ಎಂ ಪಿ ಕುಮಾರಸ್ವಾಮಿ

MP Kumaraswamy
  • 'ಒಬ್ಬ ಶಾಸಕನಾಗಿ ನನಗೆ ಹೀಗಾದರೆ ಜನಸಾಮಾನ್ಯರ ಪಾಡೇನು?'
  • 'ಪ್ರಾಣಪಾಯವಿದ್ದರೂ ಸ್ಥಳಕ್ಕೆ ಭೇಟಿ ಮಾಡದ ಮಂಗಳೂರು ಐಜಿ'

“ನನ್ನ ಮೇಲೆ ಹಲ್ಲೆ ನಡೆದು ಹಲವು ದಿನಗಳು ಕಳೆದರೂ ಸೌಜನ್ಯಕ್ಕಾದರೂ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಮಾತನಾಡಿಸಲಿಲ್ಲ. ಒಬ್ಬ ಶಾಸಕನಾಗಿ ನನಗೇ ಹೀಗಾದರೆ ಜನಸಾಮಾನ್ಯರ ಪಾಡೇನು” ಎಂದು ಮೂಡಿಗೆರೆ ಶಾಸಕ ಎಂ ಪಿ ಕುಮಾರಸ್ವಾಮಿ ತಮ್ಮ ಅಸಹಾಯಕತೆ ತೋಡಿಕೊಂಡಿದ್ದಾರೆ. ನಾನು ದಲಿತ ಎಂದೇ ಈ ರೀತಿ ನನ್ನ ಬಗ್ಗೆ ಗೃಹ ಸಚಿವರು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, “ನಾವೇನು ಜನರಿಂದ ಹೊಡೆಸಿಕೊಳ್ಳೋಕೆ ಇರೋದಾ!? ನಾನೇನು ಕಾಡಾನೆಗಳನ್ನು ಸಾಕೋನಾ ಅಥವಾ ಕಾನೂನು ಮಾಡೋನಾ ಜನ ನನಗೆ ಹಾಗೆ ಹೊಡೆಯಲು?” ಎಂದು ಪ್ರಶ್ನಿಸಿದ್ದಾರೆ.

Eedina App

“ಶಾಸಕನಾದ ಬಳಿಕ ನನ್ನ ವಿಧಾನಸಭಾ ಕ್ಷೇತ್ರಕ್ಕೆ ಸಾಕಷ್ಟು ಕೆಲಸ ಮಾಡಿದ್ದೇನೆ. ಗೃಹ ಸಚಿವರ ನಡೆ ಸಾಕಷ್ಟು ನೋವುಂಟು ಮಾಡಿದೆ. ಗೃಹ ಸಚಿವರೆ ಶಾಸಕರ ಪರ ನಿಂತಿಲ್ಲ ಎಂದರೆ ನೋವಾಗುತ್ತದೆ” ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹುಚ್ಚುನಾಯಿಗೆ ಹೊಡೆದಂತೆ ಹೊಡೆದರು

AV Eye Hospital ad

“ಮೊನ್ನೆ ನಡೆದ ಪ್ರಕರಣ ಕುರಿತ ವಿಡಿಯೋಗಳು ಪೋಲಿಸ್ ಕ್ಯಾಮರಾದಲ್ಲಿ ಸೆರೆಯಾಗಿದೆ. ವಾಟ್ಸಪ್ನಲ್ಲಿ ಕೂಡ ವಿಡಿಯೋಗಳು ಹರಿದಾಡಿವೆ. ಹುಲ್ಲೆಮನೆ ಕುಂದೂರು ಗ್ರಾಮದಲ್ಲಿ ರೈತ ಮಹಿಳೆ ಶೋಭಾ ಕಾಡಾನೆ ದಾಳಿಗೆ ಬಲಿಯಾಗಿದ್ದರು. ಅವರ ಕುಟುಂಬಕ್ಕೆ ಸಾಂತ್ವನ ಹೇಳಲು ಸ್ಥಳಕ್ಕೆ ಹೋಗಿದ್ದೆ. ಆದರೆ, ಅಲ್ಲಿ ಕೆಲವು ಕಿಡಿಗೇಡಿಗಳು ನನಗೆ ಅವಕಾಶ ಕೊಡದೆ, ಹಲ್ಲೆ ಮಾಡಲು ಮುಂದಾದರು. ಅವರು 600 ಕ್ಕಿಂತ ಹೆಚ್ಚು ಜನರಿದ್ದರು. ಬಳಿಕ ಪೋಲಿಸರು ತಮ್ಮ ಜೀಪಿಗೆ ನನ್ನನ್ನು ಹತ್ತಿಸಿದರು. ಹುಚ್ಚು ನಾಯಿಯನ್ನು ಅಟ್ಟಾಡಿಸಿಕೊಂಡು ಬಂದ ಹಾಗೆ ನನ್ನನ್ನು ಅಟ್ಟಾಡಿಸಿಕೊಂಡು ಬಂದರು. ನನಗೆ ಅನುಕಂಪ ಬೇಕಾಗಿಲ್ಲ, ಆದರೆ ಕೆಲವರ ಮಾತು ಬೇಸರವಾಗಿದೆ” ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಆನೆ ದಾಳಿಗೆ ಮಹಿಳೆ ಮೃತ್ಯು : ತಡವಾಗಿ ಬಂದದ್ದಕ್ಕೆ ಆಕ್ರೋಶಿತ ಗ್ರಾಮಸ್ಥರಿಂದ ಬಿಜೆಪಿ ಶಾಸಕನ ಮೇಲೆ ಹಲ್ಲೆ; ಆರೋಪ

“ನನಗೆ ಪ್ರಾಣಾಪಾಯ ಇದ್ದರೂ ಮಂಗಳೂರು ಐಜಿ ಸ್ಥಳಕ್ಕೆ ಭೇಟಿ ಮಾಡಿಲ್ಲ. ಮಂಗಳೂರು ಐಜಿ ಒಬ್ಬ ಭ್ರಷ್ಟ ಅಧಿಕಾರಿ, ಹಣದ ಆಸೆಗೆ ಬೇಕಾದವರನ್ನು ಟ್ರಾನ್ಸಫರ್ ಮಾಡ್ತಾರೆ. ಮುಖ್ಯಮಂತ್ರಿ ಬಳಿ ಈ ಬಗ್ಗೆ ಮಾತನಾಡುತ್ತೇನೆ. ಬೆಳಗಾವಿಯ ಅಧಿವೇಶನದಲ್ಲಿ ಕೂಡ ಈ ಬಗ್ಗೆ ಪ್ರಸ್ತಾಪ ಮಾಡುತ್ತೇನೆ” ಎಂದು ಶಾಸಕ ಎಂ ಪಿ ಕುಮಾರಸ್ವಾಮಿ ತಿಳಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
10 ವೋಟ್
eedina app