ಜಿಲ್ಲಾಡಳಿತಗಳ ಮೂಲಕ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿ: ಸರ್ಕಾರಕ್ಕೆ ರಾಜ್ಯಪಾಲ ಗೆಹ್ಲೋಟ್ ನಿರ್ದೇಶನ

  • ಬೆಂಗಳೂರಿನ ಸ್ವಾಂತಂತ್ರ್ಯ ಯೋಧರನ್ನು ಸನ್ಮಾನಿಸಲಿರುವ ರಾಜ್ಯಪಾಲರು 
  • ಮಲ್ಲೇಶ್ವರಂನ ವಿ. ನಾಗಭೂಷಣ ರಾವ್, ಹಲಸೂರು ಆರ್. ನಾರಾಯಣಪ್ಪಗೆ ಗೌರವ

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರನ್ನು ಅವರ ಮನೆಗಳಿಗೇ ತೆರಳಿ ಜಿಲ್ಲಾಡಳಿತದ ಮೂಲಕ ಸನ್ಮಾನಿಸಲು ಕ್ರಮ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಸೂಚಿಸಿದ್ದಾರೆ.

ಈ ಸಂಬಂಧ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ರಾಜ್ಯಪಾಲರು ಸೂಚನೆ ರವಾನಿಸಿದ್ದಾರೆ. ಇದರ ಜೊತೆ ಜೊತೆಗೆ ಸಾಂಕೇತಿಕವಾಗಿ ತಾವೂ ಕಾರ್ಯಕ್ರಮದಲ್ಲಿ ಭಾಗಿಯಾಗುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ.

ಇದರ ಭಾಗವಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಬೆಂಗಳೂರು ನಗರದ ಇಬ್ಬರು ಸ್ವಾತಂತ್ರ್ಯ ಹೋರಾಟಗಾರರ ಮನೆಗಳಿಗೆ ತೆರಳಿ ಹಿರಿಯ ಚೇತನಗಳನ್ನು ಸನ್ಮಾನಿಸಲಿದ್ದಾರೆ.

ಈ ಸುದ್ದಿ ಓದಿದ್ದೀರಾ? : 'ಹರ್ ಘರ್ ತಿರಂಗಾ' ಅಭಿಯಾನ ಯಶಸ್ವಿಗೊಳಿಸಿ :ರಾಜ್ಯ ಸರ್ಕಾರಿ ನೌಕರರಿಗೆ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಕರೆ

'ಬ್ರಿಟೀಷರೇ, ಭಾರತ ಬಿಟ್ಟು ತೊಲಗಿ' ಸಂಸ್ಮರಣಾ ದಿನವಾದ ಆಗಸ್ಟ್ 9 ರಂದು ಬೆಳಿಗ್ಗೆ 10-30 ಗಂಟೆಗೆ ನಗರದ ಮಲ್ಲೇಶ್ವರಂ ಬಡಾವಣೆಯಲ್ಲಿರುವ ವಿ. ನಾಗಭೂಷಣ ರಾವ್ ಅವರ ಮನೆಗೆ ತೆರಳಿ ರಾಜ್ಯಪಾಲರು ಸನ್ಮಾನಿಸಿ ಗೌರವ ಅರ್ಪಿಸಲಿದ್ದಾರೆ. ಹಾಗೆಯೇ ಅದೇ ದಿನ ಬೆಳಿಗ್ಗೆ 11-00 ಗಂಟೆಗೆ ಹಲಸೂರು ಬಡಾವಣೆಯಲ್ಲಿರುವ ಆರ್. ನಾರಾಯಣಪ್ಪ ಅವರ ಮನೆಗೆ ತೆರಳಿ ಅವರನ್ನು ಸನ್ಮಾನಿಸಲಿದ್ದಾರೆ.        

ನಿಮಗೆ ಏನು ಅನ್ನಿಸ್ತು?
0 ವೋಟ್
eedina app