'ಕಚ್ಚೆ ಹರುಕ' ಹೇಳಿಕೆ | ಕ್ಷಮೆ ಕೇಳದಿದ್ರೆ ಮನೆಗೆ ಹರಕು ಕಚ್ಚೆ ಬರುತ್ತೆ ಹುಷಾರ್: ಸಿ ಟಿ ರವಿಗೆ ಕಿಸಾನ್ ಕಾಂಗ್ರೆಸ್ ಎಚ್ಚರಿಕೆ

  • ಚಿಕ್ಕಮಗಳೂರು ಕಾಂಗ್ರೆಸ್ ಕಿಸಾನ್ ಘಟಕದಿಂದ ಹೋರಾಟಕ್ಕೆ ಕರೆ
  • ಕ್ಷಮೆ ಕೇಳದಿದ್ದಲ್ಲಿ ರವಿಯವರ ನಿವಾಸಕ್ಕೆ ಹರಕು ಕಚ್ಚೆ ಪಾರ್ಸೆಲ್; ಎಚ್ಚರಿಕೆ

ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡುವ ಭರದಲ್ಲಿ 'ಕಚ್ಚೆ ಹರುಕ' ಎಂಬ ಪದ ಪ್ರಯೋಗ ಮಾಡಿದ್ದ ಬಿಜೆಪಿ ಶಾಸಕ ಸಿ ಟಿ ರವಿ ವಿರುದ್ಧ ಪ್ರತಿಭಟನೆ ಆರಂಭವಾಗಿದೆ. 

ಸಿ ಟಿ ರವಿ ಪದ ಪ್ರಯೋಗದ ಬಗ್ಗೆ ಬಿಜೆಪಿ ಶಾಸಕರೂ ಅಸಮಾಧಾನ ವ್ಯಕ್ತಪಡಿಸಿದ್ದು, ಬಳಸುವ 'ಭಾಷೆ ಮೇಲೆ ನಿಗಾ ಇರಲಿ' ಎಂದು ತಾಕೀತು ಮಾಡಿದ್ದಾರೆ. "ರಾಜಕಾರಣ ಬೇರೆ, ವ್ಯಕ್ತಿ ನಿಂದನೆ ಬೇರೆ. ಒಂದಕ್ಕೊಂದು ತಳುಕು ಹಾಕಿಕೊಳ್ಳದಂತೆ ಸಾರ್ವಜನಿಕ ಜೀವನ ನಿಭಾಯಿಸಬೇಕು. ವ್ಯಕ್ತಿ ಗೌರವ ಕಾಪಾಡಬೇಕು, ಅದನ್ನು ಮೊದಲು ಶಾಸಕರು ರೂಢಿಸಿಕೊಳ್ಳುವಂತಾಗಬೇಕು" ಎಂದು ಕಿವಿಮಾತು ಹೇಳಿದ್ದಾರೆ.

ಮತ್ತೊಂದು ಕಡೆ ಸಿ ಟಿ ರವಿ ನಡೆ ಖಂಡಿಸಿ ಕಾಂಗ್ರೆಸ್ ಕಿಸಾನ್ ಘಟಕ, ಹೋರಾಟಕ್ಕೆ ಕರೆ ನೀಡಿದೆ. ಅದಕ್ಕೂ ಮುನ್ನ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗೆ ಎಚ್ಚರಿಕೆ ಸಂದೇಶ ರವಾನಿಸಿದೆ.

ಈ ಸುದ್ದಿ ಓದಿದ್ದೀರಾ? ಕೊನೆಗೂ ತೇಜಸ್ವಿ ಸೂರ್ಯ ಮನೆಗೆ ತಲುಪಿದ ಕಾಂಗ್ರೆಸ್ 'ದೋಸೆ ಪಾರ್ಸೆಲ್': ಕಾದು ಕುಳಿತಿದ್ದ ಬಿಜೆಪಿ ಕಾರ್ಯಕರ್ತರು!

"ಸಿದ್ದರಾಮಯ್ಯ ಬಗ್ಗೆ ಕೀಳು ಮಟ್ಟದ ಪದ ಪ್ರಯೋಗ ಮಾಡಿದ ಸಿ ಟಿ ರವಿಯವರೇ, ನೀವು ಬೇಷರತ್ ಆಗಿ ವಿಪಕ್ಷ ನಾಯಕರು ಹಾಗೂ ನಾಡಿನ ಜನರ ಕ್ಷಮೆ ಕೇಳಬೇಕು" ಎಂದು ಕಾಂಗ್ರೆಸ್ ಕಿಸಾನ್ ಘಟಕದ ರಾಜ್ಯಾಧ್ಯಕ್ಷ ಸಚಿನ್ ಮೀಗಾ ಆಗ್ರಹಿಸಿದ್ದಾರೆ. 

"ಕ್ಷಮೆ ಕೇಳದಿದ್ದಲ್ಲಿ ರವಿಯವರ ನಿವಾಸಕ್ಕೆ ಹರಕು ಕಚ್ಚೆ ಪಾರ್ಸೆಲ್ ಮಾಡಬೇಕಾಗತ್ತೆ, ಹುಷಾರ್" ಎಂದು ಕಿಸಾನ್ ಘಟಕ ತಿಳಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್