
- ಸರಣಿ ಟ್ವೀಟ್ ಮಾಡಿ ‘ಸ್ವಾಭಿಮಾನವಿರಲಿ’ ಎಂದ ಕಾಂಗ್ರೆಸ್
- ರಮೇಶ್ ಜಾರಕಿಹೊಳಿ ಅಕ್ರಮದ ವಿರುದ್ಧ ತನಿಖೆಗೆ ಆಗ್ರಹ
‘ದಲಿತ ವಿರೋಧಿ ಕಾಂಗ್ರೆಸ್’ ಎಂಬ ಬಿಜೆಪಿ ಸರಣಿ 'ಟ್ವೀಟ್ಗೆ' ಪ್ರತಿಯಾಗಿ ಕಾಂಗ್ರೆಸ್ ಕೂಡ 'ಟ್ವೀಟ್ ವಾರ್' ಆರಂಭಿಸಿದೆ.
ರಾಜ್ಯ ಬಿಜೆಪಿ ಟ್ವಿಟ್ಟರ್ ಖಾತೆಯಲ್ಲಿನ ಹಿಂದಿ, ರಮೇಶ್ ಜಾರಕಿಹೊಳಿ ಅಕ್ರಮ ಮತ್ತು ‘ಅಗ್ನಿಪಥ್’ ವಿಚಾರಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸೋಮವಾರ ಸರಣಿ ಟ್ವೀಟ್ ಮಾಡಿದೆ.
“ಕನ್ನಡ ನಾಡು-ನುಡಿಯ ಬಗ್ಗೆ ಕಿಂಚಿತ್ತೂ ಗೌರವಿಲ್ಲದ ಭಾರತೀಯ ಜನತಾ ಪಕ್ಷ (ಬಿಜೆಪಿ), ತನ್ನ ಗುಲಾಮಗಿರಿಯ ಮನಸ್ಥಿತಿಯನ್ನು ಮತ್ತೊಮ್ಮೆ ತೆರೆದಿಟ್ಟಿದೆ. ಕರ್ನಾಟಕದ ಬಿಜೆಪಿ ಟ್ವಿಟರ್ ಹ್ಯಾಂಡಲ್ನಲ್ಲಿ ಹಿಂದಿ ರಾರಾಜಿಸುತ್ತಿದೆ. ಇದು ನಾಗಪುರದ ಅದೇಶವೇ ಅಥವಾ ಹೈಕಮಾಂಡ್ ಅದೇಶವೇ, ಈ ಪರಿಯ ಗುಲಾಮಗಿರಿ ಒಳ್ಳೆಯದಲ್ಲ! ಸ್ವಲ್ಪವಾದರೂ ಸ್ವಾಭಿಮಾನವಿರಲಿ!” ಎಂದು ವ್ಯಂಗ್ಯವಾಡಿದೆ.
ಕನ್ನಡ ನಾಡು-ನುಡಿಯ ಬಗ್ಗೆ ಕಿಂಚಿತ್ತೂ ಗೌರವಿಲ್ಲದ ಬಿಜೆಪಿ ತನ್ನ ಗುಲಾಮಗಿರಿಯ ಮನಸ್ಥಿತಿಯನ್ನು ಮತ್ತೊಮ್ಮೆ ತೆರೆದಿಟ್ಟಿದೆ.
— Karnataka Congress (@INCKarnataka) June 27, 2022
ಕರ್ನಾಟಕದ ಬಿಜೆಪಿ ಟ್ವಿಟರ್ ಹ್ಯಾಂಡಲ್ನಲ್ಲಿ ಹಿಂದಿ ರಾರಾಜಿಸುತ್ತಿದೆ.
ಇದು ನಾಗಪುರದ ಅದೇಶವೇ, ಅಥವಾ ಹೈಕಮಾಂಡ್ ಅದೇಶವೇ @BJP4Karnataka?
ಈ ಪರಿಯ ಗುಲಾಮಗಿರಿ ಒಳ್ಳೆಯದಲ್ಲ! ಸ್ವಲ್ಪವಾದರೂ ಸ್ವಾಭಿಮಾನವಿರಲಿ! pic.twitter.com/dfTfhiCPjV
ರಮೇಶ್ ಜಾರಕಿಹೊಳಿ ಅಕ್ರಮ ತನಿಖೆಯಾಗಲಿ
“ರಮೇಶ್ ಜಾರಕಿಹೊಳಿ ಮೇಲೆ ಐಟಿ, ಇಡಿ, ಸಿಬಿಐಗಳು ದಾಳಿ ಮಾಡಲು, ವಿಚಾರಣೆ ಮಾಡಲು ಭಯಪಡುತ್ತವೆಯೇ. ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಹೆಸರಲ್ಲಿ ನೂರಾರು ಕೋಟಿ ರೂಪಾಯಿ ಅಕ್ರಮ ಮೇಲ್ನೋಟಕ್ಕೆ ಕಂಡುಬಂದರೂ ಬಿಜೆಪಿ ತನಿಖೆ ನಡೆಸದಿರುವುದೇಕೆ? ಇಡಿ(ಜಾರಿ ನಿರ್ದೇಶನಾಲಯ) ನಿಷ್ಪಕ್ಷಪಾತವಾಗಿ ಇರುವುದು ನಿಜವೇ ಆಗಿದ್ದರೆ ಕೂಡಲೇ ಅವರನ್ನು ಬಂಧಿಸಿ, ತನಿಖೆ ನಡೆಸಲಿ” ಎಂದು ಆಗ್ರಹಿಸಿದೆ.
ಅಗ್ನಿಪಥ್ ಯೋಜನೆ ಯುವಕರನ್ನು ದಿಕ್ಕು ತಪ್ಪಿಸುತ್ತದೆ
“ಯುವಕರು ಉನ್ನತ ಶಿಕ್ಷಣ ಅಥವಾ ಉದ್ಯೋಗ, ಇವೆರಡನ್ನು ಆಯ್ಕೆ ಮಾಡಿಕೊಳ್ಳುವ ವಯಸ್ಸಿನಲ್ಲಿ ಅವರನ್ನು ಅಗ್ನಿಪಥ್ ಅತಂತ್ರರನ್ನಾಗಿಸುತ್ತದೆ. ಇತ್ತ ವಿದ್ಯೆಯೂ ಇಲ್ಲ, ಅತ್ತ ಉದ್ಯೋಗವೂ ಇಲ್ಲ. ಯುವ ಸಮುದಾಯವನ್ನು ದಿಕ್ಕು ತಪ್ಪಿಸುವ, ಅವರ ಬದುಕನ್ನು ಆತಂತ್ರಗೊಳಿಸುವ ಅಗ್ನಿಪಥ್ ಯೋಜನೆಯನ್ನು ಸರ್ಕಾರ ಹಿಂಪಡೆಯಲೇಬೇಕು” ಎಂದು ಆಗ್ರಹ ಮಾಡಿದೆ.
ಈ ಸುದ್ದಿ ಓದಿದ್ದೀರಾ?: ದಲಿತ ವಿರೋಧಿ ಕಾಂಗ್ರೆಸ್ | ಸರಣಿ ಟ್ವೀಟ್ ಮಾಡಿ ಡಿ ಕೆ ಶಿವಕುಮಾರ್ ಕಾಲೆಳೆದ ಬಿಜೆಪಿ
“ದೇಶಭಕ್ತ ಯುವಕರು ದೇಶಸೇವೆ ಮಾಡುವ ಅದಮ್ಯ ಉತ್ಸಾಹದೊಂದಿಗೆ ಹಾಗೂ ಸುಭದ್ರ ಬದುಕು ಕಟ್ಟಿಕೊಳ್ಳುವ ಕನಸಿನೊಂದಿಗೆ ಸೈನ್ಯ ಸೇರಬಯಸಿದ್ದರು. ಆದರೆ, ಸರ್ಕಾರ ಅವರ ಮಹತ್ವಾಕಾಂಕ್ಷೆಗೆ ಅಗ್ನಿಪಥ್ ಮೂಲಕ ಮಣ್ಣು ಹಾಕಿದೆ. ಅಗ್ನಿವೀರರು ಎಂದಿಗೂ ಯೋಧರೆನಿಸಿಕೊಳ್ಳುವುದಿಲ್ಲ ಎಂಬ ಕಹಿ ಸತ್ಯವನ್ನು ಸರ್ಕಾರ ಮುಚ್ಚಿಟ್ಟಿದೆ” ಎಂದು ಟ್ವೀಟ್ ಮಾಡಲಾಗಿದೆ.