'ಅಪ್ಪು'ಗೆ ಕರ್ನಾಟಕ ರತ್ನ ಪ್ರದಾನ | ರಜನಿಕಾಂತ್, ಜ್ಯೂ.ಎನ್‌ಟಿಆರ್ ಉಪಸ್ಥಿತಿ: ಸಿಎಂ ಬೊಮ್ಮಾಯಿ

  • ನವೆಂಬರ್ 1ರಂದು ಪುನೀತ್‌ಗೆ 'ಕರ್ನಾಟಕ ರತ್ನ' ಪ್ರದಾನ
  • ರಾಜ್ಯೋತ್ಸವದ ತಿಂಗಳಲ್ಲಿ ಕನ್ನಡ ಕಟ್ಟುವ ಕಾಯಕವಾಗಲಿ

ನವೆಂಬರ್ ಒಂದರಂದು ದಿವಂಗತ ನಟ ಪುನೀತ್ ರಾಜ್‌ಕುಮಾರ್ ಅವರಿಗೆ ನೀಡಲಾಗುತ್ತಿರುವ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಜ್ಯೂ. ಎನ್ ಟಿ ಆರ್ ಉಪಸ್ಥಿತರಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. 

ಶುಕ್ರವಾರ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಜರುಗಿದ ಕೋಟಿ ಕಂಠ ಗಾಯನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಅತಿ ಚಿಕ್ಕ ವಯಸ್ಸಿನಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಪಡೆಯುತ್ತಿರುವವರು ಪುನೀತ್ ರಾಜ್‌ಕುಮಾರ್. ನವೆಂಬರ್ 1ರಂದು ನಡೆಯುವ ಈ ಕಾರ್ಯಕ್ರಮಕ್ಕೆ ರಜನಿಕಾಂತ್, ಜ್ಯೂ. ಎನ್‌ಟಿಆರ್‌ ಅವರಿಗೆ ಆಹ್ವಾನ ನೀಡಲಾಗಿದೆ. ಅವರು ಕೂಡ ಭಾಗಿಯಾಗುತ್ತಾರೆ. ಇವರೊಂದಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಕಂಬಾರ ಹಾಗೂ ರಾಜ್‌ಕುಮಾರ್ ಕುಟುಂಬದವರು ಭಾಗಿಯಾಗುತ್ತಾರೆ. ವಿಧಾನಸೌಧದ ಮೆಟ್ಟಿಲುಗಳ ಮೇಲೆ ಸಮಾರಂಭ ಜರುಗಲಿದೆ" ಎಂದು ಅವರು ತಿಳಿಸಿದರು. 

ಈ ಸುದ್ದಿ ಓದಿದ್ದೀರಾ? ಜಾತ್ಯತೀತ ಜನತಾ ದಳದ ರಾಷ್ಟ್ರೀಯ ಅಧ್ಯಕ್ಷರಾಗಿ ಎಚ್ ಡಿ ದೇವೇಗೌಡ ಅವಿರೋಧ ಆಯ್ಕೆ

ಕೋಟಿ ಕಂಠ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಮುಖ್ಯಮಂತ್ರಿಗಳು, "ಇಂದು ನಾಡಿನೆಲ್ಲೆಡೆ ಕನ್ನಡ ಬಾವುಟ ರಾರಾಜಿಸುತ್ತಿದೆ. ಕನ್ನಡತನ ಮೆರೆಯುತ್ತಿದೆ. ಕೋಟಿ ಕಂಠ ಗಾಯನವೂ ಯಶಸ್ವಿಯಾಗಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೇ ಇನ್ನೂ ಹಲವೆಡೆ ಕಾರ್ಯಕ್ರಮಕ್ಕಾಗಿ ಆಯ್ಕೆ ಮಾಡಲಾಗಿದ್ದ 6 ಹಾಡುಗಳನ್ನು ಹಾಡಲಾಗಿದೆ" ಎಂದು ಹೇಳಿದರು. 

AV Eye Hospital ad

"ಕನ್ನಡ ರಾಜ್ಯೋತ್ಸವದ ಹೊತ್ತಲ್ಲಿ ಕನ್ನಡ ಕಟ್ಟುವ ಕೆಲಸ ಮಾಡೋಣ, ಎಲ್ಲರೂ ಇದರಲ್ಲಿ ತೊಡಗಿಸಿಕೊಂಡು ಕನ್ನಡ ಪ್ರೇಮ ಮೆರೆಯಿರಿ" ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app