ಕೋಲ ಕಟ್ಟುವವರಿಗೆ, ದೈವ ನರ್ತನ ಮಾಡುವವರಿಗೆ ಎರಡು ಸಾವಿರ ಮಾಸಾಶನ: ರಾಜ್ಯ ಸರ್ಕಾರದ ಘೋಷಣೆ

kola performar, minister sunil kumar,
  • ದೈವ ನರ್ತನ ಮಾಡುವವರಿಗೆ ಎರಡು ಸಾವಿರ ಮಾಶಾಸನ 
  • ಜಿಲ್ಲೆಗಳಲ್ಲಿನ ಕನ್ನಡ, ಸಂಸ್ಕೃತಿ ಇಲಾಖೆಯಲ್ಲಿ ನೋಂದಾವಣೆ

ಕರಾವಳಿ ಭಾಗದ ಪ್ರಸಿದ್ಧ ದೈವಾರಾಧನೆ ಮಾಡುವ ವೇಳೆ ಕೋಲ ಕಟ್ಟುವ ಹಾಗೂ ದೈವನರ್ತನ ಮಾಡುವವರಿಗೆ ಮಾಸಾಶನ ನೀಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಿದೆ.

ಈ ವಿಚಾರವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್‌ಕುಮಾರ್ ಬೆಂಗಳೂರಿನಲ್ಲಿ ತಿಳಿಸಿದರು. ನಗರದ 
ವೈಯಾಲಿಕಾವಲ್‍ನ “ಶ್ರೀ ಕೃಷ್ಣದೇವರಾಯ ಕಲಾಮಂದಿರ”ದಲ್ಲಿ ಇಂದು (ಅ.20)ನಡೆದ ಬಿಜೆಪಿಯ ಎಂಟು ಮೋರ್ಚಾಗಳ ಮಾಧ್ಯಮ ಸಂಚಾಲಕರ ಕಾರ್ಯಾಗಾರ ‘ಮಾಧ್ಯಮ ಮಂಥನ’ ಉದ್ಘಾಟನಾ ಕಾರ್ಯಕ್ರಮದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. 

Eedina App

ಇಲಾಖೆ ವತಿಯಿಂದ ದೈವ ನರ್ತನ ಮಾಡುವವರಿಗೆ ಮಾಸಾಶನ ನೀಡಲು ನಿರ್ಧರಿಸಲಾಗಿದೆ. 60 ವರ್ಷ ಮೇಲ್ಪಟ್ಟ ದೈವ ನರ್ತಕರಿಗೆ ತಿಂಗಳಿಗೆ 2 ಸಾವಿರ ರೂ. ಮಾಸಾಶನ ನೀಡಲು ನಿರ್ಧರಿಸಲಾಗಿದೆ. ಈ ಮಾಸಾಶನವನ್ನು ಜಾನಪದ ಅಕಾಡೆಮಿಯಿಂದ ನೀಡಲು ಚಿಂತಿಸಲಾಗಿದೆ ಎಂದವರು ಹೇಳಿದರು.

ನಟ ಚೇತನ್ ಹೇಳಿಕೆ ಖಂಡಿಸಿದ ಸುನಿಲ್‌ಕುಮಾರ್

ಇದೇ ವೇಳೆ ನಟ ಚೇತನ್ ಅವರ 'ಕಾಂತಾರ' ಸಿನಿಮಾ ಕುರಿತ ಹೇಳಿಕೆಯ ಸಂಬಂಧ ಪತ್ರಕರ್ತರ ಪ್ರಶ್ನೆಗೆ ಉತ್ತರ ನೀಡಿದ ಸುನೀಲ್ ಕುಮಾರ್, "ಸಂಸ್ಕೃತಿ ಇಲ್ಲದವರು ಸಂಸ್ಕೃತಿ ಬಗ್ಗೆ ಮಾತನಾಡಬಾರದು" ಎಂದರು.

ಈ ಸುದ್ದಿ ಓದಿದ್ದೀರಾ? :ಕಾಂತಾರ ವಿವಾದ | ನಟ ಚೇತನ್‌ಗೆ ತಿರುಗೇಟು ನೀಡಲು ಹೋಗಿ ವಿವಾದಕ್ಕೆ ಸಿಲುಕಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ

"ದೈವ ನರ್ತನ ಹಿಂದೂ ಸಂಸ್ಕೃತಿಯ ಭಾಗ. ಕರಾವಳಿ ಜಿಲ್ಲೆಯ ಅನಾದಿಕಾಲದ ಆಚರಣೆ. ದೈವಾರಾಧನೆ ನಮ್ಮ ತುಳುನಾಡಿನ ಸಾಂಸ್ಕೃತಿಕ ಪ್ರತಿಬಿಂಬ, ಭೂತಾರಾಧನೆ ಎಂಬುದು ಹಿಂದೂ ಸಂಸ್ಕೃತಿಯ ಭಾಗವಾಗಿದೆ. ಯಾರೋ ಒಬ್ಬರು ಹೇಳಿದ ಮಾತ್ರಕ್ಕೆ ಆ ಸಂಸ್ಕೃತಿಯಿಂದ ಯಾರೂ ದೂರ ಆಗುವುದಿಲ್ಲ" ಎಂದು ಸಚಿವರು ಮಾರ್ಮಿಕವಾಗಿ ನುಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app