ಮಳೆಗಾಲ ಅಧಿವೇಶನ | ವಿಧಾನ ಪರಿಷತ್ತಿನಲ್ಲಿ ‘ಭೂ ಕಂದಾಯ ಕಾಯ್ದೆ ತಿದ್ದುಪಡಿ-2022’ ಮಂಡಿಸಿದ ಕಾನೂನು ಸಚಿವ

  • ನೂತನ ಕಾಯ್ದೆಗೆ ವಿಧಾನಪರಿಷತ್ತಿನಲ್ಲಿ ಅನುಮೋದನೆ
  • ವಿಧಾನ ಪರಿಷತ್ತಿನಲ್ಲಿ ವಿಧೇಯಕ ಮಂಡಿಸಿದ ಮಾಧುಸ್ವಾಮಿ

‘ಕರ್ನಾಟಕ ಭೂ ಕಂದಾಯ ಕಾಯ್ದೆ ತಿದ್ದುಪಡಿ- 2022’ನ್ನು ಸಂಸದೀಯ ವ್ಯವಹಾರ ಮತ್ತು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ವಿಧಾನ ಪರಿಷತ್ತಿನಲ್ಲಿ ಮಂಡಿಸಿದರು. 

ಮಾಧುಸ್ವಾಮಿ ಮಂಡಿಸಿದ ವಿಧೇಯಕಕ್ಕೆ ವಿಧಾನ ಪರಿಷತ್ತಿನಲ್ಲಿ ಅನುಮೋದನೆ ಸಿಕ್ಕಿದೆ. ಇದೇ ವೇಳೆ ಬಗರ್ ಹುಕುಂ ಅರ್ಜಿ ಹಾಕಲು ಸಮಯಾವಧಿ ವಿಸ್ತರಣೆ ಮಾಡಿ ಬಿಲ್ ತರಲಾಗಿದೆ. ಅನಧಿಕೃತ ಸಾಗುವಳಿ ಭೂಮಿಗಳನ್ನು ಸಕ್ರಮಗೊಳಿಸಲು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ ಮಾಡಲಾಗುವುದು ಎಂದು ಮಾಧುಸ್ವಾಮಿ ಸದನಕ್ಕೆ ತಿಳಿಸಿದರು.

ಈ ಸುದ್ದಿ ಓದಿದ್ದೀರಾ?: ಮಳೆಗಾಲ ಅಧಿವೇಶನ | ಬಿಜೆಪಿ ಸರ್ಕಾರದಿಂದ ಬೆಂಗಳೂರಿನ ಮಾನ ಹರಾಜಾಗಿದೆ: ಸಿದ್ದರಾಮಯ್ಯ

ಪರಿಷತ್ ಕಾಂಗ್ರೆಸ್ ನಾಯಕ ಬಿ ಕೆ ಹರಿಪ್ರಸಾದ್ ಮಾತನಾಡಿ, “ಅಕ್ರಮ-ಸಕ್ರಮ ಮಾಡುವುದರ ಪರಿಣಾಮವನ್ನು ಬೆಂಗಳೂರಲ್ಲಿ ಅನುಭವಿಸಿದ್ದೇವೆ. ರಾಜ್ಯದಾದ್ಯಂತ 7,15,700 ಅರ್ಜಿಗಳು ಬಾಕಿ ಇವೆ. ಅರಣ್ಯ ಕಾಯ್ದೆ ಬಂದ ನಂತರ ಲಕ್ಷಾಂತರ ಜನ ಸಾಗುವಳಿ ಮಾಡುತ್ತಿರುವವರ ಮೇಲೆ ತೂಗುಗತ್ತಿ ನೇತಾಡ್ತಾ ಇದೆ. ಈ ಬಗ್ಗೆ ಯೋಚಿಸಬೇಕು” ಎಂದು ಸಲಹೆ ನೀಡಿದರು.

“ಗೋಮಾಳದಲ್ಲೂ ಅಕ್ರಮವಾಗಿ ಸಾಗುವಳಿ ನಡೆಯುತ್ತಿದೆ. ಮಠ, ಸಂಸ್ಥೆಗೂ ಕೊಟ್ಟಿರುವ ಗೋಮಾಳ ಜಾಗವನ್ನು ಸಕ್ರಮ ಮಾಡುವ ಮೊದಲು ಯೋಚಿಸಬೇಕು. ಗೋಮಾಳ ಗೋಮಾಳವಾಗಿಯೇ ಇರಬೇಕು. ಕೋಟ್ಯಾಂತರ ರೂ. ಬೆಲೆಬಾಳುವ ಜಾಗವನ್ನು ಸಾವಿರಾರು ರುಪಾಯಿಗೆ ಕೊಡಲಾಗಿದೆ. ಅಕ್ರಮ- ಸಕ್ರಮ ಮಾಡುವಾಗ ಎಷ್ಟು ಅಕ್ರಮ ನಡೆಯುತ್ತದೆ ಎನ್ನುವುದು ಎಲ್ಲರಿಗೂ ಗೊತ್ತಿದೆ” ಎಂದು ತಮ್ಮ ಅಭಿಪ್ರಾಯ ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್