ನನ್ನ ಆರೋಗ್ಯದ ಬಗ್ಗೆ ಆತಂಕ ಪಡಬೇಡಿ; ಎಚ್‌ ಡಿ ದೇವೇಗೌಡ ಸ್ಪಷ್ಟನೆ

HDD
  • 'ನೀವುಗಳ್ಯಾರೂ ನನ್ನ ಭೇಟಿಗೆ ಬರುವುದು ಬೇಡ'
  • 'ಇನ್ನೂ ಕೆಲ ಸಮಯ ನಾನು ವಿಶ್ರಾಂತಿ ಪಡೆಯುವೆ' 

"ನನ್ನ ಆರೋಗ್ಯದ ಬಗ್ಗೆ ಯಾರೂ ಆತಂಕ ಪಡಬೇಕಾಗಿಲ್ಲ. ನಾನು ಆರೋಗ್ಯವಾಗಿದ್ದೇನೆ. ಶೀಘ್ರವೇ ಪಕ್ಷದ ಕಚೇರಿಗೆ ಭೇಟಿ ನೀಡುತ್ತೇನೆ" ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ.

ಈ ವಿಚಾರವಾಗಿ ಸಂದೇಶ ನೀಡಿರುವ ಎಚ್‌ ಡಿ ದೇವೇಗೌಡ, "ನೀವು ನನ್ನ ಭೇಟಿಗೆ ಬರುವುದು ಬೇಡ, ನಾನೇ ಪಕ್ಷದ ಕಚೇರಿಗೆ ಬಂದು ನಿಮ್ಮಗಳನ್ನು ಭೇಟಿ ಮಾಡುತ್ತೇನೆ" ಎಂದು ತಮ್ಮ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ. 

ತಮ್ಮ ಅನಾರೋಗ್ಯದ ವಿಚಾರವಾಗಿ ಮಾಹಿತಿ ಹಂಚಿಕೊಂಡಿರುವ ಅವರು, "ನನಗೆ ಸ್ವಲ್ಪ ಪ್ರಮಾಣದ ಅನಾರೋಗ್ಯ ಉಂಟಾಗಿತ್ತು. ವೈದ್ಯರು ವಿಶ್ರಾಂತಿಗೆ ಸೂಚನೆ ನೀಡಿದ್ದರು. ಹೀಗಾಗಿ ಕೆಲ ಕಾಲ ಮನೆಯಲ್ಲಿ ವಿಶ್ರಾಂತಿ ಪಡೆದಿದ್ದೇನೆ. ಇನ್ನೂ ಸ್ವಲ್ಪ ದಿನ ವಿಶ್ರಾಂತಿ ಪಡೆಯುತ್ತೇನೆ" ಎಂದು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಎಚ್ ಡಿ ದೇವೇಗೌಡರ ಆರೋಗ್ಯ ವಿಚಾರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

"ಹೀಗಾಗಿ ಕೆಲ ದಿನದ ಮಟ್ಟಿಗೆ ನನ್ನ ಭೇಟಿಗೆ ಬರುವುದು ಬೇಡ. ನಂತರ ನಾನೇ ಕಚೇರಿಗೆ ಬರುತ್ತೇನೆ. ಎಲ್ಲ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತೇನೆ" ಎಂದು ಅವರು ತಿಳಿಸಿದ್ದಾರೆ. ಇದೇ ವೇಳೆ ಮನೆಗೆ ಬಂದು ತಮ್ಮ ಆರೋಗ್ಯ ವಿಚಾರಿಸಿದ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ ಎಸ್ ಯಡಿಯೂರಪ್ಪ, ಜಗದೀಶ್‌ ಶೆಟ್ಟರ್‌ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ದೇವೇಗೌಡರು ಧನ್ಯವಾದ ಅರ್ಪಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್