ನಾವಿಬ್ಬರೂ ಅಲ್ಲಿಗೆ ಹೋಗೋಕಾಗಲ್ಲ ಬಿಡಿ. ವಯಸ್ಸಾಗಿದೆ; ಯಡಿಯೂರಪ್ಪನವರಿಗೆ ಸಿದ್ದರಾಮಯ್ಯ ಹೀಗೆ ಅಂದಿದ್ದೇಕೆ? 

  • ವಿಧಾನಸಭೆ ಮೊಗಸಾಲೆಯಲ್ಲಿ ಭೇಟಿಯಾದ ರಾಜಕೀಯ ದಿಗ್ಗಜರು
  • ಹಾಸ್ಯದ ಮಾತಿನಲ್ಲೇ ಪರಸ್ಪರ ಕುಶಲೋಪರಿ ವಿಚಾರಿಸಿಕೊಂಡ ನಾಯಕರು 

ರಾಜಕಾರಣವೇ ಬೇರೆ ವ್ಯಕ್ತಿಗತ ಸ್ನೇಹವೇ ಬೇರೆ ಎನ್ನುವುದನ್ನು ರಾಜಕಾರಣಿಗಳು ಪದೇಪದೇ ತೋರುತ್ತಲೇ ಬಂದವರು. ಅದಕ್ಕೆ ಮತ್ತೊಂದು ಸಾಕ್ಷಿ ವಿಧಾನಸೌಧದಲ್ಲಿ ಸೆಪ್ಟಂಬರ್‌ 22ರಂದು ದಾಖಲಾಯಿತು.

ಸದಾ ಬದ್ಧ ವೈರಿಗಳಂತೆ ರಾಜಕೀಯ ರಂಗದಲ್ಲಿ ಕಾಣಿಸಿಕೊಳ್ಳುತ್ತಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪವಿಧಾನಸಭೆಯ ಮೊಗಸಾಲೆಯಲ್ಲಿ ಪರಸ್ಪರ ಉಭಯ ಕುಶಲೋಪರಿ ವಿಚಾರಿಸಿ ಕೈ ಕುಲುಕಿ, ಹಾಸ್ಯ ಮಾಡಿದ ಪ್ರಸಂಗ ನಡೆಯಿತು.

ಸ್ಪೀಕರ್ ಕಚೇರಿಯಲ್ಲಿ ನಡೆದ ಸಭೆ ಮುಗಿಸಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೊರ ಬರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಎದುರಾದರು. ತಮ್ಮ ಮಾರ್ಗದರ್ಶಕರನ್ನು ಕಂಡ ಬೊಮ್ಮಾಯಿ 'ಸರ್ ವಿಧಾನ ಪರಿಷತ್ತಿಗೆ ಹೋಗ್ತಾ ಇದ್ದೇನೆ' ಎಂದರು. ಇದಕ್ಕೆ ಬಿಎಸ್‌ವೈ ಆಗಲಿ' ಎಂದು ಹೇಳಿ ಮುನ್ನಡೆದರು.

ಇದೇ ವೇಳೆಗೆ ಎದುರಾದ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕಂಡು ನಗು ಚೆಲ್ಲಿದ ಯಡಿಯೂರಪ್ಪ, 'ಏನು ಸಿದ್ದರಾಮಯ್ಯ ಅವರೇ ನೀವೂ ಕೌನ್ಸಿಲ್‌ಗೆ ಹೋಗ್ತಾ ಇದ್ದೀರೋ?' ಎಂದು ಹಾಸ್ಯ ಮಿಶ್ರಿತವಾಗಿ ಪ್ರಶ್ನಿಸಿದರು.

ಈ ಸುದ್ದಿ ಓದಿದ್ದೀರಾ? : ಮಳೆಗಾಲ ಅಧಿವೇಶನ | ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಿಗಲಿ : ಬಿ ಎಸ್‌ ಯಡಿಯೂರಪ್ಪ ಒತ್ತಾಯ

ಇದಕ್ಕೆ ನಗುತ್ತಲೇ ಉತ್ತರಿಸಿದ ಸಿದ್ಧರಾಮಯ್ಯ, 'ಯಡಿಯೂರಪ್ಪ ಅವರೇ  ನಮಗೆ ವಯಸ್ಸು ಆಗೋಯ್ತಲ್ಲ, ನೀವು ನಾನು ಕೌನ್ಸಿಲ್‌ಗೆ ಹೋಗಲು ಆಗಲ್ಲ' ಎಂದು ನಗೆ ಚಟಾಕಿ ಹಾರಿಸಿದರು. ಈ ಮಾತಿಗೆ ಇಬ್ಬರು ನಾಯಕರು ಕೈಕುಲುಕಿ ನಗುತ್ತಲೇ ತಮ್ಮ ತಮ್ಮ ದಾರಿಯಲ್ಲಿ ಮುನ್ನಡೆದರು.

ನಿಮಗೆ ಏನು ಅನ್ನಿಸ್ತು?
0 ವೋಟ್