ಹಾಲಿನ ದರ ಪರಿಷ್ಕರಣೆ | ನ. 20 ರ ನಂತರ ಅಂತಿಮ ತೀರ್ಮಾನ; ಸಿಎಂ ಬೊಮ್ಮಾಯಿ

CM BOMMAI IN SAHAKIRI MEETING
  • ಹಾಲಿನ ದರ ಏರಿಕೆ ಬಗ್ಗೆ ವಾರದ ನಂತರ ನಿರ್ಧಾರ ಪ್ರಕಟಿಸುತ್ತೇವೆ
  • ದರ ಏರಿಕೆ ವಿಚಾರದಲ್ಲಿ ಸಂಬಂಧಪಟ್ಟವರೊಂದಿಗೆ ಸಭೆ ನಡೆಸುತ್ತೇವೆ

ಹಾಲಿನ ದರ ಏರಿಕೆ ಬಗ್ಗೆ ಜನ ಸದ್ಯಕ್ಕೆ ಆತಂಕ ಪಡಬೇಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕಲಬುರ್ಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಹಾಲಿನ ದರ ಏರಿಕೆ ಕುರಿತಂತೆ ಸ್ಪಷ್ಟೀಕರಣ ನೀಡಿದರು. "ಈ ತಿಂಗಳ 20ರ ನಂತರ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನ ಮಾಡುತ್ತೇವೆ" ಎಂದು ಹೇಳಿದರು.

Eedina App

ಈ ಸುದ್ದಿ ಓದಿದ್ದೀರಾ? : ನಂದಿನಿ ಹಾಲಿನ ದರ ಹೆಚ್ಚಳ | ರಾಜ್ಯದ ಜನರಿಗೆ ಮತ್ತೆ ಬೆಲೆ ಏರಿಕೆಯ ಬರೆ

"ಕಳೆದ ಹಲವಾರು ತಿಂಗಳಿನಿಂದ ಈ ಬಗ್ಗೆ ಚರ್ಚೆಯಾಗುತ್ತಿದೆ. ಒಂದೆಡೆ ಕೆಎಂಎಫ್‌ ರೈತರಿಗೆ ಲಾಭ ಮಾಡಿಕೊಡುವ ನಿಟ್ಟಿನಲ್ಲಿ ಬೆಲೆ ಏರಿಕೆ ಪ್ರಸ್ತಾಪ ಇಟ್ಟಿದೆ. ಮತ್ತೊಂದು ಕಡೆ ಈ ಬೆಲೆ ಏರಿಕೆ ನಾಗರಿಕರಿಗೆ ಹೊರೆಯಾಗುತ್ತದೆ ಎನ್ನುವ ದೂರಿದೆ. ಹೀಗಾಗಿ ಇದರ ಬಗ್ಗೆ ಈ ತಿಂಗಳ 20ನೇ ತಾರೀಖಿನ ನಂತರ ಸಭೆ ನಡೆಸಿ ನಿರ್ಧಾರ ಮಾಡಲಾಗುತ್ತದೆ" ಎಂದು ಮುಖ್ಯಮಂತ್ರಿಗಳು ಹೇಳಿದರು.

AV Eye Hospital ad
ನಿಮಗೆ ಏನು ಅನ್ನಿಸ್ತು?
4 ವೋಟ್
eedina app