ದಿನದೊಳಗೆ ಮನೆ ಹಾನಿ ಪರಿಹಾರ ನೀಡಿದ ಬೆಳಗಾವಿ ಪಾಲಿಕೆ ಕಾರ್ಯಕ್ಕೆ ಭೇಷ್ ಎಂದ ಸಚಿವ ಕಾರಜೋಳ

  • ಒಂದೇ ದಿನದಲ್ಲಿ ಮನೆ ಹಾನಿ ಪರಿಹಾರ ಕೊಡಿಸಿದ ಬೆಳಗಾವಿ ಮಹಾನಗರ ಪಾಲಿಕೆ
  • ಮಹಾನಗರ ಪಾಲಿಕೆ ಕಾರ್ಯ ವೈಖರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಮೆಚ್ಚುಗೆ 

ಬೆಳಗಾವಿ ಭಾಗದಲ್ಲಿ ಮಳೆ ಹಾನಿಯಿಂದ ಮನೆ ಕಳೆದುಕೊಂಡವರಿಗೆ ಒಂದೇ ದಿನದಲ್ಲಿ ಪರಿಹಾರ ಕೊಡಿಸಿದ ಬೆಳಗಾವಿ ಮಹಾನಗರ ಪಾಲಿಕೆ ಕಾರ್ಯವೈಖರಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಶ್ಲಾಘಿಸಿದ್ದಾರೆ.

ಈ ಬಗ್ಗೆ ಬೆಳಗಾವಿ ಪಾಲಿಕೆಗೆ ಪತ್ರ ಬರೆದು ಮೆಚ್ಚುಗೆ ವ್ಯಕ್ತಪಡಿಸಿರುವ ಅವರು, ಈ ಕಾರ್ಯಕ್ಕಾಗಿ ನಾನು ಬೆಳಗಾವಿ ಜಿಲ್ಲಾಡಳಿತ ಮತ್ತು ಬೆಳಗಾವಿ ಮಹಾನಗರ ಪಾಲಿಕೆಯ ಸಮಸ್ತ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ. ಅದರಲ್ಲೂ ವಿಶೇಷವಾಗಿ ಜಿಲ್ಲಾಧಿಕಾರಿ ಮತ್ತು ಇತರೆ ಹಿರಿಯ ಅಧಿಕಾರಿಗಳ ಮುತುವರ್ಜಿ ಮತ್ತು ಜನಪರ ಕಾಳಜಿಯಿಂದಾಗಿ ಈ ಕಾರ್ಯ ಸಾಕಾರವಾಗಿದೆ. ಇವರುಗಳ ಈ ಕಾರ್ಯವನ್ನು ನಾನು ಮೆಚ್ಚಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Image

ಜಿಲ್ಲಾಡಳಿತಗಳ ಜನಸ್ಪಂದನೆ ಇದೇ ರೀತಿ ಮುಂದುವರಿಯಲಿ ಮತ್ತು ಸಂಕಷ್ಟದಲ್ಲಿರುವ ನಾಗರಿಕರ ನೆರವಿಗೆ ತಕ್ಷಣ ಆಡಳಿತ ವ್ಯವಸ್ಥೆ ಸ್ಪಂದಿಸಿ ತಮ್ಮ ಕರ್ತವ್ಯ ನಿರ್ವಹಿಸಲು ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದೆ ಎಂದು ಗೋವಿಂದ ಕಾರಜೋಳ ಪ್ರತದಲ್ಲಿ ತಿಳಿಸಿದ್ದಾರೆ.

ಹಾಗೆಯೇ ಸರ್ಕಾರದ ಎಲ್ಲಾ ಆಡಳಿತ ವರ್ಗಗಳಿಂದಲೂ ಇದೇ ಮಾದರಿ ಜನಸ್ನೇಹಿ ಕಾರ್ಯ ತಕ್ಷಣಕ್ಕೆ ಜಾರಿಯಾಗುವಂತಾಗಬೇಕು ಎಂದು ಗೋವಿಂದ ಕಾರಜೋಳ ಆಶಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್