ಬಿಜೆಪಿಯ ಭವಿಷ್ಯದ ಮುಖ್ಯಮಂತ್ರಿ ಹೆಸರು ಘೋಷಣೆ ಮಾಡಿದ ಎಂಎಲ್‌ಸಿ ಅರುಣ್ ಶಹಾಪುರ..!

Arun-Shahapur
  • ಕರ್ನಾಟಕ ರಾಜ್ಯದ ಭವಿಷ್ಯ ಸಚಿವ ಅಶ್ವತ್ಥ ನಾರಾಯಣ ಕೈಯಲ್ಲಿದೆ
  • ಹಿಂದಿನ ಕಾಂಗ್ರೆಸ್ ಸರ್ಕಾರ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗಿತ್ತು

ಬಸವರಾಜ ಬೊಮ್ಮಾಯಿ ರಾಜ್ಯ ಬಿಜೆಪಿಯ ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವ ಹುಡುಕಾಟಕ್ಕೆ ಬಿಜೆಪಿ ವಿಧಾನಪರಿಷತ್ ಸದಸ್ಯ ಅರುಣ್ ಶಹಾಪೂರ್ ಉತ್ತರ ಹುಡುಕಿಕೊಟ್ಟಿದ್ದಾರೆ.

ಧಾರವಾಡದಲ್ಲಿ ನಡೆದ ಅತಿಥಿ ಉಪನ್ಯಾಸಕರ ಶೈಕ್ಷಣಿಕ ಸಮಾವೇಶದಲ್ಲಿ ಮಾತನಾಡಿದ ಅರುಣ್ ಶಹಾಪುರ, ಕಾರ್ಯಕ್ರಮದಲ್ಲೇ ಭವಿಷ್ಯದ ಮುಖ್ಯಮಂತ್ರಿಯ ಹೆಸರು ಹರಿಯಬಿಟ್ಟಿದ್ದಾರೆ.

Eedina App

ಅಂದಹಾಗೆ ಅರುಣ್ ಶಹಾಪುರ ಹೇಳಿದ್ದು, ಹಾಲಿ ಉನ್ನತ ಶಿಕ್ಷಣ ಸಚಿವ, ಮಾಜಿ ಉಪಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಅವರ ಹೆಸರನ್ನು.

ಅಶ್ವತ್ಥ ನಾರಾಯಣ ಈಗಾಗಲೇ ಡಿಸಿಎಂ ಆಗಿದ್ದಾರೆ. ಅವರ ರಾಜಕೀಯದ ಹಾದಿಯಲ್ಲಿ ಈಗಾಗಲೇ ಹನ್ನೊಂದು ಹೆಜ್ಜೆ ಆಗಿದೆ, ಇನ್ನೊಂದು ಹೆಜ್ಜೆ ಬಾಕಿಯಿದೆ. ಅವರ ಹನ್ನೆರಡನೆಯ ಹೆಜ್ಜೆ ಮುಖ್ಯಮಂತ್ರಿ ಗಾಧಿಯತ್ತ ಸಾಗಿ ಹೋಗಲಿ ಎನ್ನುವುದು ನನ್ನ ಆಶಯ ಎಂದು ಹೇಳಿಕೊಂಡಿದ್ದಾರೆ.

AV Eye Hospital ad

ಹಿಂದಿನ ಸರ್ಕಾರ ಒಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಬಿಜೆಪಿ ಹಾಗಿಲ್ಲ, ಈಗ ರಾಮನಗರ ಅಂದ್ರೆ ಅಶ್ವತ್ಥ ನಾರಾಯಣ ಎನ್ನುವಂತಾಗಿದೆ ಎಂದು ಅರುಣ್ ಶಹಾಪುರ ಹೇಳಿದರು.

ಈ ಸುದ್ದಿ ಓದಿದ್ದೀರಾ? : ದಲಿತರೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಿಸುವ ಧೈರ್ಯ ಕಾಂಗ್ರೆಸ್‌ಗೆ ಇದೆಯಾ?: ಬಿಜೆಪಿ ಸವಾಲು

"ಕರ್ನಾಟಕ ರಾಜ್ಯದ ಭವಿಷ್ಯ ಸಚಿವ ಅಶ್ವತ್ಥ ನಾರಾಯಣ ಕೈಯಲ್ಲಿದೆ. ರಾಜ್ಯಕ್ಕೆ ಅಶ್ವತ್ಥ್ ನಾರಾಯಣ ನೇತೃತ್ವ ಸಿಕ್ಕರೆ ಸುಭೀಕ್ಷೆ ಸಿಕ್ಕಂತೆ. ಹೀಗಾಗಿ ಅಶ್ವತ್ಥ ನಾರಾಯಣ ರಾಜ್ಯದ ಭಾವಿ ಮುಖ್ಯಮಂತ್ರಿ" ಎಂದು ಹೇಳಿದರು.

ನಿಮಗೆ ಏನು ಅನ್ನಿಸ್ತು?
3 ವೋಟ್
eedina app