ಮೋದಿಯವರ ಆಡಳಿತದಲ್ಲಿ ಸಚಿವರಿಗೂ ಪಕೋಡ ಮಾರುವ ಸ್ಥಿತಿ ಒದಗಿದೆ: ಕಾಂಗ್ರೆಸ್ ಲೇವಡಿ

ashoka pakoda
  • ಬಿಜೆಪಿ ಕಚೇರಿ ಮುಂದೆ ಪಕೋಡ ಮಾರಿದ್ದ ಕಂದಾಯ ಸಚಿವ ಅಶೋಕ್‌
  • ಕನ್ನಡಿಗರಿಗಾದ ಅನ್ಯಾಯದ ಪರ ದನಿ ಎತ್ತದ ಕಾರಣಕ್ಕೆ ಅಶೋಕ್‌ಗೆ ಈ ಸ್ಥಿತಿ

ಬಿಜೆಪಿ ಕಚೇರಿ ಎದುರು ಭಾನುವಾರ ಸಂಜೆ ಪಕೋಡ ಮಾರಿ ಪ್ರಚಾರ ಪಡೆದುಕೊಂಡಿದ್ದ ರಾಜ್ಯ ಕಂದಾಯ ಸಚಿವ ಆರ್ ಅಶೋಕ್ ನಡೆಯನ್ನು ಕಾಂಗ್ರೆಸ್ ಟೀಕಿಸಿ ಲೇವಡಿ ಮಾಡಿದೆ.

ಈ ಕುರಿತು ಟ್ವೀಟ್ ಮಾಡಿರುವ ರಾಜ್ಯ ಕಾಂಗ್ರೆಸ್, "ಮೋದಿಯವರ ಪಕೋಡಾನಾಮಿಕ್ಸ್ ಆರ್ಥಿಕತೆಯಲ್ಲಿ ರಾಜ್ಯದ ಕಂದಾಯ ಸಚಿವರಿಗೂ ಪಕೋಡಾ ಮಾರುವ ಸ್ಥಿತಿ ಬಂದಿದೆ!" ಎಂದು ಕುಟುಕಿದೆ.

ಕೇಂದ್ರ ಸರ್ಕಾರ ರಾಜ್ಯದ ಪಾಲಿನ GST ಬಾಕಿ ಕೊಡಲಿಲ್ಲ, ಅಗತ್ಯ ಯೋಜನೆಗಳಿಗೆ ಅನುದಾನ ಕೊಡಲಿಲ್ಲ, ಕನ್ನಡಿಗರಿಗೆ ಈ ಅನ್ಯಾಯಗಳಾದಾದ ನಿಲ್ಲದ ಕಾರಣಕ್ಕೆ ಸಚಿವ ಅಶೋಕ್‌ಗೆ ಈ ಸ್ಥಿತಿ ಬಂದಿರಬೇಕೇಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.

AV Eye Hospital ad

ಈ ಸುದ್ದಿ ಓದಿದ್ದೀರಾ? : 40% ಮುಖ್ಯಮಂತ್ರಿಗಳೇ, ಮತ್ತೆ ಎಷ್ಟು ಮಂದಿಯನ್ನು ಆತ್ಮಹತ್ಯೆಗೆ ನೂಕುತ್ತೀರಿ : ಬೊಮ್ಮಾಯಿಗೆ ಸಿದ್ದರಾಮಯ್ಯ ಪ್ರಶ್ನೆ

ಜೊತೆಗೆ ಈಗಿನಿಂದಲೇ ಪಕೋಡಾ ಅಂಗಡಿ ಭದ್ರಗೊಳಿಸಿ, ಚುನಾವಣೆಯ ನಂತರ ಅದು ಉಪಯೋಗಕ್ಕೆ ಬರಲಿದೆ ಎಂದು ಕೈಪಡೆ ಲೇವಡಿ ಮಾಡಿದೆ.

ನಿಮಗೆ ಏನು ಅನ್ನಿಸ್ತು?
3 ವೋಟ್
eedina app