ರಾಷ್ಟ್ರ ಧ್ವಜ ವಿವಾದ| ವಿವೇಕವಿಲ್ಲದ ಶಿಕ್ಷಣ ಸಚಿವರನ್ನು ವಜಾಗೊಳಿಸಿ, ಸರ್ಕಾರಕ್ಕೆ ಕಾಂಗ್ರೆಸ್‌ ಆಗ್ರಹ

  • ಶಿಕ್ಷಣ ಸಚಿವ ಬಿ ಸಿ ನಾಗೇಶ್‌ ವಜಾಕ್ಕೆ ಆಗ್ರಹಿಸಿದ ಕಾಂಗ್ರೆಸ್ 
  • ರಾಷ್ಟ್ರಧ್ವಜಕ್ಕಿಂತ ಎತ್ತರ ಭಗವಾಧ್ವಜ ಹಿಡಿದು ನಡೆದಿದ್ದ ಸಚಿವ ನಾಗೇಶ್ 

ರಾಷ್ಟ್ರಧ್ವಜ ನೀತಿಸಂಹಿತೆ ಉಲ್ಲಂಘಿಸಿದ ರಾಜ್ಯ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರನ್ನು ಸಂಪುಟದಿಂದ ಕೂಡಲೇ ವಜಾಗೊಳಿಸುವಂತೆ ಪ್ರತಿಪಕ್ಷ ಕಾಂಗ್ರೆಸ್‌ ಆಗ್ರಹಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಶಿಕ್ಷಣ ಸಚಿವರ ಅವಿವೇಕಿತನ ಹಾಗೂ ಬಿಜೆಪಿ ನಡೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ಟ್ವೀಟ್ ಸಾರಾಂಶ ಹೀಗಿದೆ.

"ಮಾಜಿ ಸಚಿವ ಈಶ್ವರಪ್ಪ ಭಗವಾಧ್ವಜವನ್ನು ರಾಷ್ಟ್ರಧ್ವಜ ಮಾಡುತ್ತೇವೆ ಎಂದಿದ್ದರು. ಬಿ.ಸಿ ನಾಗೇಶ್ ಕೇಸರಿ ಧ್ವಜದ ಮುಂದೆ ರಾಷ್ಟ್ರಧ್ವಜವನ್ನು ಕುಗ್ಗಿಸಿದ್ದಾರೆ. ಭಗವಾಧ್ವಜವನ್ನು ರಾಷ್ಟ್ರಧ್ವಜವನ್ನಾಗಿಸುವ ಪ್ರಯತ್ನದ ಮುನ್ಸೂಚನೆಯೇ ಇದು" ಎಂದು ಕಾಂಗ್ರೆಸ್‌ ಪ್ರಶ್ನಿಸಿದೆ.

ಈ ಸುದ್ದಿ ಓದಿದ್ದೀರಾ? : ರಾಷ್ಟ್ರಧ್ವಜಕ್ಕೆ ಅಪಮಾನ ಎಸಗಿದ ಸಚಿವ ಬಿ ಸಿ ನಾಗೇಶ್: ಶಿಕ್ಷಣ ಸಚಿವರ ವಿರುದ್ಧ ಪ್ರಕರಣ ದಾಖಲಿಸಲು ಕಾಂಗ್ರೆಸ್‌ ಆಗ್ರಹ

ಹಾಗೆಯೇ ಬಿಜೆಪಿ ಸರ್ಕಾರದ ಮೇಲೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್, ಸಿಎಂಗೆ ತಿರಂಗಾ ಮೇಲೆ ಗೌರವ ಇದ್ದಿದ್ದೇ ಆದರೆ ವಿವೇಕವಿಲ್ಲದ ಶಿಕ್ಷಣ ಸಚಿವರನ್ನು ವಜಾಗೊಳಿಸಲಿ ಎಂದು ಒತ್ತಾಯಿಸಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್