ಒಂದು ನಿಮಿಷದ ಓದು | ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ವಿರೋಧ; ಜಮೀರ್ ವಿರುದ್ಧ ಬಿಜೆಪಿ ಕಿಡಿ

ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗಾಗಲೇ ಘೋಷಣ ಮಾಡಿದೆ. ಆದರೆ, ವಿವಾದಗಳು ಮಾತ್ರ ಇನ್ನೂ ನಿಂತಿಲ್ಲ.

"ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅವಕಾಶ ನೀಡುವುದಿಲ್ಲ" ಎಂದ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ವಿರುದ್ಧ ರಾಜ್ಯ ಭಾರತೀಯ ಜನತಾ ಪಕ್ಷ (ಬಿಜೆಪಿ) ಟ್ವಿಟ್ಟರ್‌ನಲ್ಲಿ ಕಿಡಿ ಕಾರಿದೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, “ರಿಪಬ್ಲಿಕ್ ಆಫ್ ಕನಕಪುರದ ಮಾದರಿಯಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ರಿಪಬ್ಲಿಕ್ ಆಫ್ ಚಾಮರಾಜಪೇಟೆ ಕಟ್ಟಿಕೊಂಡಿದ್ದಾರಾ? ಇದು ಸ್ವತಂತ್ರ ಭಾರತ. ಇಲ್ಲಿ ಪಾಳೇಗಾರಿಕೆ ನಡೆಸಲು ಮೀರ್ ಸಾಧಿಕ್ ಅವರ ಪ್ರೋತ್ಸಾಹ ಇದೆಯೇ” ಎಂದು ಪ್ರಶ್ನಿಸಿರುವ ಬಿಜೆಪಿ, "ರಿಪಬ್ಲಿಕ್‌ ಆಫ್‌ ಚಾಮರಾಜಪೇಟೆ" ಎಂದು ಹ್ಯಾಷ್‌ಟ್ಯಾಗ್ ಬಳಸಿ ಟ್ವೀಟ್ ಮಾಡಿದೆ.

ಗಣೇಶ ಹಬ್ಬ ಕೇವಲ ಒಂದು ಧರ್ಮಕ್ಕೆ ಸೀಮಿತವಾದ ಹಬ್ಬವಲ್ಲ. ಗಣೇಶೋತ್ಸವದ ಮೂಲಕ ತಿಲಕರು ಸ್ವಾತಂತ್ರ್ಯ ಕಿಚ್ಚು ಹಚ್ಚಿದ್ದರು.

ರಾಷ್ಟ್ರೀಯ ಜೋಡಣೆಗೆ ಬಹುಮುಖ್ಯ ಪಾತ್ರ ವಹಿಸಿದ ಗಣೇಶ ಉತ್ಸವವನ್ನು ಮಾಡುವುದು ಬೇಡ ಎನ್ನಲು ಕಾಂಗ್ರೆಸ್ ನಾಯಕರು ಯಾರು?#ರಿಪಬ್ಲಿಕ್‌ಆಫ್‌ಚಾಮರಾಜಪೇಟೆ

“ಗಣೇಶ ಹಬ್ಬ ಕೇವಲ ಒಂದು ಧರ್ಮಕ್ಕೆ ಸೀಮಿತವಾದ ಹಬ್ಬವಲ್ಲ. ಗಣೇಶೋತ್ಸವದ ಮೂಲಕ ತಿಲಕರು ಸ್ವಾತಂತ್ರ್ಯದ ಕಿಚ್ಚು ಹಚ್ಚಿದ್ದರು. ರಾಷ್ಟ್ರೀಯ ಜೋಡಣೆಗೆ ಬಹುಮುಖ್ಯ ಪಾತ್ರ ವಹಿಸಿದ ಗಣೇಶ ಉತ್ಸವವನ್ನು ಮಾಡುವುದು ಬೇಡ ಎನ್ನಲು ಕಾಂಗ್ರೆಸ್ ನಾಯಕರು ಯಾರು? ಈದ್ಗಾ ಮೈದಾನದಲ್ಲಿ ಇಷ್ಟು ದಿನ ಧ್ವಜಾರೋಹಣ ನಡೆಸಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕುತ್ತಿದ್ದ ಜಮೀರ್ ಅಹ್ಮದ್ ಖಾನ್ ಈಗ ಗಣೇಶೋತ್ಸವಕ್ಕೆ ವಿರೋಧಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರ ಕೃಪಾಶೀರ್ವಾದದಿಂದ ಚಾಮರಾಜಪೇಟೆಯ ಈದ್ಗಾ ಮೈದಾನ ಅಂದಿನ ಲಾಲ್ ಚೌಕ್ ಆಗಿ ಪರಿವರ್ತನೆಯಾಗುತ್ತಿದೆಯೇ” ಎಂದು ಬಿಜೆಪಿ ಪ್ರಶ್ನಿಸಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್