
ನ.11ರಂದು ರಾಜ್ಯ ರಾಜಧಾನಿ ಬೆಂಗಳೂರಿಗೆ ಪ್ರಧಾನಿ ಮೋದಿ ಅವರು ಆಗಮಿಸುತ್ತಿದ್ದು, ನಾನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಎಚ್ಎಎಲ್ಗೆ ಹೆಲಿಕಾಪ್ಟರ್ ಮೂಲಕ ಆಗಮಿಸಲಿರುವ ಪ್ರಧಾನಿ ಮೋದಿ ಬಳಿಕ ರಸ್ತೆಯ ಮೂಲಕವೇ ಸಂಚರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ, ಮುಂಜಾಗ್ರತಾ ಕ್ರಮವಾಗಿ ಭದ್ರತಾ ದೃಷ್ಟಿಯಿಂದ ಹಲವು ಕಡೆ ಸಾರ್ವಜನಿಕರ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.
Other highlights of the Bengaluru visit include:
— Narendra Modi (@narendramodi) November 10, 2022
Inauguration of Terminal 2 of Kempegowda International Airport.
Flagging off the Chennai-Mysuru Vande Bharat Express.
Flagging off the Bharat Gaurav Kashi Yatra train.
ಮೋದಿಯವರು ಭಾಗವಹಿಸುವ ಕಾರ್ಯಕ್ರಮಗಳ ವಿವರ ಹೀಗಿದೆ:
09:45 - ಬೆಂಗಳೂರಿನ ಶಾಸಕರ ಭವನದಲ್ಲಿ ಕನಕದಾಸರ ಮತ್ತು ವಾಲ್ಮೀಕಿಯವರ ಪುತ್ಥಳಿಗಳಿಗೆ ಮಾರ್ಲಾಪಣೆ
10:00- ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ(ಮೆಜೆಸ್ಟಿಕ್)ದಲ್ಲಿ ಚೆನ್ನೈ-ಮೈಸೂರು ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಮತ್ತು ಭಾರತ್ ಗೌರವ್ ಕಾಶಿ ಯಾತ್ರಾ ರೈಲಿಗೆ ಹಸಿರು ನಿಶಾನೆ ತೋರಿಸುವ ಮೂಲಕ ಉದ್ಘಾಟನೆ
11:00- ಹೆಬ್ಬಾಳ ಹೆಲಿಪ್ಯಾಡ್ಗೆ ರಸ್ತೆಯ ಮೂಲಕ ಆಗಮನ
11: 20- ಹೆಬ್ಬಾಳ ಹೆಲಿಪ್ಯಾಡ್ನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ
11:30- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಉದ್ಘಾಟನೆ
ಮಧ್ಯಾಹ್ನ 12:00- ನಾಡಪ್ರಭು ಕೆಂಪೇಗೌಡರ 108 ಅಡಿಯ ಪ್ರತಿಮೆ ಉದ್ಘಾಟನೆ
ಮಧ್ಯಾಹ್ನ 12:30- ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗಿ
ಮಧ್ಯಾಹ್ನ 1:30- ಸಾರ್ವಜನಿಕ ಕಾರ್ಯಕ್ರಮ ಮುಗಿದ ಬಳಿಕ ರಸ್ತೆಯ ಮೂಲಕ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣ
ಮಧ್ಯಾಹ್ನ 1:45: ಬೆಂಗಳೂರಿನಿಂದ ತಮಿಳುನಾಡಿಗೆ ತೆರಳಲಿದ್ದಾರೆ. ದಿಂಡಿಗಲ್ನಲ್ಲಿ ಗಾಂಧಿಗ್ರಾಮ್ ರೂರಲ್ ಇನ್ಸ್ಟಿಟ್ಯೂಟ್ನ 36ನೇ ಘಟಿಕೋತ್ಸವ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ.
"ಬೆಂಗಳೂರು ನಿರ್ಮಾತೃ, ನಾಡಪ್ರಭು ಶ್ರೀ ಕೆಂಪೇಗೌಡರ 108 ಅಡಿಯ ಪ್ರಗತಿಯ ಪ್ರತಿಮೆಯ ಅನಾವರಣಕ್ಕೆ ಆಗಮಿಸಲಿರುವ ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ಶ್ರೀ @narendramodi ಅವರಿಗೆ ಹಾರ್ದಿಕ ಸ್ವಾಗತ." ಮುಖ್ಯಮಂತ್ರಿ : @BSBommai #KarnatakaWelcomesModi pic.twitter.com/gkPTE6aMoJ
— CM of Karnataka (@CMofKarnataka) November 10, 2022