ಪಿಎಸ್ಐ ನೇಮಕಾತಿ, ಶೀಘ್ರದಲ್ಲೀಯೇ ಮರುಪರೀಕ್ಷೆ: ಆರಗ ಜ್ಞಾನೇಂದ್ರ

  •  56,000 ಅಭ್ಯರ್ಥಿಗಳು ಮರು ಪರೀಕ್ಷೆ ಬರೆಯಲು ಅರ್ಹ
  •  ಅಕ್ರಮದಲ್ಲಿ ಭಾಗಿಯಾದವರಿಗೆ ಪರೀಕ್ಷೆ ಬರೆಯಲು ಅವಕಾಶವಿಲ್ಲ

ಅಕ್ರಮದ ಕಾರಣಕ್ಕೆ ರದ್ದುಗೊಂಡಿರುವ ಪಿಎಸ್ಐ ನೇಮಕಾತಿ ಪರೀಕ್ಷೆಯನ್ನು ಶೀಘ್ರದಲ್ಲೀಯೇ ಮತ್ತೆ ನಡೆಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಬೆಂಗಳೂರಿನ ತಮ್ಮ ನಿವಾಸದಲ್ಲಿ ಬುಧವಾರ ತಮ್ಮನ್ನು ಭೇಟಿಯಾದ ಪಿಎಸ್ಐ ಹುದ್ದೆ ಅಪೇಕ್ಷಿತ ಅಭ್ಯರ್ಥಿಗಳಿಗೆ, ಸರ್ಕಾರ ಶೀಘ್ರದಲ್ಲಿಯೇ ಮರುಪರೀಕ್ಷೆ ನಡೆಸುವ ಬಗ್ಗೆ ನಿರ್ಧಾರ ಕೈಗೊಳ್ಳಲಿದೆ ಎಂದು ಅವರು ಭರವಸೆ ನೀಡಿದ್ದಾರೆ.

"ಈಗಾಗಲೇ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಆದ ಅಕ್ರಮದ ಬಗ್ಗೆ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆ ಪ್ರಕ್ರಿಯೆ ಮುಗಿದ ನಂತರ ಮರುಪರೀಕ್ಷೆ ನಡೆಸಲಾಗುವುದು" ಎಂದು ಅವರು ಹೇಳಿದರು.

ಈ ಸುದ್ದಿ ಓದಿದ್ದೀರಾ? ಒಂದು ನಿಮಿಷದ ಓದು| ಬೆಂಗಳೂರು: ನಿಮ್ಮ ಏರಿಯಾದಲ್ಲಿ ಮಂಗಗಳ ಹಾವಳಿಯೇ? ಡಯಲ್ ಮಾಡಿ 1533

"ಈ ಹಿಂದೆ ಪಿಎಸ್ಐ ಪರೀಕ್ಷೆ ಬರೆದಿದ್ದ, ಎಲ್ಲ 56,000 ಅಭ್ಯರ್ಥಿಗಳು ಮರುಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ. ಯಾರೂ ಆತಂಕ ಪಡುವ ಅವಶ್ಯಕತೆ ಇಲ್ಲ" ಎಂದು ಅವರು ಹೇಳಿದ್ದಾರೆ.

"ಅಕ್ರಮದಲ್ಲಿ ಭಾಗಿಯಾದವರಿಗೆ ಪರೀಕ್ಷೆ ಬರೆಯಲು ಅವಕಾಶವಿರುವುದಿಲ್ಲ. ಒಂದು ವೇಳೆ ಮರುಪರೀಕ್ಷೆ ನಡೆಸುವುದು ತಡವಾದರೆ ಅಭ್ಯರ್ಥಿಗಳು ಭಯಪಡುವ ಅವಶ್ಯಕತೆಯಿಲ್ಲ. ಪಿಎಸ್ಐ ಪರೀಕ್ಷೆ ತಯಾರಿ ನಡೆಸಿ" ಎಂದು ತಿಳಿಸಿದರು. 

ನಿಮಗೆ ಏನು ಅನ್ನಿಸ್ತು?
0 ವೋಟ್