ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾದ ರಾಜ್‌ ಕುಟುಂಬದ ಸದಸ್ಯರು

  • ರಾಜ್‌ ಕುಟುಂಬದ ಸ್ಮಾರಕಗಳ ಅಭಿವೃದ್ಧಿ ಬಗ್ಗೆ ಸಿಎಂ ಜೊತೆ ಚರ್ಚೆ
  • ಲೋಕೋಪಯೋಗಿ ಇಲಾಖೆ ಅನುಮತಿ ಬಳಿಕ ಮುಂದಿನ ಕ್ರಮ: ಸಿಎಂ ಭರವಸೆ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ವರನಟ ಡಾ. ರಾಜ್ ಕುಮಾರ್ ಕುಟುಂಬದ ಸದಸ್ಯರು ಬುಧವಾರ ಭೇಟಿ ಮಾಡಿದರು. ಮುಖ್ಯಮಂತ್ರಿಗಳ ಆರ್‌ ಟಿ ನಗರ ನಿವಾಸದಲ್ಲಿ ಬೊಮ್ಮಾಯಿಯವರನ್ನು ಭೇಟಿಯಾದ ರಾಜ್‌ ಕುಟುಂಬದ ಸದಸ್ಯರು, ಕಂಠೀರವ ಸ್ಟುಡಿಯೋದಲ್ಲಿರುವ ರಾಜ್‌ಕುಮಾರ್ ಮತ್ತು ಪಾರ್ವತಮ್ಮ, ಪುನೀತ್ ಸಮಾಧಿ ಸ್ಥಳದ ಅಭಿವೃದ್ಧಿ ವಿಚಾರದ ಬಗ್ಗೆ ಚರ್ಚೆ ನಡೆಸಿದರು.

ನಟ ರಾಘವೇಂದ್ರ ರಾಜಕುಮಾರ್, ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಯುವ ರಾಜಕುಮಾರ್ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, "ಸ್ಥಳದಲ್ಲಿ ಮೂವರ ಸಮಾಧಿ ಇದೆ. ಅದರ ಅಭಿವೃದ್ಧಿ ಬಗ್ಗೆ ಸರ್ಕಾರ ಗಮನ ಕೊಡಬೇಕು" ಎಂದು ಮನವಿ ಮಾಡಿದರು.

ಈ ಸುದ್ದಿ ಓದಿದ್ದೀರಾ? 3.33 ಕೋಟಿ ರೂ. ಹಣ ಸಂಗ್ರಹಿಸಿದ ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನ

ಜೊತೆಗೆ ಮುಖ್ಯಮಂತ್ರಿಯವರಿಗೆ ತಾವು ಈ ವಿಚಾರವಾಗಿ ಸಿದ್ಧಪಡಿಸಿದ್ದ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಅನ್ನು ರಾಜ್‌ ಕುಟುಂಬದ ಸದಸ್ಯರು ತೋರಿಸಿದರು. ಇದರ ವೀಕ್ಷಣೆ ಬಳಿಕ ಲೋಕೋಪಯೋಗಿ ಇಲಾಖೆಯಿಂದ ಯೋಜನೆ ಅಂದಾಜು ವಿವರ ತರಿಸಲು ಸಿಎಂ ಸೂಚನೆ ನೀಡಿದರು. ಅದನ್ನು ಪರಿಶೀಲಿಸಿದ ನಂತರ ಮುಂದಿನ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದರು.     

ನಿಮಗೆ ಏನು ಅನ್ನಿಸ್ತು?
0 ವೋಟ್