ಪ್ರಧಾನಿ ಮೋದಿ ಮಾತಿಗೆ ಆರ್‌ಎಸ್‌ಎಸ್‌ನಲ್ಲಿ ಕವಡೆ ಕಾಸಿನ ಕಿಮ್ಮತ್ತಿಲ್ಲ: ಮೇಲ್ಮನೆ ವಿಪಕ್ಷ ನಾಯಕ ಹರಿಪ್ರಸಾದ್

  • ಆರ್‌ಎಸ್‌ಎಸ್‌ ವಿರುದ್ದ ವಾಗ್ದಾಳಿ ನಡೆಸಿದ ವಿಧಾನ ಪರಿಷತ್‌ ವಿಪಕ್ಷ ನಾಯಕ 
  • ಪ್ರಧಾನಿ ನರೇಂದ್ರ ಮೋದಿ ಲೇವಡಿ ಮಾಡಿದ  ಬಿ ಕೆ ಹರಿಪ್ರಸಾದ್‌ 

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಸಾಮಾಜಿಕ ಜಾಲತಾಣದ ಪ್ರೊಫೈಲ್ ಡಿಪಿಗಳಲ್ಲಿ ರಾಷ್ಟ್ರಧ್ವಜದ ಚಿತ್ರ ಹಾಕಲು ಪ್ರಧಾನಿ ನರೇಂದ್ರ ಮೋದಿ ದೇಶವಾಸಿಗಳಿಗೆ ಕರೆ ನೀಡಿದ್ದರು. ಆದರೆ ಪ್ರಧಾನಿಗಳ ಮಾತಿಗೆ ಅವರ ಪಕ್ಷದ ಬೆನ್ನೆಲೆಬು ರಾಷ್ಟ್ರೀಯ ಸ್ವಯಂ ಸೇವಕ ಸಂಘವೇ ಕಿಮ್ಮತ್ತು ನೀಡಿಲ್ಲ. ಮೋದಿಯವರ ಮಾತಿಗೆ ಆರ್‌ಎಸ್‌ಎಸ್‌ ಕೊಟ್ಟ ಬೆಲೆ ಇದೇನಾ? ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ಬಿ ಕೆ ಹರಿಪ್ರಸಾದ್ ಅವರ ಟ್ವೀಟ್ ಸಾರಾಂಶ ಹೀಗಿದೆ.

ತ್ರಿವರ್ಣ ಧ್ವಜದ ವಿಚಾರದಲ್ಲಿ ಆರ್‌ಎಸ್‌ಎಸ್‌ ನಡೆದುಕೊಂಡಿರುವ ರೀತಿಯನ್ನು ಬಿ ಕೆ ಹರಿಪ್ರಸಾದ್ ಖಂಡಿಸಿದ್ದಾರೆ. 
ತ್ರಿವರ್ಣ ಧ್ವಜಕ್ಕೆ ಆರ್‌ಎಸ್‌ಎಸ್‌ ಗೌರವ ಕೊಟ್ಟ ಇತಿಹಾಸವೇ ಇಲ್ಲ. ತಿರಂಗಾವನ್ನು ಸಾಮಾಜಿಕ ಜಾಲತಾಣದ ಡಿಪಿಯಾಗಿ ಬದಲಾಯಿಸದೆ, ಆರ್‌ಎಸ್‌ಎಸ್‌ ಭಗವಾಧ್ವಜದ ಮೇಲಿನ ವ್ಯಾಮೋಹ ಪ್ರದರ್ಶನ ಮಾಡಿದೆ ಎಂದು ಹರಿಪ್ರಸಾದ್ ಕಿಡಿ ಕಾರಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್