ಕಳೆದು ಹೋದ ಕಟ್ಟಡ ಹುಡುಕಿಕೊಡಿ : ಪೊಲೀಸರಿಗೆ ದೂರು ನೀಡಿದ  ಆಮ್ ಆದ್ಮಿ ಪಾರ್ಟಿ 

  • ಚೆನ್ನಮ್ಮನ ಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೊಂದು ಅಪರೂಪದ ಪ್ರಕರಣ
  • ವಿದ್ಯಾಪೀಠ ವಾರ್ಡ್‌ ಸಿಟಿ ಬೆಡ್ ವ್ಯಾಪ್ತಿಯಲ್ಲಿ ಕಾಣೆಯಾದ ಕಟ್ಟಡ

ವ್ಯಕ್ತಿ ಕಾಣೆಯಾಗಿದ್ದಾನೆ, ನಾಯಿ ಕಾಣೆಯಾಗಿದೆ, ವಾಹನ ಕಳುವಾಗಿದೆ, ಆಭರಣ ಕಳುವಾಗಿದೆ,  ಹೀಗೆ ಹಲವು ಬಗೆಯ ಕಳ್ಳತನಗಳನ್ನು ನೋಡಿದ್ದ ನಮಗೀಗ ಹೊಸ ಬಗೆಯ ಕಳ್ಳತನವೊಂದರ ಪರಿಚಯ ಮಾಡಿಸಲು ಆಮ್ ಆದ್ಮಿ ಪಕ್ಷ (ಎಎಪಿ) ಹೊರಟಿದೆ.

ಬೆಂಗಳೂರಿನ ಬಸವನಗುಡಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಿಟಿ ಬೆಡ್ ವಾರ್‌ಡ್‌ನಲ್ಲಿ ಕಟ್ಟವೊಂದು ಕಳುವಾಗಿರುವ ಬಗ್ಗೆ ಆಮ್ ಆದ್ಮಿ ಪಕ್ಷ ಸ್ಥಳೀಯ ಪೊಲೀಸರಿಗೆ ದೂರು ನೀಡಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಎಎಪಿ ನೀಡಿರುವ ದೂರು ಬಿಬಿಎಂಪಿ ಅಧಿಕಾರಿಗಳ ಹೊಣೆಗೇಡಿತನಕ್ಕೊಂದು ಕೈಗನ್ನಡಿಯಾಗಿದೆ.

ಎಎಪಿ ಮುಖಂಡ ಕೃಷ್ಣಮೂರ್ತಿಗೌಡ ಕಟ್ಟಡ ಕಳುವಿನ ಬಗ್ಗೆ ಚೆನ್ನಮ್ಮನ ಕೆರೆ ಪೊಲೀಸರಿಗೆ ದೂರು ನೀಡಿದ್ದಾರೆ. 

Image

ಬಸವನಗುಡಿ ವಿಧಾನಸಭಾ ಕ್ಷೇತ್ರದ ವಿಧ್ಯಾಪೀಠ ವಾರ್ಡಿನ ಸಿ.ಟಿ ಬೆಡ್ ವಲಯದಲ್ಲಿ 2016 ರಲ್ಲಿ SC-ST ವಿಧ್ಯಾರ್ಥಿಗಳಿಗೆ ಕಂಪ್ಯೂಟರ್ ಶಿಕ್ಷಣ ಕಲಿಸುವ ಸಲುವಾಗಿ ಬಿಬಿಎಂಪಿ ಸುಮಾರು 24 ಲಕ್ಷ ಮೊತ್ತದಲ್ಲಿ ಒಂದು ಕಟ್ಟಡ ನಿರ್ಮಾಣ ಮಾಡಿತ್ತು.

ಈ ಸುದ್ದಿ ಓದಿದ್ದೀರಾ? : ಪರಿಶಿಷ್ಟ ವಿದ್ಯಾರ್ಥಿಗಳ ‘ಟೂಲ್‌ಕಿಟ್‌’ ಖರೀದಿ ಹಗರಣ ಆರೋಪ: ಸಚಿವ ಅಶ್ವತ್ಥ್‌ ನಾರಾಯಣ್‌ ವಿರುದ್ಧ ಎಎಪಿ ದೂರು

ಆದರೆ ಆ ಕಟ್ಟಡ ಬಸವನಗುಡಿ ಕಾರ್ಯಪಾಲಕ ಅಭಿಯಂತರರಾದ ಧರಣೇಂದ್ರ ಕುಮಾರ್ ರವರ ನಿರ್ಲಕ್ಷದಿಂದ ಯಾವುದೇ ಚಟುವಟಿಕೆಯಿಲ್ಲದೆ, ಹಾಗೆಯೇ ಉಳಿದಿತ್ತು. ಅಕ್ಟೋಬರ್ 2019ರ ವರೆಗೆ ಇದ್ದ ಕಟ್ಟಡ ನಂತರ ಕಾಣೆಯಾಗಿತ್ತು. ಇದನ್ನು ಗಮನಿಸಿದ ಕೃಷ್ಣಮೂರ್ತಿಗೌಡ, ಈ ಬಗ್ಗೆ ಸಿಕೆ ಅಚ್ಚುಕಟ್ಟು ಪೊಲೀಸ್‌ ಠಾಣೆ ದೂರು ದಾಖಲಿಸಿದ್ದಾರೆ.

ಕಾಣೆಯಾಗಿರುವ ಕಟ್ಟಡವನ್ನು ಪತ್ತೆ ಮಾಡಿ ಎಸ್‌ಸಿ-ಎಸ್‌ಟಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್