ಜಿಮ್‌ಗಳಲ್ಲಿ ಪ್ರೊಟೀನ್ ಪೌಡರ್ ಮಾರಾಟದ ಬಗ್ಗೆ ಅಗತ್ಯ ಕಾನೂನು ಕ್ರಮ: ಸಚಿವ ಸುಧಾಕರ್

  • ಪ್ರೊಟೀನ್ ಪೌಡರ್ ಮಾರಾಟದ ಬಗ್ಗೆ ಮಾಹಿತಿ ಕೇಳಿದ ಆರೋಗ್ಯ ಇಲಾಖೆ
  • ಪರಿಶೀಲನೆ ಬಳಿಕ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದ ಸಚಿವರು 

ಜಿಮ್‌ಗಳಲ್ಲಿ ಪ್ರೊಟೀನ್ ಪೌಡರ್ ಮಾರಾಟ  ಮಾಡುವ ವಿಚಾರದಲ್ಲಿ ಅಗತ್ಯ ಪರಿಶೀಲನೆ ನಡೆಸಿ ಮುಂದುವರೆಯಲು ಆರೋಗ್ಯ ಇಲಾಖೆ ಆದೇಶಿಸಿದೆ.

ಈ ಸಂಬಂಧ ಟ್ವಿಟರ್‌ನಲ್ಲಿ ಮಾಹಿತಿ ನೀಡಿರುವ ಆರೋಗ್ಯ ಸಚಿವ ಡಾ ಸುಧಾಕರ್, "ಜಿಮ್‌ಗಳಲ್ಲಿ ಆರೋಗ್ಯಕ್ಕೆ ಹಾನಿಕರವಾದ ಪ್ರೊಟೀನ್ ಪೌಡರ್ ಮಾರಾಟವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಮಾದರಿ ಸಂಗ್ರಹಗಳನ್ನು ಪರೀಕ್ಷೆಗೊಳಪಡಿಸಿ ಅಗತ್ಯ ಕಾನೂನು ಕ್ರಮ ಜರುಗಿಸಲು ಸೂಚಿಸಲಾಗಿದೆ" ಎಂದಿದ್ದಾರೆ.

Eedina App

ಸಾರ್ವಜನಿಕರು ಸಂಸ್ಕರಿಸಿದ ಆಹಾರ ಉತ್ಪನ್ನಗಳನ್ನ ಖರೀದಿಸುವ ಮುನ್ನ @fssaiindia ಮಾನ್ಯತೆ ನಮೂದಿಸಿರುವ ಬಗ್ಗೆ ತಪ್ಪದೇ ಖಚಿತಪಡಿಸಿಕೊಳ್ಳಬೇಕು ಎಂದು ಹೇಳಿದ್ದಾರೆ. ಸಚಿವರ ಟ್ವೀಟ್ ಮಾಹಿತಿ ಹೀಗಿದೆ:

ಮಂಗಳವಾರ ವಿಧಾನಸಭೆ ಕಲಾಪದಲ್ಲಿ ಈ ಬಗ್ಗೆ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಸದನದ ಗಮನ ಸೆಳೆದು ಪ್ರೊಟೀನ್ ಪೌಡರ್ ಮಾರಾಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಸದನದಲ್ಲಿ ಇದಕ್ಕೆ ಉತ್ತರ ನೀಡಿದ್ದ ಆರೋಗ್ಯ ಸಚಿವ ಸುಧಾಕರ್, ಈ ಬಗ್ಗೆ ಪರಿಶೀಲಿಸಿ ಅಗತ್ಯ ಕಾನೂನು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app