ಸಿದ್ದರಾಮಯ್ಯಗೆ ಸವಾಲೆಸೆದ ಬಿಜೆಪಿ |ತಾಕತ್ತಿದ್ದರೆ ಈ ಕ್ಷೇತ್ರಗಳಲ್ಲಿ ಗೆದ್ದು ತೋರಿಸಿ ಎಂದ ಕೇಸರಿ ಪಡೆ

SIDDARAMIAH PC
  • ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಮತ್ತೆ ತಾಕತ್ತಿನ ಸವಾಲು ಹಾಕಿದ ಬಿಜೆಪಿ
  • ಒಂದೇ ಒಂದು ಕ್ಷೇತ್ರವೂ ಇಲ್ಲದೇ ಅಲೆದಾಡುತ್ತಿರುವ ನಾಯಕ ಎಂದು ಲೇವಡಿ

ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮತ್ತೆ ಟ್ವೀಟ್ ಸಮರ ಸಾರಿರುವ ರಾಜ್ಯ ಬಿಜೆಪಿ, ಈ ಬಾರಿ ಅವರ ಸ್ಪರ್ಧೆ ವಿಚಾರದಲ್ಲಿ ಸವಾಲೆಸೆದಿದೆ.

ಈ ಕುರಿತು ಟ್ವೀಟ್ ಮಾಡಿ ಸಿದ್ದರಾಮಯ್ಯ ಕೆಣಕಿರುವ ಬಿಜೆಪಿ ಸಾಧ್ಯವಿದ್ದರೆ ಚಾಮುಂಡೇಶ್ವರಿ, ಬಾದಾಮಿ ಅಥವಾ ವಿರಾಜಪೇಟೆಯಲ್ಲಿ ನಿಂತು ಗೆದ್ದು ತೋರಿಸಲಿ ಎಂದಿದೆ. ರಾಜ್ಯ ಬಿಜೆಪಿ ಮಾಡಿರುವ ಟ್ವೀಟ್ ಹೀಗಿದೆ.

ಈ ಸುದ್ದಿ ಓದಿದ್ದೀರಾ? :ʻಹಿಂದೂಗಳ ಮತ ನಮಗೆ ಬೇಡʼ ಎನ್ನುವ ತಾಕತ್ತು ಕಾಂಗ್ರೆಸ್‌ಗೆ ಇದೆಯೇ?: ಬಿಜೆಪಿ ಟ್ವೀಟ್‌ ಸಮರ

ಅನಾಯಾಸವಾಗಿ ಚುನಾವಣೆ ಗೆಲ್ಲಲು ಸಾಧ್ಯವಿರುವ ಒಂದೇ ಒಂದು ಕ್ಷೇತ್ರವೂ ಇಲ್ಲದೇ ಅಲೆದಾಡುಡ್ತಾ ಇರುವ ಸಿದ್ದರಾಮಯ್ಯ, ಹೇಳುವುದು ಮಾತ್ರ ತಾನು ಎಲ್ಲಿ ಬೇಕಾದರೂ ನಿಲ್ಲುವ ಲೀಡರ್‌ ಎಂದು. "ತಾಕತ್ತು ಎಂಬ ಪದ ನಿಮ್ಮ ಪುಸ್ತಕದಲ್ಲಿದ್ದರೆ ಚಾಮುಂಡೇಶ್ವರಿಯಲ್ಲೋ, ಬಾದಾಮಿಯಲ್ಲೋ, ವಿರಾಜಪೇಟೆಯಲ್ಲೋ ನಿಂತು ಗೆಲ್ಲಿ. ನಿಮ್ಮ ನಾಯಕತ್ವ ಸಾಬೀತು ಮಾಡಿ" ಎಂದು ಸವಾಲೆಸೆದಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app