ಸಿದ್ದರಾಮಯ್ಯ75| ರಾಹುಲ್ ಸಮ್ಮುಖದಲ್ಲೇ ಮೊಳಗಿದ ʼಮುಂದಿನ ಸಿಎಂ ಸಿದ್ದರಾಮಯ್ಯʼ ಘೋಷಣೆ

ದಾವಣಗೆರೆಯಲ್ಲಿ ನಡೆಯುತ್ತಿರುವ ಸಿದ್ದರಾಮೋತ್ಸವ-75, ಕಾರ್ಯಕ್ರಮದ ಉದ್ಘಾಟನೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಮ್ಮುಖದಲ್ಲಿಯೇ ಕಾರ್ಯಕರ್ತರು ಮತ್ತು ಅಭಿಮಾನಿಗಳು ‘ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜೈ..’ ಎಂದು ಘೋಷಣೆ ಕೂಗಿದರು.

ಕಾರ್ಯಕ್ರಮ ಉದ್ಘಾಟನೆ ಬಳಿಕ ಸಿದ್ದರಾಮಯ್ಯ ಅವರಿಗೆ ಡಿ ಕೆ ಶಿವಕುಮಾರ್ ರಾಮನಗರದ ರೇಷ್ಮೆ ಶಾಲು ಹೊದಿಸಿ ಸನ್ಮಾನಿಸಿದರು. ನಂತರ ಇಂದಿರಾ ಗಾಂಧಿ ಅವರ ಫೋಟೊ ನೀಡಿ ಜನ್ಮದಿನದ ಶುಭಕೋರಿದರು.

ಬಳಿಕ ವೇದಿಕೆಯ ಮೇಲೆ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಪರಸ್ಪರ ಆಲಿಂಗನ ಮಾಡಿಕೊಂಡರು. ಕೈ ಕೈಕುಲುಕುತ್ತ ನೆರೆದ ಜನಸ್ತೋಮದತ್ತ ಕೈಬೀಸಿ ಒಗ್ಗಟ್ಟಿನ ಸಂದೇಶ ಸಾರಿದರು.

ಇಬ್ಬರು ನಾಯಕರ ಈ ಒಗ್ಗಟ್ಟಿನ ಸಂದೇಶಕ್ಕೆ ನೆರೆದ ಜನ ಹರ್ಷೋದ್ಗಾರದೊಂದಿಗೆ ಪ್ರತಿಕ್ರಿಯಿಸಿ ಸಂಭ್ರಮಿಸಿದರು. ಜೊತೆಗೆ ಮುಂದಿನ ʼಮುಖ್ಯಮಂತ್ರಿ ಸಿದ್ದರಾಮಯ್ಯʼ, ʼಹೌದು ಹುಲಿಯಾʼ, ಘೋಷಣೆಗಳ ಮೂಲಕ ಸಿದ್ದರಾಮಯ್ಯ ಅಭಿಮಾನಿಗಳು ತಮ್ಮ ನಾಯಕನಿಗೆ ಶುಭ ಕೋರಿದರು. 

ನಿಮಗೆ ಏನು ಅನ್ನಿಸ್ತು?
5 ವೋಟ್