ಚಿಕ್ಕಮಗಳೂರಿನಿಂದ ಕಣಕ್ಕಿಳಿಯುವಂತೆ ಸಿದ್ದರಾಮಯ್ಯಗೆ ಆಹ್ವಾನ 

  • ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್ ಕೀರ್ತಿ ಪತಾಕೆ ಹಾರಿಸಲು ಸಿದ್ದರಾಮಯ್ಯಗೆ ಮನವಿ 
  • 'ಹಾಲಿ ಶಾಸಕರ ನಡೆನುಡಿಯಿಂದ ಚಿಕ್ಕಮಗಳೂರಿನ ಜನ ಬೇಸತ್ತು ಹೋಗಿದ್ದಾರೆ' 

 ಅಮೃತ ಮಹೋತ್ಸವದ ಬಳಿಕ ವಿಪಕ್ಷ ನಾಯಕ ಸಿದ್ದರಾಮಯ್ಯ ಮೇಲೆ ಅಭಿಮಾನಿಗಳ ಪ್ರೀತಿಯ ಹೊಳೆ ಹರಿಯುತ್ತಿದೆ. ದಾವಣಗೆರೆಯ ಜನಸಾಗರ ಕಂಡ ಬಳಿಕವಂತೂ ಸಿದ್ದರಾಮಯ್ಯನವರ ಶಕ್ತಿ ಬಗ್ಗೆ ಎಲ್ಲರಿಗೂ ಸಣ್ಣದೊಂದು ಸಂದೇಶ ಹೊರಟಿದೆ. ಹೀಗಾಗಿ ಸಿದ್ದರಾಮಯ್ಯ ಮುಂದಿನ ಚುನಾವಣೆಗೆ ತಮ್ಮ ಕ್ಷೇತ್ರದಿಂದಲೇ ಸ್ಪರ್ಧಿಸುವಂತಾಗಲಿ ಎಂಬ ಆಶಾ ಭಾವನೆಯನ್ನು ಹಲವು ನಾಯಕರು ಹೊರಹಾಕಿದ್ದಾರೆ. 

Image

ಈ ಬಾರಿ ಸಿದ್ದರಾಮಯ್ಯನವರು ಚಿಕ್ಕಮಗಳೂರಿನಿಂದ ಕಣಕ್ಕಿಳಿಯುವಂತೆ ಅಲ್ಲಿನ ಕಾಂಗ್ರೆಸ್ ಕಾರ್ಯಕರ್ತರು ಆಹ್ವಾನಿಸಿದ್ದಾರೆ. ಕಿಸಾನ್ ಕಾಂಗ್ರೆಸ್ ಅದ್ಯಕ್ಷ ಸಚಿನ್ ಮೀಗಾ ಈ ಕುರಿತು ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದು ನಿವೇದನೆ ಮಾಡಿದ್ದಾರೆ. ಆ ಪತ್ರದ ಸಾರಾಂಶ ಹೀಗಿದೆ:

ಈ ಸುದ್ದಿ ಓದಿದ್ದೀರಾ? : ಸಿದ್ದರಾಮಯ್ಯ75| ಶುಭಾಶಯ ಕೋರದೆ ಸೌಜನ್ಯ ಮರೆತರೇ ವಿರೋಧ ಪಕ್ಷಗಳ ಘಟಾನುಘಟಿಗಳು?

"ತಾವು 2023ರ ವಿಧಾನಸಭೆ ಚುನಾವಣೆಗೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಕೋರುತ್ತೇವೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಜನ ಹಾಲಿ ಶಾಸಕರ ವರ್ತನೆಯಿಂದ ಜನ ಬೇಸತ್ತಿದ್ದಾರೆ. ನಿಮ್ಮಂತಹ ಜನನಾಯಕರು ದಿವಂಗತ ಇಂದಿರಾ ಗಾಂಧಿ ಅವರಿಗೆ ಪುರ್ನಜನ್ಮ ನೀಡಿದ ಕ್ಷೇತ್ರದಿಂದ ಈ ಬಾರಿ ತಾವು ಸ್ಪರ್ಧಿಸಿ, ನಿಮ್ಮ ಗೆಲುವಿನ ಮೂಲಕ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ  ಮರಳಿ ಚೈತನ್ಯ ದೊರೆಯುವಂತಾಗಲಿ ಎಂದು ಕೇಳಿಕೊಳ್ಳುತ್ತೇನೆ". 

ನಿಮಗೆ ಏನು ಅನ್ನಿಸ್ತು?
0 ವೋಟ್