
- ಬ್ರಾಂಡ್ ಬೆಂಗಳೂರಿನ ಘನತೆಗೆ ಬಿಜೆಪಿ ಮಸಿ ಬಳಿಯುತ್ತಿದೆ
- ಸರ್ಕಾರ ಎಚ್ಚೆತ್ತುಕೊಳ್ಳದಿದ್ದರೆ ರಾಜ್ಯಕ್ಕೆ ಸಮಸ್ಯೆ ಎದುರಾಗಲಿದೆ
"ಕಾಂಗ್ರೆಸ್ ಪಕ್ಷದ ಅವಧಿಯಲ್ಲಿ ಬ್ರಾಂಡ್ ಬೆಂಗಳೂರು ಎಂದು ಕರೆಯಿಸಿಕೊಳ್ಳುತ್ತಿದ್ದ ಬೆಂಗಳೂರಿನ ಸ್ಥಿತಿ ಬಿಜೆಪಿ ಅವಧಿಯಲ್ಲಿ ಗೋವಿಂದಾ ಗೋವಿಂದ ಎನ್ನುವಂತಾಗಿದೆ" ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಲೇವಡಿ ಮಾಡಿದರು.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ ಕೆ ಶಿವಕುಮಾರ್, "ಕಳೆದ 20 ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ಬೆಂಗಳೂರಿಗೆ ತಂದುಕೊಟ್ಟಿದ್ದ ಘನತೆಯನ್ನು ಈ ಸರ್ಕಾರ ಹಾಳುಮಾಡಿದೆ. ಬೆಂಗಳೂರು ಸ್ಥಿತಿ ಈಗ ಗೋವಿಂದಾ ಗೋವಿಂದಾ ಗೋವಿಂದ' ಎನ್ನುವಂತಾಗಿದೆ ವ್ಯಂಗ್ಯ ಮಾಡಿದರು.
ಈ ಸುದ್ದಿ ಓದಿದ್ದೀರಾ? : ಬೆಂಗಳೂರು ಮಳೆ | 225 ಕೋಟಿ ನಷ್ಟ; ಸಿಎಂಗೆ ಪತ್ರ ಬರೆದ ಓಆರ್ಆರ್ ಅಸೋಸಿಯೇಷನ್
"ಸರ್ಕಾರದವರ ಹೊಣೆಗೇಡಿತನದಿಂದಾಗಿ ಸ್ಥಳೀಯ ಉದ್ಯೋಗ ಸೃಷ್ಟಿಗೆ ನೆರವು ನೀಡುತ್ತಿದ್ದ ಹಲವಾರು ಕಂಪನಿಗಳು ಕೂಡ ಪರದಾಡುವ ಸ್ಥಿತಿ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಔಟರ್ ರಿಂಗ್ ರೋಡ್ ಕಂಪನಿಗಳ ಸಂಘದವರು ಸರಕಾರಕ್ಕೆ ಪತ್ರ ಬರೆದು ತಮಗಾದ ತೊಂದರೆ, ನಷ್ಟದ ಬಗ್ಗೆ ಹೇಳಿಕೊಂಡಿದ್ದಾರೆ. ಸರ್ಕಾರ ಇದೇ ರೀತಿ ಜವಾಬ್ದಾರಿ ಮರೆತು ನಡೆದುಕೊಂಡರೆ ಮುಂದೆ ಸಾಕಷ್ಟು ಸಮಸ್ಯೆ ರಾಜ್ಯಕ್ಕಾಗಲಿದೆ" ಎಂದು ಶಿವಕುಮಾರ್ ಹೇಳಿದರು.
ಮಳೆ ಸಮಸ್ಯೆ ಬಗ್ಗೆ ಪ್ರಧಾನಿಗೆ ಟ್ವೀಟ್ ಮಾಡಿದ್ದ ಮೋಹನ್ ದಾಸ್ ಪೈ
"ಬೆಂಗಳೂರಿನ ರಾಜಕಾಲುವೆಗಳು ಹೂಳಿನಿಂದ ತುಂಬಿವೆ. ಭ್ರಷ್ಟಾಚಾರ ಮಿತಿಮೀರಿದೆ. ಭ್ರಷ್ಟ ವ್ಯವಸ್ಥೆಯಿಂದಾಗಿ ನಗರದೆಲ್ಲೆಡೆ ಕಸ ಬಿದ್ದಿದೆ. ಯೋಜನೆಗಳನ್ನು ಪರಿಶೀಲಿಸಿ ಬೆಂಗಳೂರು ಉಳಿಸಿ" ಎಂದು ಪ್ರಧಾನಿಗೆ ಮನವಿ ಮಾಡಿದ್ದರು.
ಈ ಸುದ್ದಿ ಓದಿದ್ದೀರಾ? : ರಾಜ್ಯದಲ್ಲಿ ಭ್ರಷ್ಟಾಚಾರ ಮುಕ್ತ, ಅಭಿವೃದ್ಧಿ ಪರ ಸರ್ಕಾರದ ಅಗತ್ಯವಿದೆ: ಪ್ರಧಾನಿ ಮೋದಿಗೆ ಮೋಹನದಾಸ್ ಪೈ ಮನವಿ
"ರಾಜ್ಯ ರಾಜ್ಯಧಾನಿಯಲ್ಲಿ ಹಲವು ದಿನಗಳಿಂದ ಧಾರಕಾರ ಮಳೆ ಸುರಿಯುತ್ತಿದ್ದು, ವ್ಯವಸ್ಥಿತವಾದ ನಿರ್ವಹಣೆ ಇಲ್ಲದೇ ನಗರದ ರಸ್ತೆಗಳೆಲ್ಲ ಗುಂಡಿಮಯವಾಗಿವೆ. ಮಳೆ ನೀರಿನೊಂದಿಗೆ ಚರಂಡಿ ನೀರು ಮನೆಗೆ ನುಗ್ಗುತ್ತಿದೆ. ಅವೈಜ್ಞಾನಿಕವಾದ ಕಾಮಗಾರಿಗಳಿಂದ ವಾಹನ ದಟ್ಟಣೆ ಹೆಚ್ಚಾಗಿದೆ. ಇವೆಲ್ಲ ಸಮಸ್ಯೆಗಳಿಂದ ಪರಾಡುತ್ತಿರುವ ನಗರದ ಜನತೆಗೆ ಪರಿಹಾರ ನೀಡಿ" ಎಂದು ಮೋಹನ್ ದಾಸ್ ಪೈ ಟ್ವೀಟ್ ಮಾಡಿದ್ದರು.