ಫ್ಲೆಕ್ಸ್‌ ನೆಪದಲ್ಲಿ ಅಶಾಂತಿ ಸೃಷ್ಟಿಸುವವರ ವಿರುದ್ದ ಶಿಸ್ತುಕ್ರಮಕ್ಕೆ ಬಿ ಕೆ ಹರಿಪ್ರಸಾದ್ ಆಗ್ರಹ

  • ಮಂಗಳೂರಿನಲ್ಲಿ ಸಾವರ್ಕರ್ ಫ್ಲೆಕ್ಸ್ ಅಳವಡಿಸಿದ ಬಗ್ಗೆ ಆಕ್ರೋಶ
  • ಅಶಾಂತಿ ಮೂಡಿಸಲು ಹೊರಟವರ ವಿರುದ್ದ ಕ್ರಮಕ್ಕೆ  ಒತ್ತಾಯ

ಫ್ಲೆಕ್ಸ್, ಬ್ಯಾನರ್ ಹೆಸರಿನಲ್ಲಿ ಅಶಾಂತಿ ಸೃಷ್ಟಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಶಿಸ್ತುಕ್ರಮ ಜರುಗಿಸುವಂತೆ ವಿಧಾನಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿ ತಮ್ಮ ಆಕ್ರೋಶ ಹೊರಹಾಕಿರುವ ಹರಿಪ್ರಸಾದ್ ಉಡುಪಿ ಪ್ರಕರಣವನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದಾರೆ.

Eedina App

ಮಂಗಳೂರಿನಲ್ಲಿ ಸಾವರ್ಕರ್ ಫೋಟೋ ಹಾಕಿದ್ದ ವಿಚಾರವನ್ನು ಖಂಡಿಸಿದ ಹರಿಪ್ರಸಾದ್ ಕೊಲೆಗಾರನನ್ನು ಆರಾಧಿಸುವುದು, ಕೊಲೆಗಡುಕರ ಸಂಸ್ಕೃತಿ..! ಮಹಾತ್ಮ ಗಾಂಧಿಯ ಕೊಲೆಗಾರ ಗೋಡ್ಸೆಯ ಅರಾಧಕರು ಬಹಿರಂಗವಾಗಿ ಫ್ಲೆಕ್ಸ್ ಹಾಕಲು ಒಪ್ಪಿಗೆ ನೀಡಿದವರಾರು? ಎಂದು ಪ್ರಶ್ನಿಸಿದ್ದಾರೆ.

AV Eye Hospital ad

ಈ ಸುದ್ದಿ ಓದಿದ್ದೀರಾ? : ಉಡುಪಿ | ಸಾವರ್ಕರ್ ಪೋಸ್ಟರ್‌ಗೆ ಬಿಜೆಪಿ ಮುಖಂಡ ಮಾಲಾರ್ಪಣೆ: ಬಾವುಟ ತೆಗೆದು ಹಾಕಿದ ಪೊಲೀಸರು

ಘಟನೆ ಕುರಿತಂತೆ ಮಂಗಳೂರು ಪೊಲೀಸ್ ಕಮಿಷನರ್ ಕೂಡಲೇ ದುಷ್ಕ್ರರ್ಮಿಗಳ ವಿರುದ್ಧ ದೂರು ದಾಖಲಿ, ಫ್ಲೆಕ್ಸ್ ನೆಪದಲ್ಲಿ ಅಶಾಂತಿ ಸೃಷ್ಟಿಸಲು ಹೊಂಚು ಹಾಕುತ್ತಿರುವವರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಹರಿಪ್ರಸಾದ್ ಒತ್ತಾಯಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app