'ಕಾವೇರಿ ದಕ್ಷಿಣ ವನ್ಯಜೀವಿ ಅಭಯಾರಣ್ಯ' ಘೋಷಿಸಿದ ತಮಿಳುನಾಡು ಸಿಎಂ ಎಂ ಕೆ ಸ್ಟಾಲಿನ್‌

TAMILUNADU CAUVERY WILDLIFE CENTURY.
  • ಸರ್ಕಾರಿ ಮಟ್ಟದ ಗ್ರೀನ್ ಕ್ಲೈಮೇಟ್ ಕಂಪನಿ ಜೊತೆ ಜೀವವೈವಿಧ್ಯ ಸಂರಕ್ಷಿಸುವ ಗುರಿ
  • 35 ಬಗೆಯ ಸಸ್ತನಿಗಳು, 238 ಜಾತಿಯ ಪಕ್ಷಿ ಪ್ರಬೇಧ ಹಾಗೂ ಆನೆಗಳ ವಾಸಸ್ಥಾನ

'ಕಾವೇರಿ ದಕ್ಷಿಣ ವನ್ಯಜೀವಿ ಅಭಯಾರಣ್ಯ'ವನ್ನು ತಮಿಳುನಾಡು ಸರ್ಕಾರವು 17ನೇ ವನ್ಯಜೀವಿ ಅಭಯಾರಣ್ಯವಾಗಿ ಘೋಷಿಸಿದೆ.

ಈ ಬಗ್ಗೆ ಮಂಗಳವಾರ ಅಧಿಕೃತ ಸೂಚನೆ ಹೊರಡಿಸಿರುವ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌, "ಕೃಷ್ಣಗಿರಿ ಮತ್ತು ಧರ್ಮಪುರಿ ಜಿಲ್ಲೆಗಳ ಅರಣ್ಯ ವ್ಯಾಪ್ತಿಯನ್ನು ಒಳಗೊಂಡಿರುವ ಹೊಸೂರು ಅರಣ್ಯ ವಿಭಾಗದ ಅಂಕೆಟ್ಟಿ, ಉರಿಗಾಂ ಮತ್ತು ಜವಳಗಿರಿ ವ್ಯಾಪ್ತಿಯಲ್ಲಿನ 686.406 ಚ.ಕಿಮೀ ಮೀಸಲು ಅರಣ್ಯ ಪ್ರದೇಶವನ್ನು ಸೇರಿಸಲಾಗಿದೆ" ಎಂದಿದ್ದಾರೆ. 

Eedina App

"ವನ್ಯಜೀವಿ (ರಕ್ಷಣೆ) ಕಾಯಿದೆ, 1972 ಹಾಗೂ ಸೆಕ್ಷನ್ 26A(1) (b) ಅಡಿಯಲ್ಲಿ ಕಾವೇರಿ ದಕ್ಷಿಣ ವನ್ಯಜೀವಿ ಅಭಯಾರಣ್ಯದ ಘೋಷಣೆ ಮಾಡಲಾಗಿದೆ. ಪ್ರಸ್ತುತ ಕರ್ನಾಟಕ- ತಮಿಳುನಾಡು ನಡುವೆ ಹಂಚಿಕೆಯಾಗಿರುವ ಕಾವೇರಿ ಉತ್ತರ ವನ್ಯಜೀವಿ ಅಭಯಾರಣ್ಯವನ್ನು ರೂಪಿಸುವ ಅರಣ್ಯಗಳೊಂದಿಗೆ ಸಂರಕ್ಷಿತ ಅರಣ್ಯ ಭೂ ಪ್ರದೇಶವಾಗಿದೆ.

ಈ ಪ್ರದೇಶದಲ್ಲಿ 35 ಜಾತಿಯ ಸಸ್ತನಿಗಳು ಮತ್ತು 238 ಜಾತಿಯ ಪಕ್ಷಿ ಪ್ರಬೇಧಗಳು, ನಾಲ್ಕು ಕೊಂಬಿನ ಹುಲ್ಲೆ, ಆಮೆ, ಮೊಸಳೆ ಸೇರಿ ಹಲವು ಪ್ರಾಣಿಗಳು ಕೂಡ ಈ ಕಾಡಿನಲ್ಲಿವೆ. ಅಲ್ಲದೆ, ದಕ್ಷಿಣ ಭಾರತದಲ್ಲೇ ಅತಿಹೆಚ್ಚು ಆನೆಗಳ ವಾಸಸ್ಥಾನವಾಗಿದೆ.

AV Eye Hospital ad

ಈ ಸುದ್ದಿ ಓದಿದ್ದೀರಾ? ಫೇಸ್‌ಬುಕ್‌ನಿಂದ | ಕುಲಾಂತರಿ ಸಾಸಿವೆ ಕುರಿತು ಪ್ರೀತಿ ಬೆಳೆಸಿಕೊಳ್ಳುವ ಮುನ್ನ ಈ ವಿಷಯಗಳು ನಿಮಗೆ ಗೊತ್ತಿರಲಿ

ಈ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ತಮ್ಮ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಮಾಹಿತಿ ನೀಡಿದ್ದು, "ಕಾವೇರಿ ದಕ್ಷಿಣ ವನ್ಯಜೀವಿ ಅಭಯಾರಣ್ಯವನ್ನು ತಮಿಳುನಾಡಿನಲ್ಲಿ 17ನೇ ವನ್ಯಜೀವಿ ಅಭಯಾರಣ್ಯ ಎಂದು ಘೋಷಿಸಲು ನನಗೆ ಸಂತೋಷವಾಗುತ್ತಿದೆ. ರಾಜ್ಯದ ಸರ್ಕಾರಿ ಮಟ್ಟದ ಗ್ರೀನ್ ಕ್ಲೈಮೇಟ್ ಕಂಪನಿ ಜೊತೆಗೆ ಈ ಪ್ರದೇಶದ ಜೀವವೈವಿಧ್ಯವನ್ನು ಸಂರಕ್ಷಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app