
- ಇನ್ಸ್ಪೆಕ್ಟರ್ ನಂದೀಶ್ ಸಾವಿನ ಕುರಿತು ತನಿಖೆಯಾಗಬೇಕು
- ಪೊಲೀಸ್ ಪೋಸ್ಟಿಂಗ್ನ ಅಕ್ರಮವೂ ಬಿಜೆಪಿಯಲ್ಲಿದೆ
"ಇನ್ಸ್ಪೆಕ್ಟರ್ ನಂದೀಶ್ ಸಾವಿನ ಪ್ರಕರಣ ತನಿಖೆ ಆಗಬೇಕು; ಇದರ ಹಿಂದೆ ಇನ್ನೂ ಬೇರೇನೋ ಇದ್ದಂತಿದೆ" ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಅನುಮಾನ ವ್ಯಕ್ತಪಡಿಸಿದರು.
ಬೆಂಗಳೂರಿನಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿದ ಹರಿಪ್ರಸಾದ್, "ಇನ್ಸ್ಪೆಕ್ಟರ್ ನಂದೀಶ್ ಹೃದಯಾಘಾತದಿಂದ ಸಾವನ್ನಪ್ಪಿದ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ಇದು ಬಾರ್ ಒಂದರ ವಿಚಾರದಲ್ಲಿ ಅಮಾನತು ಮಾಡುವಷ್ಟರ ಮಟ್ಟಿನ ಪ್ರಕರಣವಲ್ಲ" ಎಂದು ಅಭಿಪ್ರಾಯಪಟ್ಟರು.
ಈ ಸುದ್ದಿ ಓದಿದ್ದೀರಾ? ಪತ್ರಕರ್ತರಿಗೆ ಲಂಚ: ಸಿಎಂ ಮಾಧ್ಯಮ ಸಂಯೋಜಕರ ವಿರುದ್ಧ ಲೋಕಾಯುಕ್ತಕ್ಕೆ ದೂರು
"ನಾನು ಮೊದಲೇ ಹೇಳಿದ್ದೆ; ಒಂದು ಪೋಸ್ಟಿಂಗ್ಗೆ ₹70 ಲಕ್ಷ ರೂಪಾಯಿಯಿಂದ 2 ಕೋಟಿ ತನಕ ಹಣದ ವಿಚಾರ ಇದೆ. ಇದು ಬಿಜೆಪಿಯ ಸಂಸ್ಕೃತಿ. ಇದು ಗಂಭೀರವಾದ ವಿಚಾರವೂ ಹೌದು. ಹೀಗಾಗಿ ನಂದೀಶ್ ಅಮಾನತಿನ ಹಿಂದೆ ಅಷ್ಟೇ ಇದ್ದಂತೆ ಇಲ್ಲ, ಅದಕ್ಕಿಂತ ಹೆಚ್ಚಿನದು ಬೇರೆನೋ ಇದೆ. ಹೀಗಾಗಿ ಅವರ ಸಾವಿನ ತನಿಖೆ ಆಗಲೇಬೇಕು" ಎಂದು ಹರಿಪ್ರಸಾದ್ ಆಗ್ರಹಿಸಿದರು.
ಇನ್ನು ಕಾಂಗ್ರೆಸ್ ಬಣ ರಾಜಕಾರಣದ ಬಗ್ಗೆ ಟೀಕಿಸಿದ್ದ ಬಿಜೆಪಿಯವರಿಗೆ ತಿರುಗೇಟು ನೀಡಿದ ಹರಿಪ್ರಸಾದ್, "ಹೌದು, ಕಾಂಗ್ರೆಸ್ನಲ್ಲಿ ಎರಡು ದಿಕ್ಕು ಇದೆ ಎಂದು ಒಪ್ಪಿಕೊಳ್ಳೋಣ. ಆದರೆ, ಬಿಜೆಪಿಯವರು ದಿಕ್ಕಾಪಾಲಾಗಿದ್ದಾರೆ; ಇದಕ್ಕೇನು ಹೇಳೋಣ" ಎಂದು ಕುಟುಕಿದರು.