ಬಿಜೆಪಿಯಲ್ಲಿ ಮೂರನೇ ಸಿಎಂ ಸೀಟು ಹತ್ತುವ ಕಾಲ ಸನ್ನಿಹಿತ: ಕಾಂಗ್ರೆಸ್ ಲೇವಡಿ 

  • ಆಡಿಸಿ ನೋಡು ಗೊಂಬೆಯಂತಿದ್ದ ಬೊಮ್ಮಾಯಿಯನ್ನು ಬೀಳಿಸಿ ನೋಡಲು ಹೊರಟ ಹೈಕಮಾಂಡ್
  • ಬಿಜೆಪಿ ವರಿಷ್ಠ ಅಮಿತ್‌ ಶಾ ಬಂದು ಹೋದ ಬಳಿಕ ಮೋಡ ಕವಿದ ವಾತಾವರಣವಿದೆ ಎಂದ ಕಾಂಗ್ರೆಸ್

ಮುಖ್ಯಮಂತ್ರಿ ಬೊಮ್ಮಾಯಿ ಆಡಳಿತಾವಧಿ ಕೊನೆಯಾಗುವ ಕಾಲ ಸನ್ನಿಹಿತವಾಗಿದೆ. ಬಿಜೆಪಿಯ ಕೈಗೊಂಬೆ ಸಿಎಂ ಬೊಮ್ಮಾಯಿ ಬದಲು ಮೂರನೇ ಸಿಎಂ ಸೀಟು ಹತ್ತುವ ಕಾಲ ಸನ್ನಿಹಿತವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಲೇವಡಿ ಮಾಡಿದೆ.

ಈ ಸಂಬಂಧ ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿಯ ವಿರುದ್ಧ ತೀವ್ರ ಟೀಕೆ ಮಾಡಿದೆ. "ಅಮಿತ್ ಶಾ ಬಂದು ಹೋದ ಬಳಿಕ ಮೋಡ ಕವಿದ ವಾತಾವರಣವಿದೆ. 40% ಸರ್ಕಾರದಲ್ಲಿ ಮೂರನೇ ಸಿಎಂ ಸೀಟು ಹತ್ತುವ ಕಾಲ ಸಮೀಪಿಸಿದೆ ಎಂದು ಬಿಜೆಪಿಯನ್ನು ಕುಟುಕಿದೆ. ಬೊಮ್ಮಾಯಿ ಅವರ ಗೊಂಬೆಯಾಟ ಮುಗಿಯವ ಹಂತಕ್ಕೆ ಬಂದಿದೆ. ಅಮಿತ್ ಶಾ ಭೇಟಿಯಾದ ಬಗ್ಗೆ ಯಾವೊಬ್ಬ ಸಚಿವನೂ ಸರ್ಕಾರದ ಬಗ್ಗೆ ಮಾತನಾಡುತ್ತಿಲ್ಲ, ಯಾರಲ್ಲೂ ಸಂಭ್ರಮ ಇಲ್ಲದಿರುವುದೇ ಇದಕ್ಕೆ ನಿದರ್ಶನ ಎಂದು ಟ್ವೀಟ್ ಮಾಡಿದೆ.

ಎಷ್ಟು ಪ್ರಯತ್ನಿಸಿದರೂ ಜನತಾ ಪರಿವಾರಿಯಾಗಿದ್ದ ಅವರನ್ನು ಕೇಶವಕೃಪಾದವರು 'ಸಂಘ ಪರಿವಾರಿ'ಯಾಗಿ ಸ್ವೀಕರಿಸಲು ಒಪ್ಪಲೇ ಇಲ್ಲ! ಆಡಿಸಿ ನೋಡು ಎಂದು ಗೊಂಬೆಯಂತಿದ್ದ ಬೊಮ್ಮಾಯಿಯವರನ್ನು ಬೀಳಿಸಿ ನೋಡಲು ಹೊರಟಿದೆ ಹೈಕಮಾಂಡ್! ಈ ಬದಲಾವಣೆ ಯತ್ನ ಸರ್ಕಾರದ ವೈಫಲ್ಯಕ್ಕೋ, 3 ಸಿಎಂ ಎಂಬ ನಿಮ್ಮ ಸಂಪ್ರದಾಯಕ್ಕೋ ಎಂದು ಕಾಂಗ್ರೆಸ್ ಟ್ವೀಟ್‌ ಮಾಡಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್