ಭಾರತ್ ಜೋಡೋ ಯಾತ್ರೆಯ ಜನ ಬೆಂಬಲ ಕಂಡು ವಿಶ್ವಗುರು ತಲೆ ಕೆಡಿಸಿಕೊಂಡಿದ್ದಾರೆ: ಬಿ ಕೆ ಹರಿಪ್ರಸಾದ್

  • '2014ರಲ್ಲಿ ವಿಶ್ವಗುರು ಕಾಂಗ್ರೆಸ್ ಮುಕ್ತ ಭಾರತ ಎಂದು ಘೋಷಣೆ ಮಾಡಿದ್ದರು'
  • 'ಯಾತ್ರೆಯಿಂದ ಬಿಜೆಪಿಗರು ನಿದ್ದೆಗೆಟ್ಟು ಸುಳ್ಳು ಜಾಹೀರಾತು ನೀಡುತ್ತಿದ್ದಾರೆ'

‘ಕಾಶ್ಮೀರದಿಂದ ಆರಂಭವಾದ ‘ಭಾರತ್ ಜೋಡೋ ಯಾತ್ರೆ’ಯ ಜನ ಬೆಂಬಲ ಕಂಡು ವಿಶ್ವಗುರು ತಲೆ ಕೆಡಿಸಿಕೊಂಡಿದ್ದಾರೆ’ ಎಂದು ಬಿ ಕೆ ಹರಿಪ್ರಸಾದ್ ಹೇಳಿದರು.

ಬಳ್ಳಾರಿಯಲ್ಲಿ ಕಾಂಗ್ರೆಸ್ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, “2014ರಲ್ಲಿ ವಿಶ್ವಗುರು ಕಾಂಗ್ರೆಸ್ ಮುಕ್ತ ಭಾರತ ಎಂದು ಪ್ರಚಾರ ಘೋಷಣೆ ಮಾಡಿದ್ದರು. ರಾಹುಲ್ ಗಾಂಧಿ ಅವರು ಕನ್ಯಾಕುಮಾರಿಯಲ್ಲಿ ಆರಂಭಿಸಿದ ಈ ಯಾತ್ರೆಯಲ್ಲಿ ನಿತ್ಯ ಲಕ್ಷಾಂತರ ಮಂದಿ ಉತ್ಸಾಹ ನೀಡುತ್ತಿರುವುದನ್ನು ಕಂಡು ವಿಶ್ವಗುರು ತಲೆ ಕೆಡಿಸಿಕೊಂಡಿದ್ದಾರೆ” ಎಂದರು.

Eedina App

“ರಾಹುಲ್ ಗಾಂಧಿ ಅವರು ರಾಜಕೀಯ ದುರುದ್ದೇಶಕ್ಕೆ ಈ ಪಾದಯಾತ್ರೆ ಮಾಡುತ್ತಿಲ್ಲ. ದೇಶದ ತ್ರಿವರ್ಣ ಧ್ವಜ, ಅಂಬೇಡ್ಕರ್ ಅವರ ಸಂವಿಧಾನ, ನಮ್ಮ ಹಕ್ಕು ಪ್ರತಿಪಾದಿಸುವ ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಲು ನಮ್ಮೆಲ್ಲರ ನೆಚ್ಚಿನ ನಾಯಕ ರಾಹುಲ್ ಗಾಂಧಿ ಪಾದಯಾತ್ರೆ ಹಮ್ಮಿಕೊಂಡಿದ್ದಾರೆ” ಎಂದು ಅವರು ಹೇಳಿದರು.

“ಪಾದಯಾತ್ರೆ ಮೂಲ ಉದ್ದೇಶ ಸಂಕ್ಷಿಪ್ತವಾಗಿ ಹೇಳುವುದಾದರೆ, ಭಾರತ ದೇಶವನ್ನು ದ್ವೇಷಮುಕ್ತ, ಹಿಂಸೆ ಮುಕ್ತ, ನಿರುದ್ಯೋಗ ಮುಕ್ತ, ಪ್ರಜಾಪ್ರಭುತ್ವ ರಕ್ಷಿಸುವ, ಬಡಮುಕ್ತ ಭಾರತ ಉದ್ದೇಶದಿಂದ ಈ ಯಾತ್ರೆ ಆರಂಭವಾಗಿದೆ" ಎಂದರು.

AV Eye Hospital ad

ಈ ಸುದ್ದಿ ಓದಿದ್ದೀರಾ? ಬಿಜೆಪಿ ಕಿತ್ತೆಸೆದು ಕಾಂಗ್ರೆಸ್ ಸರ್ಕಾರ ತರಲು ರಾಜ್ಯದ ಜನ 'ಸಂಕಲ್ಪ' ಮಾಡಿದ್ದಾರೆ: ಸಿದ್ದರಾಮಯ್ಯ

"ಇದು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ 3570 ಕಿ.ಮೀ ಯಾತ್ರೆಯಾಗಿದೆ. ಭಾರತ ಯಾತ್ರೆ, ರಾಜ್ಯದ ಪ್ರದೇಶ ಯಾತ್ರಿ, ಅತಿಥಿ ಯಾತ್ರಿಗಳಿದ್ದಾರೆ. ನಮ್ಮ ರಾಜ್ಯದಲ್ಲಿ ನಿತ್ಯ 1 ಲಕ್ಷ ಜನ ಹೆಜ್ಜೆ ಹಾಕಿದ್ದು, ವಿಶ್ವದಲ್ಲಿ ಇದು ಐತಿಹಾಸಿಕ ಯಾತ್ರೆ. ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧಿ ನೇತೃತ್ವದಲ್ಲಿ ಯಾತ್ರೆ ನಡೆದಿದ್ದು, ಸ್ವಾತಂತ್ರ್ಯದ ನಂತರ ನಭೂತೋ ನಭವಿಷ್ಯತಿ ಎಂಬ ರೀತಿಯಲ್ಲಿ ಈ ಯಾತ್ರೆ ನಡೆಯುತ್ತಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

“ರಾಹುಲ್ ಗಾಂಧಿ ಅವರ ಜತೆ ಫೋಟೋ ತೆಗೆಸಿಕೊಳ್ಳಲು ಸಾವಿರಾರು ಜನ ಪ್ರಯತ್ನಿಸಿದ್ದು, ಅವರಿಗೆ ಭದ್ರತೆ ಕಾರಣದಿಂದ ಅವಕಾಶ ನೀಡಲಿಲ್ಲ. ಈ ಯಾತ್ರೆಯಿಂದ ಬಿಜೆಪಿ ನಿದ್ದೆಗೆಟ್ಟು ಸುಳ್ಳು ಜಾಹೀರಾತು ನೀಡುತ್ತಿದ್ದಾರೆ. ಈ ಯಾತ್ರೆಗೆ ಬೆಂಬಲ ನೀಡಿರುವ ಎಲ್ಲರಿಗೂ ಧನ್ಯವಾದಗಳು” ಎಂದರು.

ನಿಮಗೆ ಏನು ಅನ್ನಿಸ್ತು?
1 ವೋಟ್
eedina app