ಒಂದು ನಿಮಿಷದ ಓದು | ವಿಧಾನಸೌಧದಲ್ಲಿ ನಡೆದ ರಾಷ್ಟ್ರಪತಿ ಚುನಾವಣೆ ಮತದಾನ ಮುಕ್ತಾಯ

President  Election

ವಿಧಾನಸೌಧದಲ್ಲಿ ನಡೆದ 2022ನೇ ಸಾಲಿನ ರಾಷ್ಟ್ರಪತಿ ಚುನಾವಣೆ ಮತದಾನ ಪೂರ್ಣವಾಗಿದ್ದು, ಮತಪೆಟ್ಟಿಗೆಗಳನ್ನು ದೆಹಲಿಗೆ ಕೊಂಡೊಯ್ಯಲು ಚುನಾವಣಾ ಅಧಿಕಾರಿಗಳು ತಯಾರಿ ನಡೆಸಿದ್ದಾರೆ.

ಸೋಮವಾರ (ಜು.18) ಬೆಳಿಗ್ಗೆ 10ಕ್ಕೆ ಆರಂಭವಾದ ಮತದಾನ ಸಂಜೆ 4 ಗಂಟೆ ಹೊತ್ತಿಗೆಲ್ಲ ಮುಗಿಯಿತು. ರಾಜ್ಯದ 224 ಶಾಸಕರು, ಒಬ್ಬರು ಲೋಕಸಭಾ ಮತ್ತು ರಾಜ್ಯಸಭೆ ಸದಸ್ಯರು ಮತದಾನ ಮಾಡಿದರು. ರಾಜ್ಯದಿಂದ ಒಟ್ಟು 226 ಮತಗಳು ಚಲಾವಣೆಯಾದವು.

4 ಗಂಟೆಗೆ ಮತದಾನ ಪೂರ್ಣಗೊಂಡರೂ 5 ಗಂಟೆಯವರೆಗೆ ಪ್ರಕ್ರಿಯೆ ಮುಂದುವರಿಯಿತು. ರಾತ್ರಿ 7 ಗಂಟೆಗೆ ವಿಧಾನಸೌಧದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ರವಾನೆ ಮಾಡಲಾಗುವುದು. ರಾತ್ರಿ 9.20ಕ್ಕೆ ವಿಮಾನದ ಮೂಲಕ ರಾಜಧಾನಿ ದೆಹಲಿಗೆ ಮತಪೆಟ್ಟಿಗೆ ರವಾನೆಯಾಗಲಿದೆ. ಮತಪೆಟ್ಟಿಗೆ ಕೊಂಡೊಯ್ಯಲು ವಿಮಾನದಲ್ಲಿ ಪ್ರತ್ಯೇಕ ಟಿಕೆಟ್ ಕಾಯ್ದಿರಿಸಲಾಗಿದೆ.

ವೀಲ್ ಚೇರ್‍‌ನಲ್ಲಿ ಬಂದು ಮತದಾನ ಮಾಡಿದ ಗೌಡರು

ಮಾಜಿ ಪ್ರಧಾನಿ ಹಾಗೂ ರಾಜ್ಯಸಭಾ ಸದಸ್ಯರಾದ ಎಚ್ ಡಿ ದೇವೇಗೌಡರು ವಿಧಾನಸೌಧಕ್ಕೆ ವೀಲ್‌ಚೇರ್‍‌ನಲ್ಲೇ ಬಂದು ಮತದಾನ ಮಾಡಿದರು. ಅನಾರೋಗ್ಯದಿಂದ ಬಳಲುತ್ತಿರುವ ಅವರು, ಮಧ್ಯಾಹ್ನ ಮೂರು ಗಂಟೆ ಹೊತ್ತಿಗೆ ವಿಧಾನಸೌಧಕ್ಕೆ  ಬಂದು ಮತದಾನ ಮಾಡಿದರು.

Image
President  Election

ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಬೆಂಬಲ ನೀಡುವುದಾಗಿ ಈಗಾಗಲೇ ಜೆಡಿಎಸ್ ಪಕ್ಷ ಘೋಷಿಸಿತ್ತು.

2022ನೇ ಸಾಲಿನ ರಾಷ್ಟ್ರಪತಿ ಚುನಾವಣೆಯಲ್ಲಿ ಆಡಳಿತ ಪಕ್ಷದಿಂದ ದ್ರೌಪದಿ ಮುರ್ಮು ಮತ್ತು ಪ್ರತಿಪಕ್ಷಗಳ ಅಭ್ಯರ್ಥಿಯಾಗಿ ಹಿರಿಯ ರಾಜಕಾರಣಿ ಯಶವಂತ್ ಸಿನ್ಹಾ ಸ್ಪರ್ಧೆ ಮಾಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್