ಸಂಘಪರಿವಾರದ ಷ‌ಡ್ಯಂತ್ರಕ್ಕೆ ಮಣಿಯಲ್ಲ, ನಮ್ಮ ಹೋರಾಟ ಬಿಡಲ್ಲ: ಬಿ ಕೆ ಹರಿಪ್ರಸಾದ್ 

  • ಮಡಿಕೇರಿ ಚಲೋ ಮಾಡಿಯೇ ತೀರುತ್ತೇವೆ: ಹರಿಪ್ರಸಾದ್
  • ಜನರ ಮನಸ್ಸನ್ನು ಬೇರೆಡೆ ಸೆಳೆಯುವುದು ಬಿಜೆಪಿ ವಿಕೃತಿ

ಯಾರು ಏನೇ ಮಾಡಿದರೂ ನಮ್ಮ ಮಡಿಕೇರಿ ಚಲೋ ಕಾರ್ಯಕ್ರಮವನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.

ಬೆಂಗಳೂರಿನಲ್ಲಿಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಜೆಪಿ ನಾಯಕರು ನಮ್ಮ ಕೊಡಗು ಚಲೋಗೆ ಪ್ರತಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇವೆಲ್ಲವೂ ಸಂಘಪರಿವಾರದ ಷಡ್ಯಂತ್ರ. ಇವಕ್ಕೆಲ್ಲಾ ನಾವು ಬಗ್ಗುವುದಿಲ್ಲ ಎಂದು ಹರಿಪ್ರಸಾದ್ ತಿಳಿಸಿದರು.

ವಿಪಕ್ಷ ನಾಯಕ ಸ್ಥಾನಮಾನ ಸಂವಿಧಾನಾತ್ಮಕ ಸ್ಥಾನಮಾನ. ಸರ್ಕಾರ ತಪ್ಪು ಮಾಡಿದಾಗ ಕಿವಿ ಹಿಂಡುವಂತಹ ಕೆಲಸವನ್ನು ವಿಪಕ್ಷ ನಾಯಕರು ಮತ್ತು ವಿಪಕ್ಷದವರು ಮಾಡುತ್ತೇವೆ. ಜನರ ಸಮಸ್ಯೆಯನ್ನು ವಿಪಕ್ಷದವರು ಕೇಳಬಾರದು ಎನ್ನುವ ಕಾರಣಕ್ಕೆ ಬಿಜೆಪಿಯವರು ಹೀಗೆಲ್ಲಾ ಮಾಡುತ್ತಿದ್ದಾರೆ. ನಾವು ಇವ್ಯಾವುದಕ್ಕೂ ಸೊಪ್ಪು ಹಾಕುವುದಿಲ್ಲ ಎಂದು ಹರಿಪ್ರಸಾದ್‌ ಹೇಳಿದರು.

ಈ ಸುದ್ದಿ ಓದಿದ್ದೀರಾ? : ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಪೋಟೋ ಅಂಟಿಸಿದ ವಿಜಯಪುರ ಬಿಜೆಪಿ ಕಾರ್ಯಕರ್ತ: ಕಾಂಗ್ರೆಸ್ ಆಕ್ರೋಶ

AV Eye Hospital ad

ಕಾಂಗ್ರೆಸ್ ಜಿಲ್ಲಾ ಕಚೇರಿಗೆ ಸಾವರ್ಕರ್ ಫೋಟೊ ಅಂಟಿಸಿದ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿದ ಬಿ.ಕೆ ಹರಿಪ್ರಸಾದ್, ಬಿಜೆಪಿಯವರದ್ದು ಎಂಥ ವಿಕೃತ ಮನಸ್ಥಿತಿ ಅನ್ನೋದು ಗೊತ್ತಾಗುತ್ತೆ. ಜನರ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಬದಲು ಜನರ ಮನಸ್ಸನ್ನು ಬೇರೆಡೆ ಸೆಳೆಯಲು ಇಂತಹ ಕೆಲಸಗಳನ್ನು ಮಾಡುತ್ತಲೇ ಇರುತ್ತಾರೆ ಎಂದು ಟೀಕಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app