ಸಿ ಟಿ ರವಿಯವರನ್ನು 'ಲೂಟಿ ರವಿ' ಎನ್ನಲು ನಿಮಗೆ ಅಧಿಕಾರ ಕೊಟ್ಟವರು ಯಾರು?: ಪ್ರಲ್ಹಾದ್ ಜೋಶಿ

  • ಹಿರಿಯ ರಾಜಕಾರಣಿಗಳು ಭಾಷೆ ಬಳಸುವಾಗ ಎಚ್ಚರಿಕೆ ವಹಿಸಬೇಕು
  • ಎಲ್ಲ ಆರೋಪಗಳಿಂದ ಯಡಿಯೂರಪ್ಪ ಮುಕ್ತರಾಗಿ ಬರುತ್ತಾರೆ

ರಾಜಕೀಯದಲ್ಲಿ ಯಾರೇ ಆಗಲಿ ಅಸಭ್ಯ ವರ್ತನೆ, ಭಾಷೆ ಬಳಕೆ ಮಾಡಬಾರದು. ಇದಕ್ಕೆ ವಿಪಕ್ಷ ನಾಯಕ ಸಿದ್ದರಾಮಯ್ಯನವರೂ ಕೂಡಾ ಹೊರತಲ್ಲ. ಅವರು ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿ ಟಿ ರವಿಯವರನ್ನು 'ಲೂಟಿ ರವಿ' ಅಂತ ಸಿದ್ದರಾಮಯ್ಯ ಅವರು ಯಾವ ಆಧಾರದ ಮೇಲೆ ಹೇಳಿದ್ದಾರೆ ಎಂದು ಪ್ರಶ್ನಿಸಿದರು.

"ಹಿರಿಯರಾದ ಸಿದ್ದರಾಮಯ್ಯ ಮಾತನಾಡುವಾಗ ಕೊಂಚ ಜಾಗೃತೆ ವಹಿಸಬೇಕು. ಭಾಷೆ ಬಳಕೆ ವಿಚಾರದಲ್ಲಿ ಸಿ ಟಿ ರವಿ ಹಾಗೂ ಸಿದ್ದರಾಮಯ್ಯ ಅವರಿಬ್ಬರದ್ದೂ ತಪ್ಪಿದೆ. ಇಬ್ಬರೂ ನಾಯಕರು ಮಾತನಾಡುವಾಗ ಎಚ್ಚರಿಕೆ ವಹಿಸಬೇಕು" ಎಂದು ಪ್ರಲ್ಹಾದ್ ಜೋಷಿ ತಿಳಿ ಹೇಳಿದರು.

ನಾನು ಸಂಸದನಾದ ಮೇಲೆ ಮಾಜಿ ಪ್ರಧಾನಿ ದಿ. ವಾಜಪೇಯಿ ಅವರನ್ನು ಹತ್ತಿರದಿಂದ ನೋಡಿದ್ದೇನೆ. ದೊಡ್ಡ ಹುದ್ದೆಯಲ್ಲಿದ್ದರೂ ಹೇಗೆ ಮಾತಾಡಬೇಕು ಎಂಬುದಕ್ಕೆ ಅವರೇ ಉತ್ತಮ ನಿದರ್ಶನ ಎಂದು ಜೋಶಿ ಅಭಿಪ್ರಾಯಪಟ್ಟರು.‌

ಈ ಸುದ್ದಿ ಓದಿದ್ದೀರಾ? : ಕಳಂಕಿತ ಮುರುಘಾ ಶ್ರೀಗಳನ್ನು ಗದ್ದುಗೆಯಿಂದ ಮೊದಲು ಕೆಳಗಿಳಿಸಿ: ಬಸನಗೌಡ ಪಾಟೀಲ್‌ ಯತ್ನಾಳ್‌

ಇದೇ ವೇಳೆ ಯಡಿಯೂರಪ್ಪನವರ ಬಿಡಿಎ ಪ್ರಕರಣದ ತನಿಖೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಪ್ರಲ್ಹಾದ್ ಜೋಷಿ, ಯಡಿಯೂರಪ್ಪನವರು ಆರೋಪ ಮುಕ್ತರಾಗಿ ಬರುತ್ತಾರೆಂದು ವಿಶ್ವಾಸ ವ್ಯಕ್ತಪಡಿಸಿದರು.

ಯಡಿಯೂರಪ್ಪ ಅವರು ಪ್ರಸ್ತುತ ಯಾವುದೇ ಸಂವಿಧಾನಾತ್ಮಕ ಹುದ್ದೆಯಲ್ಲಿಲ್ಲ. ಭಾರತದ ಕಾನೂನಿನ ವ್ಯವಸ್ಥೆಯಡಿಯಲ್ಲಿ ತನಿಖೆ ನಡೆಯಲಿ. ನಮಗೆ ಕಾನೂನಿನ ಮೇಲೆ ವಿಶ್ವಾಸ ಇದೆ ಎಂದವರು ತಿಳಿಸಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್