ರಾಜಕಾರಣಿಗಳನ್ನು ಡಕಾಯಿತರು ಎಂದ ಎಚ್‌ಡಿಕೆ ಹೇಳಿಕೆಯನ್ನು ಸಮರ್ಥಿಸಿಕೊಂಡ ಯತೀಂದ್ರ ಸಿದ್ದರಾಮಯ್ಯ

  • ಮಾಜಿ ಸಿಎಂ ಹೇಳಿಕೆಗೆ ಸಹಮತ ವ್ಯಕ್ತಪಡಿಸಿದ ಕಾಂಗ್ರೆಸ್‌ ಶಾಸಕ
  • ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಆ ಪದ ಬಳಕೆ ಮಾಡಿರಬಹುದು ಎಂಬ ಅಭಿಪ್ರಾಯ

ಡಕಾಯಿತರನ್ನು ನೋಡಲು ಚಂಬಲ್‌ಗೆ ಕಣಿವೆಗೆ ಹೋಗುವ ಬದಲು ವಿಧಾನಸೌಕ್ಕೆ ಬಂದರೆ ಸಾಕು ಎಂಬ ಹೇಳಿಕೆ ನೀಡಿದ್ದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಕಾಂಗ್ರೆಸ್‌ ಶಾಸಕ ಯತೀಂದ್ರ ಸಿದ್ದರಾಮಯ್ಯ ಸಹಮತ ವ್ಯಕ್ತಪಡಿಸಿದ್ದಾರೆ.

ಕುಮಾರಸ್ವಾಮಿಯವರ ಹೇಳಿಕೆ ವಿಚಾರಕ್ಕೆ ದನಿಗೂಡಿಸಿರುವ ಮಾಜಿ ಮುಖ್ಯಮಂತ್ರಿ ಪುತ್ರ ಯತೀಂದ್ರ ಸಿದ್ದರಾಮಯ್ಯ "ಕುಮಾರಸ್ವಾಮಿಯವರ ಹೇಳಿಕೆ ಮಾರ್ಮಿಕವಾದದ್ದು, ರಾಜಕಾರಣ ವ್ಯವಸ್ಥೆ ಅಲ್ಲಿಗೆ ಬಂದು ನಿಂತಿದೆ. ಹೀಗಾಗಿ ಅವರು ಅದನ್ನು ಹಾಗೆ ಹೇಳಿದ್ದಾರೆ" ಎಂದು ಅಭಿಪ್ರಾಯಪಟ್ಟರು.

"ರಾಜಕಾರಣದಲ್ಲಿ ಇರೋರು ಒಂದು ರೀತಿ ಡಕಾಯತರ ರೀತಿ ಆಗಿದ್ದಾರೆ. ಸಚಿವರು, ಶಾಸಕರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಜನರ ಸುಲಿಗೆಗೆ ಮುಂದಾಗಿದ್ದಾರೆ. ಇದನ್ನೇ ಕುಮಾರಸ್ವಾಮಿ ಡಕಾಯಿತರೆನ್ನುವ ಅರ್ಥದಲ್ಲಿ ಹೇಳಿದ್ದಾರೆ" ಎಂದರು.

ಈ ಸುದ್ದಿ ಓದಿದ್ದೀರಾ? : ಸಿದ್ದರಾಮಯ್ಯ ಅವರನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ; ಮಾಜಿ ಸ್ಪೀಕರ್ ರಮೇಶ್ ಕುಮಾರ್

ಶುಕ್ರವಾರ ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ನಡೆದ ಜೆಡಿಎಸ್ ಪಕ್ಷದ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, "ಮೊದಲು ಡಕಾಯಿತರನ್ನು ನೋಡಲು ಚಂಬಲ್ ಕಣಿವೆಗೆ ಹೋಗಬೇಕಿತ್ತು. ಈಗ ವಿಧಾನಸೌಧಕ್ಕೆ ಹೋದರೆ ಸಾಕು. ಅಷ್ಟರಮಟ್ಟಿಗೆ ಜನರ ದುಡ್ಡನ್ನು ಲೂಟಿ ಮಾಡಲಾಗುತ್ತಿದೆ" ಎಂದು ಹೇಳಿದ್ದರು. 

ನಿಮಗೆ ಏನು ಅನ್ನಿಸ್ತು?
0 ವೋಟ್