ಸುಳ್ಯ | ರಸ್ತೆಯಿಲ್ಲದೆ ಬಡಿಗೆಗೆ ಬಟ್ಟೆ ಕಟ್ಟಿ ವೃದ್ದೆಯನ್ನು ಆಸ್ಪತ್ರೆಗೆ ಸಾಗಿಸಿದ ಕುಟುಂಬ

sulya
  • ಸಾಮಾಜಿಕ ಜಾಲ ತಾಣದಲ್ಲಿ ವಿಡಿಯೋ ವೈರಲ್‌
  • ಭಾರಿ ಮಳೆಗೆ ಕೆಸರುಮಯವಾದ ರಸ್ತೆ

ಸರಿಯಾದ ರಸ್ತೆ ಸಂಪರ್ಕವಿಲ್ಲದೆ ಅನಾರೋಗ್ಯಕ್ಕೆ ತುತ್ತಾದ ವೃದ್ದೆಯನ್ನು ಆಸ್ಪತ್ರೆಗಾಗಿ ಮರದ ಬಡಿಗೆಗೆ ಬಟ್ಟೆ ಕಟ್ಟಿ ಅದರಲ್ಲಿ ಕುಳ್ಳಿರಿಸಿ ಎರಡು ಕೀಲೋಮೀಟರ್‍‌ ಹೊತ್ತೊಯ್ದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಗ್ರಾಮದ 70 ವರ್ಷದ ವೃದ್ದೆಯೊಬ್ಬರಿಗೆ ಶುಕ್ರವಾರ ಕಾಲುನೋವು ಕಾಣಿಸಿಕೊಂಡಿದ್ದು, ತುರ್ತಾಗಿ ಆಸ್ಪತ್ರೆ ಹೋಗಬೇಕಾದ ಅಗತ್ಯವಿತ್ತು. ಆಸ್ಪತ್ರೆಗೆ ಹೋಗಬೇಕಾದರೆ ಎಂಜಿರಪೇಟೆ ಮೂಲಕ ಉಪ್ಪಿನಂಗಡಿಗೆ ತಲುಪಬೇಕಾಗಿತ್ತು. ಆದರೆ, ಗ್ರಾಮದ ರಸ್ತೆ ವಾಹನ ಓಡಾಡಲು ಆಗದ ಪರಿಸ್ಥಿತಿಯಲ್ಲಿದ್ದು, ಎಂಜಿರ ತಲುಪಲು ವೃದ್ದೆಯನ್ನು ಬಡಿಗೆಗೆ ಬಟ್ಟೆಯನ್ನು ಕಟ್ಟಿ ವೃದ್ದೆಯನ್ನು ಕುಳ್ಳಿರಿಸಿ ಕುಟುಂಬಸ್ಥರು ಕರೆದೊಯ್ಯದಿದ್ದಾರೆ. 

ಈ ಸುದ್ದಿ ಓದಿದ್ದೀರಾ?: ಇದು ನಮ್ಮ ಸೌಹಾರ್ದ | ಕೃಷ್ಣನ ವೇಷ ಧರಿಸಿ ಸೌಹಾರ್ದತೆ ಸಾರಿದ ಮುಸ್ಲಿಂ ಬಾಲಕ

ವೃದ್ದೆಯನ್ನು ಹೊತ್ತೊಯ್ಯುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ರಸ್ತೆ ಅಭಿವೃದ್ದಿ ಮಾಡದ ಅಧಿಕಾರಿಗಳ ವಿರುದ್ದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನೂಜಿಬಾಳ್ತಿಲ-ಕೊಣಾಜೆ ಗ್ರಾಮವನ್ನು ಸಂಪರ್ಕಿಸುವ ಪ್ರಮುಖ ರಸ್ತೆಯು ಇತ್ತೀಚೆಗೆ ಸುರಿದ ಭಾರಿ ಮಳೆಗೆ ಕೆಸರುಮಯವಾಗಿದೆ. ಇದರಿಂದ ವಾಹನಗಳು ಸಂಚರಿಸಲು ಸಾಧ್ಯವಾಗದೆ ಜನರು ಎರಡು ಕೀಲೋಮೀಟರ್ ನಡೆದುಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್