ಜನ್ಮ ದಿನಾಂಕಕ್ಕೆ ಆಧಾರ್‌ ಕಾರ್ಡ್‌ ಪುರಾವೆಯಲ್ಲ: ಇಪಿಎಫ್‌ಒ

Date:

ಇನ್ನು ಮುಂದೆ ಆಧಾರ್ ಕಾರ್ಡ್ ಅನ್ನು ಜನ್ಮ ದಿನಾಂಕದ ಪುರಾವೆಯಾಗಿ ಸ್ವೀಕರಿಸುವುದಿಲ್ಲ ಎಂದು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಹೇಳಿದೆ. ಈ ನಿರ್ಧಾರವನ್ನು ಕೇಂದ್ರ ಭವಿಷ್ಯ ನಿಧಿ ಆಯುಕ್ತರು (ಸಿಪಿಎಫ್‌ಸಿ) ಅನುಮೋದಿಸಿದ್ದಾರೆ.

ಆಧಾರ್‌ಅನ್ನು ಜನ್ಮ ದಿನಾಂಕದ ಪುರಾವೆಯಾಗಿ ಸ್ವೀಕರಿಸುವುದಿಲ್ಲ. ಪ್ರಾಥಮಿಕವಾಗಿ, ಆಧಾರ್ ಕಾರ್ಡ್‌ ಗುರುತಿನ ಪರಿಶೀಲನೆಯ ಪತ್ರವಾಗಿದೆ. ಅದು ಜನ್ಮ ಪುರಾವೆ ಅಲ್ಲ ಎಂದು ಇಪಿಎಫ್‌ಒ ಸುತ್ತೋಲೆಯಲ್ಲಿ ತಿಳಿಸಿದೆ.

“ಆಧಾರ್‌ ಗುರುತಿನ ಪುರಾವೆ ಮಾತ್ರವೆಂದು ಯುಐಡಿಎಐನಿಂದ ಪತ್ರವನ್ನು ಸ್ವೀಕರಿಸಲಾಗಿದೆ. ಅದರಲ್ಲಿ ಆಧಾರ್‌ಅನ್ನು ಜನ್ಮ ದಿನಾಂಕದ ಪುರಾವೆಯಾಗಿ ಸ್ವೀಕಾರಾರ್ಹ ದಾಖಲೆಗಳ ಪಟ್ಟಿಯಿಂದ ತೆಗೆಯಲು ಹೇಳಲಾಗಿದೆ. ಅದರಂತೆ, ಜೆಡಿ ಎಸ್‌ಒಪಿಯ ಅನುಬಂಧ-1ರ ಟೇಬಲ್-ಬಿಯಲ್ಲಿ ಉಲ್ಲೇಖಿಸಿದಂತೆ ಜನ್ಮ ದಿನಾಂಕದ ತಿದ್ದುಪಡಿಗಾಗಿ ಸ್ವೀಕಾರಾರ್ಹ ದಾಖಲೆಗಳ ಪಟ್ಟಿಯಿಂದ ಆಧಾರ್‌ಅನ್ನು ತೆಗೆದುಹಾಕಲಾಗುತ್ತಿದೆ” ಎಂದು ಇಪಿಎಫ್‌ಒ ಹೇಳಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕೆಳಗೆ ನೀಲಾಗಿರುವ ದಾಖಲೆಗಳನ್ನು ಮಾತ್ರ ಇಪಿಎಫ್‌ಒ ಪರಿಗಣಿಸುತ್ತದೆ

  • ಯಾವುದೇ ಮಾನ್ಯತೆ ಪಡೆದ ಸರ್ಕಾರಿ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ ನೀಡಿದ ಅಂಕಪಟ್ಟಿ,
  • ಶಾಲೆ ಬಿಡುವ ಪ್ರಮಾಣಪತ್ರ (ಎಸ್‌ಎಲ್‌ಸಿ)/ಶಾಲಾ ವರ್ಗಾವಣೆ ಪ್ರಮಾಣಪತ್ರ (ಟಿಸಿ)
  • ಸೇವಾ ದಾಖಲೆಗಳ ಆಧಾರದ ಮೇಲಿನ ಪ್ರಮಾಣಪತ್ರ
  • ಪಾನ್‌ ಕಾರ್ಡ್
  • ಕೇಂದ್ರ/ರಾಜ್ಯ ಪಿಂಚಣಿ ಪಾವತಿ ಆದೇಶ ಪತ್ರ
  • ಸರ್ಕಾರ ನೀಡಿದ ನಿವಾಸ ಪ್ರಮಾಣಪತ್ರ
  • ಪಾಸ್‌ಪೋರ್ಟ್‌
  • ಸರ್ಕಾರಿ ಪಿಂಚಣಿ ಪತ್ರ
  • ಸಿವಿಲ್ ಸರ್ಜನ್ ನೀಡಿದ ವೈದ್ಯಕೀಯ ಪ್ರಮಾಣಪತ್ರ

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಾಟ್ನಾ| ಜೆಡಿಯು ಯುವ ಮುಖಂಡನಿಗೆ ಗುಂಡಿಕ್ಕಿ ಹತ್ಯೆ

ನಿನ್ನೆ (ಏಪ್ರಿಲ್ 24) ತಡರಾತ್ರಿ ನಿತೀಶ್ ಕುಮಾರ್ ಅವರ ಜನತಾ ದಳ-ಯುನೈಟೆಡ್‌ನ...

ಮೋದಿಯವರ ಬಹುತ್ವವಾದ ಭಾರತದ ಆತ್ಮ ನಾಶಪಡಿಸುವ ವಿಷ, ಕ್ಯಾನ್ಸರ್: ರಾಮಚಂದ್ರ ಗುಹಾ

ಪ್ರಧಾನಿ ನರೇಂದ್ರ ಮೋದಿಯವರ ಬಹುತ್ವವಾದ ಭಾರತದ ಆತ್ಮ ನಾಶಪಡಿಸುವ ವಿಷ, ಕ್ಯಾನ್ಸರ್...

ವಾಟ್ಸಾಪ್‌ನಲ್ಲಿ ಇಂಟರ್‌ನೆಟ್ ಇಲ್ಲದೆ ಫೈಲ್‌ಗಳು, ಇಮೇಜ್‌ಗಳ ಶೇರಿಂಗ್ ಆಯ್ಕೆ

ಸರಿಸುಮಾರು ಮುನ್ನೂರು ಕೋಟಿಗೂ ಸಕ್ರಿಯ ಬಳಕೆದಾರರನ್ನು ಹೊಂದಿರುವ ಪ್ರಬಲ ಸಾಮಾಜಿಕ ಮಾಧ್ಯಮ...

ʼಈ ದಿನʼ ಸಮೀಕ್ಷೆ | ಬಿಗಡಾಯಿಸಿದ ನಿರುದ್ಯೋಗ ; ಮೋದಿ ಆಡಳಿತಕ್ಕೆ ಬೇಸರಗೊಂಡ ಮತದಾರ

ಚುನಾವಣೆ ನಡೆಯಬೇಕಾದದ್ದು ನಿಜವಾಗಿಯೂ ಜನರ ನೈಜ ಸಮಸ್ಯೆಗಳ ಮೇಲೆ ಅಲ್ಲವೇ? ಇನ್ನೂ...