ಮಹಿಳಾ ಕುಸ್ತಿಪಟುಗಳು ರಸ್ತೆಗಿಳಿಯಲು ಮೋದಿ ಕಾರಣ : ಕಿಶೋರ್‌ ಕುಮಾರ್‌

Date:

  • ಎಫ್‌ಐಆರ್‌ ದಾಖಲಿಸಲು ಸುಪ್ರೀಂಕೋರ್ಟ್‌ ಮೊರೆ ಹೋಗಬೇಕೇ?
  • ಜನಗಳ ಮಾತನ್ನು ಕೇಳಿದರಷ್ಟೇ ನಿಮಗೆ ಪ್ರಜಾಪ್ರಭುತ್ವದಲ್ಲಿ ಜಾಗ

ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್‌ ಭೂಷಣ್‌ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕುಸ್ತಿ ಪಟುಗಳು ಕಳೆದ ಒಂದು ತಿಂಗಳಿನಿಂದ ದೆಹಲಿಯ ಜಂತರ್‌ ಮಂತರ್ ನಲ್ಲಿ ಹೋರಾಟ ನಡೆಸುತ್ತಿದ್ದಾರೆ. ಅವರ ಹೋರಾಟವನ್ನು ಬೆಂಬಲಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ಮಂಗಳವಾರ ಬೆಂಗಳೂರಿನಲ್ಲಿ ರಾಜ್ಯಮಟ್ಟದ ಸಮಾವೇಶವನ್ನು ನಡೆಸಿ, ಆರೋಪಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಸಮಾವೇಶದಲ್ಲಿ ಭಾಗಿಯಾಗಿದ್ದ ಬಹುಭಾಷಾ ನಟ, ಸಾಮಾಜಿಕ ಚಿಂತಕ ಕಿಶೋರ್‌ ಕುಮಾರ್‌ ಮೋದಿ ಸರ್ಕಾರದ ಜನ ವಿರೋಧಿ ನಡೆಯನ್ನು ಖಂಡಿಸಿದ್ದಾರೆ.

ಸಮಾವೇಶದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿರುವ ಕಿಶೋರ್‌, “ದೆಹಲಿಯ ಜಂತರ್‌ ಮಂತರ್‌ನಲ್ಲಿ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಟ ಮಾಡುತ್ತಿರುವ ಮಹಿಳಾ ಕುಸ್ತಿಪಟುಗಳಿಗೆ ಬೆಂಬಲ ಸೂಚಿಸುವ ಸಲುವಾಗಿ ಸಮಾವೇಶ ನಡೆಸಿದ್ದೇವೆ. ಈ ಘಟನೆ ತುಂಬಾ ಖಂಡನೀಯ ಮತ್ತು ದೊಡ್ಡ ದುರಂತ ಎನ್ನಬಹುದು. ಮಹಿಳಾ ಕುಸ್ತಿಪಟುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆದ್ದು ದೇಶಕ್ಕೆ ಗೌರವ ತಂದುಕೊಟ್ಟಾಗ ನಾವೆಲ್ಲ ರೋಮಾಂಚನಗೊಂಡಿದ್ದೆವು. ಆದರೆ, ಇವತ್ತು ಅದೇ ಹೆಣ್ಣುಮಕ್ಕಳು ದೆಹಲಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ನಮ್ಮಲ್ಲಿ ಎಷ್ಟು ಜನ ಅವರ ಬಗ್ಗೆ ಮಾತನಾಡುತ್ತಿದ್ದೇವೆ? ನಾವು ಎಷ್ಟರಮಟ್ಟಿಗೆ ದೇಶಪ್ರೇಮಿಗಳು ಎಂದು ನಮ್ಮನ್ನು ನಾವೇ ಕೇಳಿಕೊಳ್ಳಬೇಕು. ಈ ಪೊಳ್ಳು ದೇಶಪ್ರೇಮವನ್ನು ಬಿಟ್ಟು ದೇಶದ ಹೆಸರನ್ನು ಎತ್ತರಕ್ಕೆ ಕೊಂಡೊಯ್ದ ಹೆಣ್ಣುಮಕ್ಕಳ ಪರವಾಗಿ ನಿಂತು ಅವರಿಗೆ ನ್ಯಾಯ ದೊರಕಿಸಿಕೊಡಿ” ಎಂದು ಜನರಲ್ಲಿ ಮನವಿ ಮಾಡಿದ್ದಾರೆ.

“ಆ ಮಹಿಳಾ ಕುಸ್ತಿಪಟುಗಳು, ಖ್ಯಾತ ಕ್ರೀಡಾ ತಾರೆಯರ ಬಳಿ ತಮ್ಮನ್ನು ಬೆಂಬಲಿಸುವಂತೆ ಕೇಳಿಕೊಳ್ಳುತ್ತಿಲ್ಲ. ಬದಲಿಗೆ ನಮಗೆ ನ್ಯಾಯ ದೊರಕಿಸಿಕೊಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಿ ಎಂದು ಮನವಿ ಮಾಡುತ್ತಿದ್ದಾರೆ. ಸರ್ಕಾರ ಹೋರಾಟಗಾರರಿಗೆ ಉತ್ತರ ಕೊಡದೆ ʼನೋಟ್‌ ಬ್ಯಾನ್‌ʼನಂತಹ ಸಾವಿರ ಚರ್ಚೆಗಳನ್ನು ಮುನ್ನೆಲೆಗೆ ತಂದು ಅಸಲಿ ವಿಚಾರಗಳನ್ನು ಜನರಿಂದ ಮರೆಸಿ ಬಿಡುತ್ತದೆ. ರೈತರ ಹೋರಾಟವನ್ನು ಮತ್ತು ರೈತರನ್ನು ಕೊಂದಿದ್ದನ್ನು ಕೂಡ ಹೀಗೆ ಮರೆಸಿಬಿಟ್ಟರು. ಈ ಹೋರಾಟವನ್ನು ಕೂಡ ಹಾಗೆಯೇ ಮರೆಸುವ ಹುನ್ನಾರ ನಡೆಯುತ್ತಿದೆ. ಸರ್ವಾಧಿಕಾರಿ ಧೋರಣೆಯ ಈ ಸರ್ಕಾರ ಯಾವುದಕ್ಕೂ ಉತ್ತರ ಕೊಡುವುದಿಲ್ಲ ಎಂಬ ಭಂಡತನದಲ್ಲಿದೆ. ಆದರೆ, ಇದು ಪ್ರಜಾಪ್ರಭುತ್ವ. ಇಲ್ಲಿ ಪ್ರಜೆಗಳೇ ಪ್ರಭುಗಳು. ಇವತ್ತು ನಾವು ಎದ್ದುನಿಂತು ಪ್ರಶ್ನೆ ಕೇಳಲಿಲ್ಲ ಎಂದರೆ ನಮ್ಮ ಮುಂದಿನ ಪೀಳಿಗೆಗೆ ಉತ್ತರ ಕೊಡುವುದಿರಲಿ ಮುಖ ತೋರಿಸಲೂ ಕೂಡ ಆಗುವುದಿಲ್ಲ. ನಾಳೆ ದಿನ ನಮ್ಮನೆಯ ಹೆಣ್ಣುಮಕ್ಕಳಿಗೆ ಏನಾದರೂ ಆದಾಗ ಕೂಡ ಮುಖ ತೋರಿಸಲು ನಾವು ಯೋಗ್ಯರಾಗಿರುವುದಿಲ್ಲ” ಎಂದು ಸಾರ್ವಜನಿಕರನ್ನು ಎಚ್ಚರಿಸಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಪ್ರಧಾನಿಗೆ ಎಲ್ಲದರ ಲಾಭ ಪಡೆಯುವುದಷ್ಟೇ ಗೊತ್ತು. ಯಾರಾದರೂ ʼಮಿಸ್‌ ವರ್ಲ್ಡ್‌ʼ ಗೆದ್ದರೆ ಅದಕ್ಕೂ ನಾನೇ ಕಾರಣ ಎನ್ನುತ್ತಾರೆ. ಅವರ ಭಕ್ತರು ಅಥವಾ ಅವರು ಇಟ್ಟುಕೊಂಡಿರುವ ಟ್ರೋಲ್‌ ಆರ್ಮಿ ಅಂದರೆ ಐಟಿ ಸೆಲ್‌ನ ಬಾಡಿಗೆ ಕೂಲಿ ಪಡೆ ಎಲ್ಲದಕ್ಕೂ ಮೋದಿಯೇ ಕಾರಣ ಎನ್ನುವಂತೆ ಪ್ರಚಾರ ಮಾಡುತ್ತೆ. ಹಾಗಾದರೆ ಮಹಿಳಾ ಕುಸ್ತಿಪಟುಗಳು ರಸ್ತೆಯಲ್ಲಿ ಹೋರಾಟ ಮಾಡುತ್ತಿರುವುದಕ್ಕೂ ಮೋದಿ ಅವರೇ ಕಾರಣ ಅಲ್ಲವೇ? ಪ್ರಧಾನಿಗಳ ಬೆಂಬಲ ಇಲ್ಲದೆಯೇ ಆಪಾದಿತ ವ್ಯಕ್ತಿ ಅಷ್ಟೊಂದು ಭಂಡತನದಿಂದ ಮಾತನಾಡಲು ಸಾಧ್ಯವಾಗುತ್ತಿತ್ತೆ? ಆತನ ಮೇಲೆ ಎಫ್‌ಐಆರ್‌ ದಾಖಲಿಸುವ ಸಲುವಾಗಿ ಸಂತ್ರಸ್ತರು ಸುಪ್ರೀಂಕೋರ್ಟ್‌ ವರೆಗೆ ಹೋಗಬೇಕಿತ್ತೆ? ನನಗೆ ಯಾವುದೇ ತೊಂದರೆ ಆದಾಗ ನಾನು ದೂರು ಕೊಡುವುದು, ಆ ದೂರನ್ನು ಆಧರಿಸಿ ಎಫ್‌ಐಆರ್‌ ದಾಖಲಿಸಬೇಕು ಎಂದು ಕೇಳುವುದು ಪ್ರತಿಯೊಬ್ಬರ ಮೂಲಭೂತ ಹಕ್ಕಲ್ಲವೇ? ಒಂದು ಎಫ್‌ಐಆರ್‌ಗಾಗಿ ಜನ ಸುಪ್ರೀಂಕೋರ್ಟ್‌ಗೆ ಹೋಗಬೇಕಾದ ಪರಿಸ್ಥಿತಿ ನಮ್ಮ ದೇಶದಲ್ಲಿದೆ. ಈ ದೇಶದಲ್ಲಿ ಪ್ರಜಾಪ್ರಭುತ್ವ ಆಪತ್ತಿನಲ್ಲಿದೆ ಎಂದು ಯಾರಾದರೂ ಹೇಳಿದರೆ ಅಧಿಕಾರದಲ್ಲಿರುವವರು ಹಾಗೆ ಹೇಳುವವರನ್ನು ದೇಶದ್ರೋಹಿಗಳು ಎಂದು ಕರೆಯುತ್ತಾರೆ. ನಿಜವಾದ ದೇಶ ವಿರೋಧಿಗಳು ಮತ್ತು ಸಂವಿಧಾನ ವಿರೋಧಿಗಳು ಅಧಿಕಾರದಲ್ಲಿದ್ದಾರೆ. ಇಂಥವರ ವಿರುದ್ಧ ಎಲ್ಲರೂ ಒಟ್ಟಾಗಿ ಹೋರಾಟ ಮಾಡಬೇಕು” ಎಂದಿದ್ದಾರೆ.

ಈ ಸುದ್ದಿ ಓದಿದ್ದೀರಾ? ಈದಿನ ವಿಶೇಷ | ಬೊಮ್ಮಾಯಿ ಮಾಮನ ದುರಹಂಕಾರ: ನೋವು ತೋಡಿಕೊಂಡ ಪವನ್ ಕುಮಾರ

ಮನ್‌ ಕಿ ಭಾತ್‌ ಕಾರ್ಯಕ್ರಮದ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿರುವ ಕಿಶೋರ್‌, “ಪ್ರಧಾನಿಗಳು ತಮ್ಮ ಮನಸ್ಸಿನ ಮಾತನ್ನು ಮಾತ್ರ ಹೇಳಿಕೊಳ್ಳುತ್ತಾರೆ. ಅವರದ್ದು ಏಕಮುಖ ಸಂವಹನ, ನಾನು ಹೇಳಿದ್ದನ್ನು ನೀವು ಕೇಳಬೇಕು ಎನ್ನುವ ದುರಹಂಕಾರ ಅಷ್ಟೇ. ಜನಗಳ ಮಾತನ್ನು ಕೇಳಿದರಷ್ಟೇ ನಿಮಗೆ ಪ್ರಜಾಪ್ರಭುತ್ವದಲ್ಲಿ ಜಾಗ ಇರುತ್ತೆ ಎಂಬುದನ್ನು ಇವತ್ತು ಕರ್ನಾಟಕದ ಜನ ತೋರಿಸಿದ್ದಾರೆ. ಚುನಾವಣೆಯ ನೀತಿ ನಿಯಮಗಳನ್ನೆಲ್ಲ ಧೂಳೀಪಟ ಮಾಡಿ, ಧರ್ಮ, ದೇವರು ಎಲ್ಲವನ್ನೂ ಮುಂದಿಟ್ಟುಕೊಂಡು ಜನರನ್ನು ಒಡೆಯುವ ಪ್ರಯತ್ನ ಮಾಡಿದರು. ಆದರೆ, ಕರ್ನಾಟಕದ ಜನ ಜಾಗೃತರು ಎಂಬುದನ್ನು ಸಾಬೀತು ಪಡಿಸಿದ್ದಾರೆ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆರೋಗ್ಯದಲ್ಲಿ ದಿಢೀರ್ ಏರುಪೇರು: ಬಿಗ್‌ಬಿ ಅಮಿತಾಭ್ ಬಚ್ಚನ್ ಆಸ್ಪತ್ರೆಗೆ ದಾಖಲು

ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರ ಆರೋಗ್ಯದಲ್ಲಿ ದಿಢೀರ್ ಆಗಿ...

ಅಶ್ಲೀಲ ವಿಡಿಯೋ ಪ್ರಸಾರ : 18 ಒಟಿಟಿ, 19 ವೆಬ್‌ಸೈಟ್‌ಗಳನ್ನು ನಿಷೇಧಿಸಿದ ಕೇಂದ್ರ

ಹಲವು ಎಚ್ಚರಿಕೆಗಳ ನಡುವೆಯೂ ಅಶ್ಲೀಲ ವಿಡಿಯೋಗಳನ್ನು ಪ್ರಸಾರ ಮಾಡುತ್ತಿದ್ದ 18 ಒಟಿಟಿ...

ತುಮಕೂರು | ತುಕಾಲಿ ಸಂತೋಷ್‌ ಕಾರು ಅಪಘಾತ; ಆಟೋ ಚಾಲಕ ಸಾವು

ಬಿಗ್‌ಬಾಸ್‌ ಸೀಸನ್ 10ರ ಸ್ಪರ್ಧಿ, ಹಾಸ್ಯ ನಟ ತುಕಾಲಿ ಸಂತೋಷ್ ಅವರ...

ದೇಶ ವಿಭಜಿಸಲು, ಸೌಹಾರ್ದತೆ ಕದಡಲು ಸಿಎಎ ಜಾರಿ: ನಟ ಕಮಲ್ ಹಾಸನ್

ಸಾರ್ವತ್ರಿಕ ಚುನಾವಣೆಗೆ ಮುನ್ನ ಜನರನ್ನು ವಿಭಜಿಸಲು ಮತ್ತು ಸಾಮರಸ್ಯವನ್ನು ನಾಶಮಾಡಲು ಕೇಂದ್ರ...