ಕೇರಳ: ಆಫ್ರಿಕಾ ಫುಟ್‌ಬಾಲ್ ಆಟಗಾರನ ಮೇಲೆ ಪ್ರೇಕ್ಷಕರಿಂದ ಹಲ್ಲೆ, ಜನಾಂಗೀಯ ನಿಂದನೆ

Date:

ಫುಟ್‌ಬಾಲ್ ಆಟ ನಡೆಯುತ್ತಿದ್ದ ವೇಳೆ ಆಫ್ರಿಕಾ ಖಂಡದ ಐವರಿ ಕೋಸ್ಟ್‌ ದೇಶದ ಫುಟ್‌ಬಾಲ್‌ ಆಟಗಾರನ ಮೇಲೆ ಪ್ರೇಕ್ಷಕರು ಹಲ್ಲೆ ನಡೆಸಿದ ಘಟನೆ ಕೇರಳ ಪಲಪ್ಪುರಂ ಜಿಲ್ಲೆಯಲ್ಲಿ ನಡೆದಿದೆ. ಹಲ್ಲೆ ನಡೆಸಿದ ಗುಂಪು ಜನಾಂಗೀಯವಾಗಿ ನಿಂದಿಸಿದೆ ಎಂದು ಆರೋಪಿಸಲಾಗಿದೆ.

ಘಟನೆ ನಡೆಯುತ್ತಿರುವಾಗ ಪ್ರೇಕ್ಷಕನೊಬ್ಬ ಫುಟ್‌ಬಾಲ್ ಆಟಗಾರನ ಮೇಲೆ ಕಾಲಿನಿಂದ ಒದ್ದಿದ್ದಾನೆ.

ವೈರಲ್‌ ಆಗಿರುವ ವಿಡಿಯೋದಲ್ಲಿರುವಂತೆ, ಹಲ್ಲೆಗೊಳಗಾದ ಯುವಕನ ಹೆಸರು ದೈರ್ರಸ್ಸುಬಾ ಹಸ್ಸಾನೆ ಜೂನಿಯರ್. ಈತ ನೀಲಿ ಬಣ್ಣದ ಟಿಶರ್ಟ್ ಧರಿಸಿದ್ದಾನೆ. ಜನರು ಈತನನ್ನು ಮೈದಾನದಲ್ಲಿ ಅಟ್ಟಾಡಿಸಿಕೊಂಡು ಹಲ್ಲೆ ನಡೆಸುತ್ತಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಅಟ್ಟಾಡಿಸಿಕೊಂಡು ಓಡಿದ ಜನ ಐವರಿ ಕೋಸ್ಟ್‌ ಆಟಗಾರರನ್ನು ಪದೇಪದೆ ಹಲ್ಲೆ ನಡೆಸಿದ್ದಾರೆ. ಪೆಟ್ಟು ತಿಂದ ಯುವಕ ಮೈದಾನದ ದ್ವಾರದಿಂದ ತೆರಳಿದ್ದಾನೆ.

ಈ ಸುದ್ದಿ ಓದಿದ್ದಾರಾ? ಈ ದಿನ ಸಂಪಾದಕೀಯ | ಮಾರ್ಚ್ ನಲ್ಲೇ ನೀರಿಗಾಗಿ ಹಾಹಾಕಾರ, ಮಿತ ಬಳಕೆಯ ಪಾಠ ಕಲಿಯಲು ಇದು ಸಕಾಲ

ಘಟನೆಯ ನಂತರ ಹಲ್ಲೆಗೊಳಗಾದ ದೈರ್ರಸ್ಸುಬಾ ಹಸ್ಸಾನೆ ಜೂನಿಯರ್ ದೂರು ನೀಡಿದ್ದು, ಪೊಲೀಸರು ಈತನ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.

ಫುಟ್‌ಬಾಲ್‌ ಆಟಗಾರ ದೂರಿನಲ್ಲಿ, ಕಾರ್ನರ್‌ ಕಿಕ್‌ನಲ್ಲಿ ಫುಟ್‌ಬಾಲನ್ನು ಒದೆಯುತ್ತಿರುವ ಸಂದರ್ಭದಲ್ಲಿ ಮೈದಾನದಲ್ಲಿದ್ದ ಪ್ರೇಕ್ಷಕರು ನಿಂದಿಸಿದ್ದಾರೆ. ಪ್ರೇಕ್ಷಕರ ಗುಂಪು ಈತನತ್ತ ಕಲ್ಲುಗಳನ್ನು ತೂರಿದ್ದಾರೆ. ಪೊಲೀಸರು ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ.

ದೈರ್ರಸ್ಸುಬಾ ಹಸ್ಸಾನೆ ಜೂನಿಯರ್ ಜವಾಹರ್‌ ಮಾವೋರ್‌ ಫುಟ್‌ಬಾಲ್‌ ಕ್ಲಬ್‌ ಅನ್ನು ಪ್ರತಿನಿಧಿಸುತ್ತಿದ್ದು, ಈ ಕ್ಲಬ್‌ ಸೆವೆನ್ಸ್‌ ಕ್ಲಬ್‌ ಟೂರ್ನಮೆಂಟ್‌ನ ಭಾಗವಾಗಿದೆ. ಮಲಪ್ಪುರಂನಲ್ಲಿ ಸೆವೆನ್ಸ್‌ ಫುಟ್‌ಬಾಲ್‌ ಪ್ರತಿಷ್ಠಿತ ಕ್ರೀಡಾ ಕಾರ್ಯಕ್ರಮವಾಗಿದ್ದು, ಸ್ಥಳೀಯ ಕ್ರೀಡಾಂಗಣಗಳಲ್ಲಿ ಪಂದ್ಯಗಳನ್ನು ಆಯೋಜಿಸಲಾಗುತ್ತದೆ.

ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಪಿಎಲ್ 2024 | ತಲಾ 5 ಬಾರಿ ಕಪ್‌ ಗೆದ್ದಿರುವ ಮುಂಬೈ – ಚನ್ನೈ ನಡುವೆ ಹಣಾಹಣಿ; ಎಲ್ಲರ ಚಿತ್ತ ವಾಂಖೆಡೆಯತ್ತ!

ಐಪಿಎಲ್‌ನ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ಮತ್ತು ಮುಂಬೈ...

ಐಪಿಎಲ್ | ಕೆ ಎಲ್ ರಾಹುಲ್ ನೇತೃತ್ವದ ಲಕ್ನೋಗೆ ಸೋಲುಣಿಸಿದ ಡೆಲ್ಲಿ ಕ್ಯಾಪಿಟಲ್ಸ್‌

ಲಕ್ನೋ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಶುಕ್ರವಾರ ನಡೆದ ಐಪಿಎಲ್‌ನ 26ನೇ...

ಪ್ಯಾರಿಸ್ ಒಲಿಂಪಿಕ್ಸ್‌ನ ಭಾರತದ ಮುಖ್ಯಸ್ಥ ಸ್ಥಾನಕ್ಕೆ ಮೇರಿ ಕೋಮ್ ರಾಜೀನಾಮೆ

ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ನ ಭಾರತದ ಮುಖ್ಯಸ್ಥ ಸ್ಥಾನಕ್ಕೆ ಒಲಿಂಪಿಕ್ ಪದಕ ವಿಜೇತೆ...

ಐಪಿಎಲ್ 2024 | ಮುಂಬೈಗೆ ಭರ್ಜರಿ ಗೆಲುವು; ಆರ್‌ಸಿಬಿಗೆ 5ನೇ ಸೋಲು

ಮುಂಬೈ ಇಂಡಿಯನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 7 ವಿಕೆಟ್​ಗಳ...