ರಜೆ ಘೋಷಿಸಿ ನಿರ್ಧಾರ ಬದಲಿಸಿದ ದೆಹಲಿಯ ಏಮ್ಸ್ ಆಸ್ಪತ್ರೆ

Date:

ರಾಷ್ಟ್ರ ರಾಜಧಾನಿ ನವದೆಹಲಿಯ ಏಮ್ಸ್‌ ಆಸ್ಪತ್ರೆಯು ಜನವರಿ 22 ರಂದು ಅಯೋಧ್ಯೆಯಲ್ಲಿ ನಡೆಯುವ ರಾಮ ಮಂದಿರ ಉದ್ಘಾಟನೆಗಾಗಿ ಅರ್ಧ ದಿನ ರಜೆ ಘೋಷಿಸಿ ನಂತರ ತನ್ನ ನಿರ್ಧಾರ ಬದಲಿಸಿದೆ.

ಮೊದಲು ರಜೆ ಘೋಷಿಸಿದ್ದ ಆಸ್ಪತ್ರೆಯು ನಂತರ ತನ್ನ ನಿರ್ಧಾರ ಬದಲಿಸಿ ಪ್ರಕಟಣೆ ಹೊರಡಿಸಿದೆ. ಅನಾನುಕೂಲತೆ ತಡೆಗಟ್ಟುವ ಸಲುವಾಗಿ ರೋಗಿಗಳ ಆರೈಕೆಯನ್ನು ಸಲುಭಗೊಳಿಸಲು ಜನವರಿ 22ರ ದಿನದಂದು ಪೂರ್ವಾನುಮತಿ ಹೊಂದಿರುವ ರೋಗಿಗಳಿಗಾಗಿ ಆಸ್ಪತ್ರೆಯ ಹೊರ ರೋಗಿಯ ವಿಭಾಗವು ತೆರೆದಿರುತ್ತದೆ. ಇದರ ಜೊತೆ ಎಲ್ಲ ತುರ್ತು ಚಿಕಿತ್ಸಾ ಸೇವಾ ಕೇಂದ್ರಗಳು ಕೂಡ ಕಾರ್ಯಾಚರಣೆ ನಡೆಸುತ್ತವೆ ಎಂದು ತಿಳಿಸಲಾಗಿದೆ.

ಈ ಮೊದಲು ದೆಹಲಿಯ ಏಮ್ಸ್ ಆಸ್ಪತ್ರೆಯು ತನ್ನ ಸುತ್ತೋಲೆಯಲ್ಲಿ ಸರ್ಕಾರ ಜನವರಿ 22 ರಂದು ರಾಮ ಮಂದಿರ ಉದ್ಘಾಟನೆಯ ದಿನದ ಅಂಗವಾಗಿ ಸರ್ಕಾರ ರಜೆ ಘೋಷಿಸಿದ ಹಿನ್ನೆಲೆ ಆಸ್ಪತ್ರೆ ಸೇವೆ ಸ್ಥಗಿತಗೊಳಿಸುವುದಾಗಿ ತಿಳಿಸಿತ್ತು. ಆದಾಗ್ಯೂ ತುರ್ತು ಚಿಕಿತ್ಸಾ ಸೇವಾ ಕೇಂದ್ರಗಳು ಕಾರ್ಯಾಚರಣೆ ನಡೆಸಲಿವೆ ಎಂದು ತಿಳಿಸಲಾಗಿತ್ತು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಗ್ಗಿ ಬದುಕಿದವರು ಎದ್ದು ನಿಲ್ಲುವುದು ಯಾವಾಗ?

ಏಮ್ಸ್‌ನ ಅರ್ಧ ದಿನದ ರಜೆ ನಿರ್ಧಾರವನ್ಬು ಹಲವು ವಿರೋಧ ಪಕ್ಷದ ನಾಯಕರು ಟೀಕಿಸಿದ್ದರು, ಈ ನಿರ್ಧಾರದಿಂದಾಗಿ “ಆರೋಗ್ಯ ಸೇವೆಗಳು” ಅಸ್ತವ್ಯಸ್ತಗೊಳ್ಳುತ್ತವೆ ಎಂದು ಹೇಳಿದ್ದರು.

ಶಿವಸೇನಾ (ಯುಬಿಟಿ) ಸಂಸದೆ ಪ್ರಿಯಾಂಕಾ ಚತುರ್ವೇದಿ, , “ಏಮ್ಸ್‌ ದಯವಿಟ್ಟು ಜನವರಿ 22 ರಂದು ವೈದ್ಯಕೀಯ ಸೇವೆ ರದ್ದುಗೊಳಿಸಿ ತುರ್ತುಸ್ಥಿತಿಯನ್ನು ತಂದೊಡ್ಡಬೇಡಿ. ನೀವು ಮಧ್ಯಾಹ್ನ 2 ಗಂಟೆಯ ಸೇವೆಯನ್ನು ನಿಗದಿಪಡಿಸಿದರೆ ಆರೋಗ್ಯ ಸೇವೆಗಳಿಗೆ ಅಡ್ಡಿಯಾಗುತ್ತದೆ. ಭಗವಂತ ಇದನ್ನು ಒಪ್ಪುವುದಿಲ್ಲ” ಎಂದು ಟೀಕಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ಸಂಸದ ಸಾಕೇತ್ ಗೋಖಲೆ ಅವರು ನಿರ್ಧಾರವನ್ನು ಕಟುವಾಗಿ ಟೀಕಿಸಿದರು, “ಜನರು ಪೂರ್ವಾನುಮತಿಗಾಗಿ ಕಾಯುತ್ತಿದ್ದು, ಏಮ್ಸ್ ದ್ವಾರಗಳಲ್ಲಿ ಚಳಿಯಲ್ಲಿ ಹೊರಗೆ ಮಲಗಿದ್ದಾರೆ. ಬಡವರು ಮತ್ತು ಸಾಯುತ್ತಿರುವವರು ಕಾಯಬಹುದು. ಏಕೆಂದರೆ ಕ್ಯಾಮೆರಾಗಳು ಮತ್ತು ಪಿಆರ್‌ಗಳು ಮೋದಿಯವರ ಹತಾಶೆಗೆ ಆದ್ಯತೆ ನೀಡಲಾಗುತ್ತದೆ” ಎಂದು ಹೇಳಿದ್ದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಆಸ್ಪತ್ರೆ ಸೇವೆಗಳನ್ನು ಸ್ಥಗಿತಗೊಳಿಸುವುದೇ ! ಏನಿದು ತಮಾಷೆ ?

    ಕರ್ತವ್ಯ ಮುಖ್ಯವೋ ? ದೇವರು ಮುಖ್ಯವೋ ?

    ಮೊದಲು ನಿಮ್ಮ – ನಿಮ್ಮ ಕರ್ತವ್ಯವನ್ನು ಮಾಡಿ.

    ಆಮೇಲೆ ಏನು ಬೇಕಾದರೂ ಮಾಡಿ ?

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಲೋಕಸಭಾ 2ನೇ ಹಂತದ ಚುನಾವಣೆ: ಇವಿಎಂ ವಿರುದ್ಧ 290 ದೂರು ಸ್ವೀಕಾರ, ಶೇ.39 ಮತದಾನ

ದೇಶದ 13 ರಾಜ್ಯಗಳ 88 ಲೋಕಸಭಾ ಕ್ಷೇತ್ರಗಳಿಗೆ ಎರಡನೇ ಹಂತದ ಮತದಾನ...

ಕೋಮು ದ್ವೇಷ ಭಾಷಣ; ಮೋದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಚು.ಆಯೋಗಕ್ಕೆ 93 ನಿವೃತ ಅಧಿಕಾರಿಗಳ ಪತ್ರ

ರಾಜಸ್ಥಾನದ ಬನ್ಸ್‌ವಾರಾದಲ್ಲಿ ಏಪ್ರಿಲ್ 21ರಂದು ನಡೆದ ಚುನಾವಣಾ ರ್‍ಯಾಲಿಯಲ್ಲಿ ಪ್ರಧಾನಿ ನರೇಂದ್ರ...

‘ನೋಟಾ’ಗೆ ಹೆಚ್ಚು ಮತ ಬಂದರೆ ಮುಂದೇನು? ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್

ಅಭ್ಯರ್ಥಿಗಳಿಗಿಂತ ‘ನೋಟಾ’ಗೆ ಹೆಚ್ಚು ಮತಗಳು ಬಂದರೆ ಏನು ಮಾಡಬೇಕೆಂಬ ಸಾರ್ವಜನಿಕ ಹಿತಾಸಕ್ತಿ...

ಬಿಹಾರ| ಹೊತ್ತಿ ಉರಿದ ಮದುವೆಯ ಮಂಟಪ; ಆರು ಮಂದಿ ಸಜೀವ ದಹನ

ಬಿಹಾರದ ದರ್ಬಂಗಾ ಜಿಲ್ಲೆಯ ಮದುವೆಯ ಮಂಟಪ ಹೊತ್ತಿ ಉರಿದಿದ್ದು, ಈ ಅಗ್ನಿ...