ಅಮೆರಿಕ | ಜಾರ್ಜ್ ಫ್ಲಾಯ್ಡ್ ಹತ್ಯೆ ಆರೋಪಿಗೆ ಜೈಲಿನಲ್ಲಿ ಸಹಕೈದಿಯಿಂದ ಇರಿತ

Date:

ಅಮೆರಿಕದ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಸಾವಿನ ಅಪರಾಧಿ ಮಿನ್ನಿಯಾಪೋಲಿಸ್ ಮಾಜಿ ಪೊಲೀಸ್ ಅಧಿಕಾರಿ ಡೆರೆಕ್ ಚೌವಿನ್ ಫೆಡರಲ್ ಜೈಲಿನಲ್ಲಿ ಇರಿತಕ್ಕೊಳಗಾಗಿದ್ದಾರೆ ಮತ್ತು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಸೋಸಿಯೇಟೆಡ್ ಪ್ರೆಸ್ ವರದಿ ತಿಳಿಸಿದೆ.

ಟಕ್ಸನ್‌ನಲ್ಲಿರುವ ಫೆಡರಲ್ ಕರೆಕ್ಷನಲ್ ಇನ್‌ಸ್ಟಿಟ್ಯೂಷನ್‌ನಲ್ಲಿ ಶುಕ್ರವಾರ ಮತ್ತೊಬ್ಬ ಕೈದಿ ಚೌವಿನ್‌ಗೆ ಇರಿದಿದ್ದಾನೆ ಎಂದು ಸುದ್ದಿ ಸಂಸ್ಥೆ ಹೇಳಿದೆ. ಆದರೆ, ಟಕ್ಸನ್ ಜೈಲಿನ ಮೂಲಗಳು ಈ ಸುದ್ದಿಯನ್ನು ಇನ್ನೂ ದೃಢೀಕರಿಸಿಲ್ಲ.

ಏನಿದು ಪ್ರಕರಣ: 2020ರ ಮೇ ತಿಂಗಳಲ್ಲಿ 46 ವರ್ಷದ ಅಮೆರಿಕದ ಕಪ್ಪು ವರ್ಣೀಯ ಜಾರ್ಜ್ ಫ್ಲಾಯ್ಡ್ ಅವರನ್ನು ಮಿನ್ನಿಯಾಪೊಲೀಸ್‌ನ ಅಂಗಡಿಯೊಂದರಲ್ಲಿ ನಕಲಿ 20 ಡಾಲರ್ ಹಣ ಪಾವತಿಸಿದ ಅನುಮಾನದಡಿ ಪೊಲೀಸ್ ಅಧಿಕಾರಿ ಡೆರಿಕ್ ಚೌವಿನ್ ಬಂಧಿಸಿದ್ದರು. ಫ್ಲಾಯ್ಡ್‌ ಕೈಗಳಿಗೆ ಕೋಳ ತೊಡಿಸಿದ್ದ ಚೌವಿನ್, ಅವರ ಮುಖವನ್ನು ರಸ್ತೆಯಲ್ಲಿಯೇ ನೆಲದ ಮೇಲೆ ಮೊಣಕಾಲಿನಿಂದ ಒತ್ತಿಹಿಡಿದ ಚಿತ್ರ ವೈರಲ್ ಆಗಿತ್ತು. ಪೊಲೀಸ್ ಅಧಿಕಾರಿ ಡೆರಿಕ್ ಚೌವಿನ್ 9 ನಿಮಿಷ 29 ಸೆಕೆಂಡ್ ಕಾಲ ಫ್ಲಾಯ್ಡ್‌ ಕುತ್ತಿಗೆಯ ಮೇಲೆ ತನ್ನ ಕಾಲನ್ನು ಒತ್ತಿ ಹಿಡಿದೇ ಇದ್ದ. ಉಸಿರು ಗಟ್ಟಿ ಫ್ಲಾಯ್ಡ್ ನಿಧನ ಹೊಂದಿದ್ದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ: ಈ ದಿನ ಸಂಪಾದಕೀಯ | ದುಡಿವ ಜನರ ಮಹಾಧರಣಿ: ಶುರುವಾಗಲಿ ಜನಪರ್ಯಾಯ

ಮಿನ್ನಿಯಾಪೊಲೀಸ್ ನ್ಯಾಯಾಲಯದಲ್ಲಿ ಚೌವಿನ್, ಫ್ಲಾಯ್ಡ್ ಕುಟುಂಬಕ್ಕೆ ಸಂತಾಪ ಸೂಚಿಸಿದರೂ ಕ್ಷಮೆ ಕೇಳಿರಲಿಲ್ಲ. ಚೌವಿನ್‌ಗೆ 22 ವರ್ಷ ಆರು ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿತ್ತು. ಫ್ಲಾಯ್ಡ್ ಹತ್ಯೆ ವಿಶ್ವದಾದ್ಯಂತ ಜನಾಂಗೀಯ ಅನ್ಯಾಯ ಮತ್ತು ಪೊಲೀಸ್ ದೌರ್ಜನ್ಯದ ವಿರುದ್ಧ ಪ್ರತಿಭಟನೆಗೆ ನಾಂದಿ ಹಾಡಿತ್ತು. ಅಮೆರಿಕದಲ್ಲಿ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಅಂದೋಲನ ತೀವ್ರವಾಗಿತ್ತು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದುಬೈ ಪ್ರವಾಹ| ಭಾರೀ ಮಳೆ, ಬಿರುಗಾಳಿಯಿಂದ ಸಂಚಾರ ಅಸ್ತವ್ಯಸ್ತ; 28 ಭಾರತದ ವಿಮಾನಗಳು ರದ್ದು

ಮಧ್ಯಪ್ರಾಚ್ಯದ ಆರ್ಥಿಕ ಕೇಂದ್ರವಾದ ದುಬೈನಲ್ಲಿ ಭಾರೀ ಮಳೆ ಮತ್ತು ಚಂಡಮಾರುತ ಕಾಣಿಸಿಕೊಂಡಿದ್ದು...

ಮರುಭೂಮಿ ದೇಶ ದುಬೈನಲ್ಲಿ ಭಾರೀ ಮಳೆಯಿಂದ ಪ್ರವಾಹ; ಒಮಾನ್​ನಲ್ಲಿ 18 ಮಂದಿ ಸಾವು

ಯುನೈಟೆಡ್ ಅರಬ್ ಎಮಿರೆಟ್ಸ್ (ಯುಎಇ)ನಲ್ಲಿ ಮಂಗಳವಾರ ಸುರಿದ ಧಾರಾಕಾರ ಮಳೆಗೆ ದುಬೈ...

ಇರಾನ್ ವಶದಲ್ಲಿ ಇಸ್ರೇಲ್ ಹಡಗು: 17 ಸಿಬ್ಬಂದಿಗಳ ಭೇಟಿ ಮಾಡಲು ಭಾರತೀಯ ಅಧಿಕಾರಿಗಳಿಗೆ ಅನುಮತಿ

ಇರಾನ್‌ನ ಕಮಾಂಡೋಗಳು 17 ಭಾರತೀಯ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಇಸ್ರೇಲ್ ಮೂಲದ ಸರಕು...

ಪಾಕಿಸ್ತಾನ | ಸರಬ್ಜಿತ್ ಸಿಂಗ್ ಕೊಲೆಯ ಆರೋಪಿ ಅಮೀರ್ ಸರ್ಫರಾಜ್ ಗುಂಡಿಕ್ಕಿ ಹತ್ಯೆ

ಭಾರತದ ಸರಬ್ಜಿತ್ ಸಿಂಗ್‌ ಹತ್ಯೆಯ ಆರೋಪಿ ಪಾಕಿಸ್ತಾನದ ಭೂಗತ ಪಾತಕಿ ಅಮೀರ್‌...