ಐಪಿಎಲ್ 2023 | ಕಾಯುವಿಕೆಗೆ ಅಂತ್ಯ; ಅರ್ಜುನ್ ತೆಂಡೂಲ್ಕರ್ ಐಪಿಎಲ್ ಪದಾರ್ಪಣೆ

Date:

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಕೊನೆಗೂ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದ್ದಾರೆ.

ಕಳೆದ ಕೆಲ ವರ್ಷಗಳಿದ ಮುಂಬೈ ಇಂಡಿಯನ್ಸ್ ಫ್ರಾಂಚೈಸಿಯ ಭಾಗವಾಗಿದ್ದ ಅರ್ಜುನ್, ಭಾನುವಾರ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೊಚ್ಚಲ ಪಂದ್ಯವನ್ನಾಡುವ ಅವಕಾಶ ಪಡೆದಿದ್ದಾರೆ.

ಮುಂಬೈನ ವಾಂಖೆಡೆ ಮೈದಾನದಲ್ಲಿ ನಾಯಕ ರೋಹಿತ್​ ಶರ್ಮಾ, ಕ್ಯಾಪ್​ ನೀಡುವ ಮೂಲಕ ಅರ್ಜುನ್’ರನ್ನು ಮೊದಲ ಬಾರಿಗೆ ಆಡುವ ಹನ್ನೊಂದರ ಬಳಗಕ್ಕೆ ಬರಮಾಡಿಕೊಂಡರು. ಈ ವೇಳೆ ಸಹೋದರಿ ಸಾರಾ ತೆಂಡೂಲ್ಕರ್​ ಚಪ್ಪಾಳೆ ತಟ್ಟುವ ಮೂಲಕ ಅಭಿನಂದಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ?: ಐಪಿಎಲ್ 2023 | ಮಹಿಳಾ ಚಾಂಪಿಯನ್ ತಂಡದ ಜೆರ್ಸಿ ಧರಿಸಲಿರುವ ಮುಂಬೈ ಇಂಡಿಯನ್ಸ್

ಕಾಕತಾಳೀಯವೆಂದರೆ ಸಚಿನ್ ತೆಂಡೂಲ್ಕರ್ ಅವರು ಮುಂಬೈ ಇಂಡಿಯನ್ಸ್ ಪರ‌ ಆಡುತ್ತಿದ್ದ ವೇಳೆ, ಐಪಿಎಲ್‌ನಲ್ಲಿ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಮೊದಲ ಬಾರಿಗೆ ಬೌಲಿಂಗ್ ಮಾಡಿದ್ದರು. ತಮ್ಮ ಚೊಚ್ಚಲ ಓವರ್‌ನಲ್ಲಿ ಸಚಿನ್ 5 ರನ್ ಬಿಟ್ಟು ಕೊಟ್ಟಿದ್ದರು. ಭಾನುವಾರದ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಮೊದಲ ಓವರ್ ಎಸೆದ ಅರ್ಜುನ್ ತೆಂಡೂಲ್ಕರ್ 5 ರನ್ ಬಿಟ್ಟುಕೊಟ್ಟರು.

2022ರ ಐಪಿಎಲ್ ಮೆಗಾ ಹರಾಜಿನಲ್ಲಿ ₹30 ಲಕ್ಷಕ್ಕೆ ಬಿಡ್ ಮಾಡುವ ಮೂಲಕ ಅರ್ಜುನ್ ತೆಂಡೂಲ್ಕರ್ ಅವರನ್ನು ಮುಂಬೈ ಇಂಡಿಯನ್ಸ್ ತಂಡ ತನ್ನಲ್ಲೇ ಉಳಿಸಿಕೊಂಡಿತ್ತು.

ಇದಕ್ಕೂ ಮೊದಲು 2021ರಲ್ಲಿ ಮುಂಬೈ ತಂಡವು ಅವರನ್ನು ₹20 ಲಕ್ಷ ಮೂಲ ಬೆಲೆಗೆ ಖರೀದಿಸಿತ್ತು.

ಕಳೆದ ಆವೃತ್ತಿಯ ರಣಜಿ ಟ್ರೋಫಿಯಲ್ಲಿ ಅರ್ಜುನ್ ತೆಂಡೂಲ್ಕರ್ ಗೋವಾ ಪರ ಪದಾರ್ಪಣ ಪಂದ್ಯದಲ್ಲೇ ಶತಕ ಬಾರಿಸುವ ಮೂಲಕ ತಂದೆ ಸಚಿನ್​ ಅವರ ದಾಖಲೆ ಸರಿಗಟ್ಟಿದ್ದರು.

ಇದುವರೆಗೆ 7 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರುವ ಅರ್ಜುನ್ 12 ವಿಕೆಟ್ ಪಡೆದಿದ್ದು,‌ ಬ್ಯಾಟಿಂಗ್‌ನಲ್ಲಿ 233 ರನ್ ಗಳಿಸಿದ್ದಾರೆ.

​ಕೆಕೆಆರ್ ವಿರುದ್ಧದ ಭಾನುವಾರದ ಪಂದ್ಯದಲ್ಲಿ ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್​ ಮೊದಲು ಬೌಲಿಂಗ್​ ಆಯ್ಕೆ ಮಾಡಿಕೊಂಡಿದೆ.

ತಂಡದ ಖಾಯಂ ನಾಯಕ ರೋಹಿತ್​ ಶರ್ಮ ಕ್ಷೇತ್ರ ರಕ್ಷಣೆ ಸಂದರ್ಭ ಮೈದಾನಕ್ಕೆ ಇಳಿಯದ ಕಾರಣ ಸೂರ್ಯಕುಮಾರ್​ ಯಾದವ್​ ತಂಡವನ್ನು ಮುನ್ನಡೆಸಿದರು.

ಮುಂಬೈ vs ಕೆಕೆಆರ್

ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆವೃತ್ತಿಯ 22ನೇ ಪಂದ್ಯ ಅಭಿಮಾನಿಗಳಿಗೆ ವಿಶೇಷ ಅನುಭವ ನೀಡಲಿದೆ.

ಹೆಣ್ಣು ಮಕ್ಕಳಿಗೆ ವಿಶೇಷ ಗೌರವ ನೀಡುವ ಉದ್ದೇಶದಿಂದ, ಇತ್ತೀಚೆಗಷ್ಟೇ ಮುಕ್ತಾಯ ಕಂಡ ಚೊಚ್ಚಲ ಪ್ರೀಮಿಯರ್‌ ಲೀಗ್‌‌ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವನ್ನೇರಿರುವ ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ಜೆರ್ಸಿಯನ್ನು ಧರಿಸಿ ಭಾನುವಾರ ರೋಹಿತ್ ಶರ್ಮಾ ಪಡೆ ವಾಂಖೆಡೆಯಲ್ಲಿ ಕಣಕ್ಕಿಳಿದಿದೆ.

ಮುಂಬೈ ಇಂಡಿಯನ್ಸ್ ಮಹಿಳಾ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಜೊತೆ ಟಾಸ್‌ನಲ್ಲಿ ಭಾಗವಹಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಪಿಎಲ್ | ಪಂಜಾಬ್ ವಿರುದ್ಧ ಗುಜರಾತ್ ಟೈಟನ್ಸ್‌ಗೆ ಮೂರು ವಿಕೆಟ್‌ಗಳ ಜಯ

ಚಂಡೀಗಢದ ಮಹಾರಾಜ ಯಾದವೀಂದ್ರ ಸಿಂಗ್ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ಇಂದು ನಡೆದ ಐಪಿಎಲ್‌...

ಐಪಿಎಲ್ | ರೋಚಕ ಹಣಾಹಣಿಯಲ್ಲಿ ಕೈಕೊಟ್ಟ ನಸೀಬು: ಕೆಕೆಆರ್‌ ವಿರುದ್ಧ ಆರ್‌ಸಿಬಿಗೆ 1 ರನ್‌ಗಳ ಸೋಲು

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಇಂದು ನಡೆದ ಐಪಿಎಲ್ 36ನೇ ಪಂದ್ಯದಲ್ಲಿ ರಾಯಲ್...

ಟಿ20 ವಿಶ್ವಕಪ್ ಕ್ರಿಕೆಟ್‌ನಲ್ಲಿ ‘ಕೆಎಂಎಫ್’ ಪ್ರಯೋಜಕತ್ವ

ನಂದಿನಿ ಬ್ರಾಂಡ್‌ನೊಂದಿಗೆ ಡೇರಿ ಉದ್ಯಮಗಳಲ್ಲಿ ಎಲ್ಲಡೆ ಹೆಸರುವಾಸಿಯಾಗಿರುವ ಕರ್ನಾಟಕ ಹಾಲು ಒಕ್ಕೂಟ...

ಐಪಿಎಲ್ | ಹೈದರಾಬಾದ್ ನೀಡಿದ್ದ ಬೃಹತ್ ಗುರಿ ಮುಟ್ಟಲು ಎಡವಿದ ಡೆಲ್ಲಿ ಕ್ಯಾಪಿಟಲ್ಸ್‌: 67 ರನ್‌ಗಳ ಸೋಲು

ಇಂದು ಅರುಣ್​ ಜೇಟ್ಲಿ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹೈವೋಲ್ಟೇಜ್​ ಪಂದ್ಯದಲ್ಲಿ ಡೆಲ್ಲಿ...