ಮಕ್ಕಳ ಪುಸ್ತಕಗಳ ಲೇಖಕಿ ವನಿತಾ ಯಾಜಿ ಸಂದರ್ಶನ | ‘ಮಕ್ಕಳಿಗೆ ಸುಲಭವಾಗಿ ಅರ್ಥವಾಗುವ ಸಾಕಷ್ಟು ವಿಷಯಗಳು ಪೋಷಕರಿಗೆ ಅರ್ಥವಾಗೋಲ್ಲ!’

Date:

ಕಲಾವಿದೆ ವನಿತಾ ಅಣ್ಣಯ್ಯ ಯಾಜಿ ಅವರ ಊರು - ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳ. ನೀನಾಸಂನಲ್ಲಿ ರಂಗಭೂಮಿ ತರಬೇತಿ ಆಗುತ್ತೆ. ನಂತರ, ಮೈಸೂರಿನ 'ಕಾವಾ' ಅಂದ್ರೆ, ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜಿನಲ್ಲಿ ಚಿತ್ರಕಲೆಯಲ್ಲಿ ಪದವಿ ಮುಗಿಸ್ತಾರೆ. ಅಲ್ಲಿಂದ ಸೀದಾ ಹೋಗಿದ್ದು ಕೊಲ್ಕತ್ತಾಗೆ. ಅಲ್ಲಿನ ವಿಶ್ವಭಾರತಿ ವಿಶ್ವವಿದ್ಯಾಲಯದಲ್ಲಿ ಚಿತ್ರಕಲೆಯನ್ನು ಅಭ್ಯಾಸ ಮಾಡ್ತಾರೆ. ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡ ಬಳಿಕ, ಒಂದಷ್ಟು ಕಾಲ ಚಿತ್ರಕಲೆಯ ಶಿಕ್ಷಕಿಯಾಗಿ ಕೆಲಸ. ಇದೀಗ ಮಕ್ಕಳ ಪುಸ್ತಕಗಳ ಲೇಖಕಿ. ಹೀಗೆ, ಅವರೇ ಹೇಳುವಂತೆ ಅವರ ಬದುಕು ಎತ್ತಣದಿಂದ ಎತ್ತಣಕ್ಕೋ ಪಯಣ. 

ಮಕ್ಕಳಿರುವ ಮನೆಯಲ್ಲಿ ಇರಲೇಬೇಕು ಅನ್ನಿಸುವಂತಿರುವ ಇವರ ಪುಸ್ತಕಗಳು ಅತ್ಯಂತ ಆಕರ್ಷಕ. ಹಾಗಾಗಿಯೇ, ಪ್ರತೀ ಪುಸ್ತಕ ಹೊರಬಂದಾಗಲೂ ವನಿತಾ ಯಾಜಿ ಸುದ್ದಿಯಲ್ಲಿರ್ತಾರೆ. ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸುವ ಜೊತೆಗೆ, ಬಣ್ಣ ಮತ್ತು ಆಕೃತಿಗಳ ಮೂಲಕ ಮಕ್ಕಳ ಜಗತ್ತನ್ನು ಹಿಗ್ಗಿಸುವ ಮಹತ್ವದ ಕೆಲಸವನ್ನು ಇವರ ಪುಸ್ತಕಗಳು ಮಾಡುತ್ತಿವೆ. ಶಾಂತಿನಿಕೇತನದಲ್ಲಿ ಕಲಿತ ಕಲಾವಿದೆ ವನಿತಾ ಅವ್ರು ಮನಸ್ಸು ಮಾಡಿದ್ದಿದ್ದರೆ, ತಾವು ಕಂಡುಕೊಂಡ ವಸ್ತ್ರ ಚಿತ್ರಕಲೆ ಮೂಲಕ ಜಗತ್ತಿನಾದ್ಯಂತ ಹೆಸರು ಮಾಡಬಹುದಿತ್ತು. ಆದರೆ, ತಮ್ಮೊಳಗಿನ ಕಲಾವಿದೆಯನ್ನು ಮಕ್ಕಳ ಪುಸ್ತಕಕ್ಕೋಸ್ಕರ ಮೀಸಲಿಟ್ಟಿರುವುದು ನಿಜಕ್ಕೂ ಶ್ಲಾಘನೀಯ. ಇಂತಹ ಅಪರೂಪದ ಕಲಾವಿದೆಯ ಆಡಿಯೊ ಸಂದರ್ಶನ ಇಲ್ಲುಂಟು.

ಪೋಸ್ಟ್ ಹಂಚಿಕೊಳ್ಳಿ:

ಈದಿನ.ಕಾಮ್ ಕೇಳುದಾಣ
ಈದಿನ.ಕಾಮ್ ಕೇಳುದಾಣ
ಬದುಕಿನ ಮೇಲಿನ ಪ್ರೀತಿ ಹೆಚ್ಚಿಸುವ ಆಡಿಯೊ-ಬರಹಗಳ ನಿಲುದಾಣ

7 COMMENTS

  1. ಪುಸ್ತಕ ತುಂಬಾ ಚೆನ್ನಾಗಿದೆ…..
    ನಿಮ್ಮ ಪ್ರಯತ್ನಕ್ಕೆ ಶುಭಾಶಯ…..

  2. ಪುಸ್ತಕ ತುಂಬಾ ಚೆನ್ನಾಗಿದೆ. ..ನಿಮ್ಮ ಮೊದಲ ಪ್ರಯತ್ನಕ್ಕೆ ಶುಭಾಶಯಗಳು👍…

  3. ನಮ್ಮೂರ ಹುಡುಗಿ ವನಿತಾ. ಸೀದಾಸಾದಾ….ಎಷ್ಟೊಂದು ಸೂಕ್ಷ್ಮ! ಒಳ್ಳೆಯ ಕಲಾವಿದೆ. ಅವಳ ಕನಸುಗಳೆಲ್ಲ ಈಡೇರಲಿ

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಂಕ್ರಾಂತಿ ವಿಶೇಷ ಆಡಿಯೊ | ನಂಜಿಲ್ಲದ ದೇವ ಬರುತ್ತಿದ್ದ ನಂಜನಗೂಡಿನಿಂದ…

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ಹೊಸ ಓದು | ಎಎಸ್‌ಜಿ ದನಿಯಲ್ಲಿ ಕೇಳಿ… ‘ಬ್ಯಾಟೆಮರ’ ಕಥಾ ಸಂಕಲನದ ಆಯ್ದ ಭಾಗ

(ಸಂಪೂರ್ಣ ಆಡಿಯೊ ಕೇಳಲು ಇಲ್ಲಿ ಕ್ಲಿಕ್ ಮಾಡಿ: ಗೂಗಲ್ ಪಾಡ್‌ಕಾಸ್ಟ್ ಅಥವಾ...

ನಮ್ ಜೀವನ | ಕಷ್ಟ ಕೋಟಲೆಯಿಂದ ಬದುಕಿನ ಬೆಳಕಿನ ದಾರಿ ತೋರಿದ ಕ್ಯಾಬ್ ಡ್ರೈವಿಂಗ್

ಈಗ 27 ವರ್ಷ, ನಾನು 19 ವರ್ಷದವನಿದ್ದಾಗಿನಿಂದ ಬೆಂಗಳೂರಿನಲ್ಲಿ ಕ್ಯಾಬ್ ಓಡಿಸುತ್ತಿದ್ದೇನೆ....