ಇಂದು ಏಷ್ಯಾಕಪ್‌ ಫೈನಲ್‌ | ಭಾರತ-ಶ್ರೀಲಂಕಾ ಹಣಾಹಣಿ

Date:

ಏಷ್ಯಾಕಪ್ 2023ರ ಫೈನಲ್ ಪಂದ್ಯವು ಇಂದು (ಸೆ 17) ನಡೆಯುತ್ತಿದ್ದು, ಶ್ರೀಲಂಕಾ ಮತ್ತು ಭಾರತ ತಂಡಗಳು ಏಷ್ಯಾಕಪ್‌ ಟೂರ್ನಿಯಲ್ಲಿ ಸೆಣಸಲಿವೆ. ಏಷ್ಯಾಕಪ್‌ ಇತಿಹಾಸದಲ್ಲಿ ನಡೆದ ಫೈನಲ್‌ ಪಂದ್ಯಗಳಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಹಲವು ಭಾರಿ ಮುಖಾಮುಖಿಯಾಗಿವೆ.

ಶ್ರೀಲಂಕಾದ ಕೊಲಂಬೊದ ಆರ್ ಪ್ರೇಮದಾಸ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3 ಗಂಟೆಗೆ ಪಂದ್ಯ ಆರಂಭವಾಗಲಿದ್ದು, ಮಧ್ಯಾಹ್ನ 2.30ಕ್ಕೆ ಟಾಸ್ ಪ್ರಕ್ರಿಯೆ ಜರುಗಲಿದೆ.

ಈಗಾಗಲೇ ಪ್ರಸಕ್ತ ಆವೃತ್ತಿಯ ಸೂಪರ್‌ ಫೋರ್‌ ಹಂತದಲ್ಲಿ ಎರಡೂ ತಂಡಗಳು ಒಂದು ಬಾರಿ ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ಭಾರತ ಕೊನೇ ಕ್ಷಣದಲ್ಲಿ ರೋಚಕ ಜಯ ದಾಖಲಿಸಿತ್ತು. ಎರಡು ತಂಡಗಳು ಇದೀಗ ಮತ್ತೊಮ್ಮೆ ಪೈಪೋಟಿಗಿಳಿಯುತ್ತಿದ್ದು, ಯಾರು ಜಯ ಗಳಿಸಲಿದ್ದಾರೆ ಎಂದು ಕ್ರೀಡಾ ಪ್ರೇಮಿಗಳು ಭಾರಿ ಉತ್ಸಾಹದಿಂದಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಏಷ್ಯಾಕಪ್‌ ಇತಿಹಾಸದಲ್ಲಿ ಶ್ರೀಲಂಕಾ 13ನೇ ಬಾರಿಗೆ ಫೈನಲ್‌ ಪಂದ್ಯವನ್ನು ಆಡುತ್ತಿದ್ದರೆ, ಭಾರತ ತಂಡವು 11ನೇ ಬಾರಿಗೆ ಏಷ್ಯಾಕಪ್‌ ಫೈನಲ್‌ ಪಂದ್ಯ ಆಡುತ್ತಿದೆ. 1984ರಲ್ಲಿ ನಡೆದ ಮೊದಲ ಏಷ್ಯಾಕಪ್‌ ಪಂದ್ಯಾವಳಿಯಲ್ಲಿ, ಭಾರತ ಹಾಗೂ ಶ್ರೀಲಂಕಾ ತಂಡಗಳು ಫೈನಲ್‌ ಪ್ರವೇಶಿಸಿದ್ದವು. ಚೊಚ್ಚಲ ಆವೃತ್ತಿಯಲ್ಲೇ ಶ್ರೀಲಂಕಾವನ್ನು ಮಣಿಸಿ ಭಾರತ ಟ್ರೋಫಿ ಜಯಿಸಿತ್ತು.

ಏಕದಿನ ಕ್ರಿಕೆಟ್‌ನಲ್ಲಿ ಉಭಯ ತಂಡಗಳ ನಡುವಿನ ಮುಖಾಮುಖಿಯಲ್ಲಿ ಭಾರತದ ಗೆಲುವು ಹೆಚ್ಚಿದ್ದು, 44 ವರ್ಷಗಳ ಸುದೀರ್ಘ ಏಕದಿನ ಇತಿಹಾಸದಲ್ಲಿ ಉಭಯ ತಂಡಗಳು ಒಟ್ಟು 166 ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ 97 ಪಂದ್ಯಗಳಲ್ಲಿ ಗೆದ್ದರೆ, ಶ್ರೀಲಂಕಾ 57 ಪಂದ್ಯಗಳನ್ನು ಮಾತ್ರ ಜಯಿಸಿದೆ. ಈ ನಡುವೆ 1 ಪಂದ್ಯ ಟೈ ಆಗಿದ್ದು, ಭಾರತದ ಗೆಲುವಿನ ಪ್ರಮಾಣ ಶೇ.58.43ರಷ್ಟಿದೆ.

ಏಷ್ಯಾಕಪ್‌ ಮುಖಾಮುಖಿ ದಾಖಲೆ

ಏಕದಿನ ಏಷ್ಯಾಕಪ್ ಇತಿಹಾಸದಲ್ಲಿ ಉಭಯ ತಂಡಗಳು ಒಟ್ಟು 22 ಬಾರಿ ಮುಖಾಮುಖಿಯಾಗಿವೆ. ಇಲ್ಲಿ ಎರಡೂ ತಂಡಗಳು ತಲಾ 11 ಬಾರಿ ಗೆದ್ದಿವೆ. ಪ್ರಸಕ್ತ ವರ್ಷದ ಟೂರ್ನಿಯಲ್ಲಿ ಸೂಪರ್‌ ಫೋರ್‌ ಪಂದ್ಯದಲ್ಲಿ ಮುಖಾಮುಖಿ ಆಗಿದ್ದಾಗ, ಭಾರತ ಗೆದ್ದಿದೆ.

ಭಾರತವೇ ಬಲಿಷ್ಠ

ಉಭಯ ತಂಡಗಳ ನಡುವಣ 8 ಫೈನಲ್‌ ಮುಖಾಮುಖಿಯಲ್ಲಿ 5 ಬಾರಿ ಭಾರತ ಜಯಿಸಿದ್ದರೆ, 3 ಬಾರಿ ಮಾತ್ರ ಶ್ರೀಲಂಕಾ ಗೆದ್ದಿದೆ. ಇದೀಗ ದಾಖಲೆಯ 9ನೇ ಬಾರಿಗೆ ಏಷ್ಯಾಕಪ್‌ ಫೈನಲ್‌ ಪಂದ್ಯದಲ್ಲಿ ಮತ್ತೊಮ್ಮೆ ಭಾರತ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗುತ್ತಿವೆ.

ಈವರೆಗೆ ನಡೆದ ಏಷ್ಯಾಕಪ್‌ನ 15 ಆವೃತ್ತಿಗಳಲ್ಲಿ ಭಾರತವು ಅತಿ ಹೆಚ್ಚು ಬಾರಿ ಏಷ್ಯಾಕಪ್ ಗೆದ್ದ ಸಾಧನೆ ಮಾಡಿದೆ. ಟೀಮ್‌ ಇಂಡಿಯಾ 7 ಬಾರಿ ಟ್ರೋಫಿ ಗೆದ್ದು, ಮೂರು ಬಾರಿ ಮಾತ್ರ ಫೈನಲ್‌ನಲ್ಲಿ ಸೋತಿದೆ. ಅತ್ತ 12 ಬಾರಿ ಫೈನಲ್‌ ಪ್ರವೇಶಿಸಿದ್ದ ಶ್ರೀಲಂಕಾ, 6 ಬಾರಿ ಚಾಂಪಿಯನ್‌ ಆಗಿ ಹೊರಹೊಮ್ಮಿದರೆ, ಉಳಿದ 6 ಬಾರಿ ಫೈನಲ್‌ನಲ್ಲಿ ಮುಗ್ಗರಿಸಿದೆ. ಅದರಲ್ಲಿ 5 ಬಾರಿ ಭಾರತದ ವಿರುದ್ಧವೇ ಸೋತಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಪಿಎಲ್ 2024 | ತಲಾ 5 ಬಾರಿ ಕಪ್‌ ಗೆದ್ದಿರುವ ಮುಂಬೈ – ಚನ್ನೈ ನಡುವೆ ಹಣಾಹಣಿ; ಎಲ್ಲರ ಚಿತ್ತ ವಾಂಖೆಡೆಯತ್ತ!

ಐಪಿಎಲ್‌ನ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್‌ (ಸಿಎಸ್‌ಕೆ) ಮತ್ತು ಮುಂಬೈ...

ಐಪಿಎಲ್ | ಕೆ ಎಲ್ ರಾಹುಲ್ ನೇತೃತ್ವದ ಲಕ್ನೋಗೆ ಸೋಲುಣಿಸಿದ ಡೆಲ್ಲಿ ಕ್ಯಾಪಿಟಲ್ಸ್‌

ಲಕ್ನೋ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಶುಕ್ರವಾರ ನಡೆದ ಐಪಿಎಲ್‌ನ 26ನೇ...

ಪ್ಯಾರಿಸ್ ಒಲಿಂಪಿಕ್ಸ್‌ನ ಭಾರತದ ಮುಖ್ಯಸ್ಥ ಸ್ಥಾನಕ್ಕೆ ಮೇರಿ ಕೋಮ್ ರಾಜೀನಾಮೆ

ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ನ ಭಾರತದ ಮುಖ್ಯಸ್ಥ ಸ್ಥಾನಕ್ಕೆ ಒಲಿಂಪಿಕ್ ಪದಕ ವಿಜೇತೆ...

ಐಪಿಎಲ್ 2024 | ಮುಂಬೈಗೆ ಭರ್ಜರಿ ಗೆಲುವು; ಆರ್‌ಸಿಬಿಗೆ 5ನೇ ಸೋಲು

ಮುಂಬೈ ಇಂಡಿಯನ್ಸ್ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ 7 ವಿಕೆಟ್​ಗಳ...