ಬೆಂಗಳೂರು | ಮಹಿಳಾ ಪ್ರಯಾಣಕಿ ಮೇಲೆ ಆಟೋ ಚಾಲಕನಿಂದ ಹಲ್ಲೆ

Date:

ಆಟೋ ಚಾಲಕನೊಬ್ಬ ಮಹಿಳಾ ಪ್ರಯಾಣಕಿ ಮೇಲೆ ಅನುಚಿತ ವರ್ತನೆ ತೋರಿ ಹಲ್ಲೆ ಮಾಡಿದ ಘಟನೆ ಬೆಂಗಳೂರಿನ ಬೆಳ್ಳಂದೂರಿನಲ್ಲಿ ನಡೆದಿದೆ.

ಜನವರಿ 20ರಂದು ಬೆಳಗ್ಗೆ 8.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಮಹಿಳೆಯೊಬ್ಬರು ಬೆಂಗಳೂರಿನ ವೈಟ್‌ಫೀಲ್ಡ್‌ ತುಬರಹಳ್ಳಿಗೆ ತೆರಳುವುದಕ್ಕೆ ಆಟೋವೊಂದನ್ನು ಬುಕ್ ಮಾಡಿದ್ದರು. ಮಹಿಳೆ ನೀಡಿದ ಸ್ಥಳಕ್ಕೆ ಆಟೋ ಬಂದ ನಂತರ ಬುಕ್ಕಿಂಗ್ ರೈಡ್ ಕ್ಯಾನ್ಸ್‌ಲ್ ಆಗಿದೆ.

ಇದಕ್ಕೆ ಜಗಳ ಆರಂಭಿಸಿದ ಆಟೋ ಚಾಲಕ ರಸ್ತೆಯಲ್ಲಿ ಮಹಿಳೆಯನ್ನು ಎಳೆದಾಡಿ ಆಕೆಯ ಜತೆಗೆ ಅನುಚಿತವಾಗಿ ವರ್ತಿಸಿದ್ದಾನೆ. ಅಲ್ಲದೇ, ಮಹಿಳೆ ಮೇಲೆ ಗುಂಡಾವರ್ತನೆ ತೋರಿ ಹಲ್ಲೆ ಮಾಡಿದ್ದಾನೆ. ಆಟೋ ಚಾಲಕ ಮಹಿಳೆ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯೊಂದರಲ್ಲಿ ಸೆರೆಯಾಗಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಈ ಸುದ್ದಿ ಓದಿದ್ದೀರಾ? ಮತದಾರರ ಜಾಗೃತಿಗೆ ವ್ಯಂಗ್ಯ ಚಿತ್ರಕಾರರ ಕಾರ್ಯಾಗಾರ ಮತ್ತು ಪ್ರದರ್ಶನ

ಮಹಿಳೆ ಬೆಂಗಳೂರಿನಲ್ಲಿ ಯಾವುದೇ ದೂರು ದಾಖಲು ಮಾಡಿಲ್ಲ. ಆದರೆ, ಆಕೆ ತನ್ನ ಸ್ನೇಹಿತನಿಂದ ಸಾಮಾಜಿಕ ಜಾಲತಾಣ ‘ಎಕ್ಸ್’ ಮೂಲಕ ಪೊಲೀಸರಿಗೆ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡ ಪೊಲೀಸರು ಸದ್ಯ ಆಟೋ ಚಾಲಕನಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಭೂ ದರೋಡೆಕೋರರಿಗೆ ಪ್ರವೇಶವಿಲ್ಲ; ಹೆಮ್ಮಿಗೆಪುರ ನಿವಾಸಿಗಳ ಸಂಕಲ್ಪ

ಭೂ ದರೋಡೆಕೋರರಿಗೆ ನಮ್ಮ ಸಮುಚ್ಚಯದೊಳಗೆ ಪ್ರವೇಶ ನೀಡುವುದಿಲ್ಲ ಎಂದು ಬೆಂಗಳೂರಿನ ಹೆಮ್ಮಿಗೆಪುರ...

ಕಲಬುರಗಿ | ದಾಖಲೆ ಇಲ್ಲದ 114.72 ಗ್ರಾಂ ಚಿನ್ನ ಹಾಗೂ 3.2 ಕೆ.ಜಿ. ಬೆಳ್ಳಿ ವಶ

ಕಲಬುರಗಿ-ಯಾದಗಿರಿ ಜಿಲ್ಲೆಯ ಗಡಿಯ ನಾಲವಾರ ಚೆಕ್ ಪೋಸ್ಟ್ ಬಳಿ ಗುರುವಾರ (ಮಾ.28)...

ತೆರಿಗೆ ಮರು ಮೌಲ್ಯಮಾಪನ ವಿರುದ್ಧದ ಕಾಂಗ್ರೆಸ್ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ತೆರಿಗೆ ಅಧಿಕಾರಿಗಳು ತಮ್ಮ ವಿರುದ್ಧ ನಾಲ್ಕು ವರ್ಷಗಳ ಅವಧಿಯ ತೆರಿಗೆ ಮರುಮೌಲ್ಯಮಾಪನ...

ಕಲಬುರಗಿ | ʼನಮ್ಮ ಮತ, ನಮ್ಮ ಭವಿಷ್ಯ, ನಮ್ಮ ದೇಣಿಗೆ’ ಅಭಿಯಾನ

ʼನಮ್ಮ ಮತ, ನಮ್ಮ ಭವಿಷ್ಯ, ನಮ್ಮ ದೇಣಿಗೆ ಅಭಿಯಾನಕ್ಕೆ ಎಲ್ಲರೂ ಕೈಜೋಡಿಸಿ...